ಕಲಬುರಗಿ: ಕೆಲ ವ್ಯತ್ಯಾಸಗಳಾಗಿದ್ದು, ಅವನ್ನ ಸರಿಪಡಿಸುತ್ತೇವೆ, ಬಿಜೆಪಿಯಲ್ಲಿ ಸರಿಪಡಿಸುವ ವ್ಯವಸ್ಥೆ ಇದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದ ಏರ್‌ಪೋಟ್೯ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಸವಕಲ್ಯಾಣ ಉಪಚುನಾವಣೆ ಬಂಡಾಯ ಕುರಿತು ಸ್ಪಷ್ಟನೆ ನೀಡಿದರು. ಮೂರು ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತೆ, ಜನ ಬಿಜೆಪಿ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಾಂಗ್ರೆಸ್ನಲ್ಲಿ ಬೆಂಕಿಯೇ ಬಿದ್ದಿದ್ದು, ಅಲ್ಲಿ ಸರಿಪಡಿಸುವ ವ್ಯವಸ್ಥೆಯೇ ಇಲ್ಲ. ನಮ್ಮಲ್ಲಿ ಹೊಗೆ ಶುರುವಾಗಿದೆ ಅಷ್ಟೇ ಎಂದು ವ್ಯಂಗ್ಯವಾಡಿದರು.
ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯನ್ನ ಸರ್ಕಾರ ರಕ್ಷಣೆ ಮಾಡ್ತಿದೆ ಅನ್ನೋ ವಕೀಲ ಜಗದೀಶ್ ಆರೋಪ ವಿಚಾರ ಕುರಿತು ಪ್ರತಿಕ್ರಿಯಿಸಿದ ಕಟೀಲ್, ಪ್ರಕರಣ ಎಸ್‌ಐಟಿ ತನಿಖೆ ಹಂತದಲ್ಲಿರುವುದರಿಂದ,ನಾನು ಏನು ಮಾತಾಡೋದಿಲ್ಲ. ಎಸ್‌ಐಟಿ ಅಧಿಕಾರಿಗಳು ಸರಿಯಾಗಿ ತನಿಖೆ ನಡೆಸುತ್ತಿದ್ದಾರೆ ಎಂದಷ್ಟೇ ಹೇಳಿದರು.
ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಗುಡುಗಿದ ಕಟೀಲ್
ಸಿದ್ದರಾಮಯ್ಯ ತಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಮತ್ತೊಂದೆಡೆ ಸಿದ್ದರಾಮಯ್ಯ ಮುಂದಿನ ಸಿಎಂ ಅಲ್ಲ, ತಾನು ಮುಂದಿನ ಸಿಎಂ ಅಂತ ಡಿ ಕೆ ಶಿವಕುಮಾರ್ ಟ್ವಿಟ್ ಮಾಡಿದ್ದಾರೆ ಎಂದು ಡಿಕೆಶಿಗೆ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಬಿಜೆಪಿ ದುಡ್ಡಿನ ಮೇಲೆ ಎಲೆಕ್ಷನ್ ಮಾಡ್ತಿದೆ ಅನ್ನೋ ಸಿದ್ದರಾಮಯ್ಯ ಹೇಳಿಕೆಗೆ ಪ್ರಕ್ರಿಯಿಸಿ, 73 ವರ್ಷದಲ್ಲಿ ಕಾಂಗ್ರೆಸ್ನವರು ಯಾವ ರೀತಿ ಎಲೆಕ್ಷನ್ ಮಾಡಿದ್ದಾರೆ ಕೇಳಿ ನೋಡಿ ಎಂದು ಹರಿಹಾಯ್ದರು.
ಇದನ್ನೂ ಓದಿ.. ಬೆಂಗಳೂರಲ್ಲಿ ಮತ್ತೆ 3 ಸಾವಿರ ಗಡಿ ದಾಟಿದ ಕೊರೊನಾ ವೈರಸ್ ಕೇಸ್