ETV Bharat / state

ನಾಳೆ ಜೆಡಿಎಸ್ ಅಭ್ಯರ್ಥಿಗಳ 2ನೇ ಲಿಸ್ಟ್ ಬಿಡುಗಡೆ: ಹೆಚ್ ಡಿ ಕುಮಾರಸ್ವಾಮಿ - ಡಿಕೆಶಿ

2018ರಲ್ಲಿ ಅವಕಾಶ ಇದ್ದಾಗ ಖರ್ಗೆ ಅವರನ್ನು ಸಿಎಂ ಮಾಡ್ಲಿಲ್ಲ, ಡಿಕೆಶಿ ಅವರು, ಈ ಬಾರಿ ಗೆದ್ದರೆ ಖರ್ಗೆ ಅವರನ್ನು ಸಿಎಂ ಮಾಡ್ತೇವಿ ಎಂದು ಹೇಳಿರೋದು ತೋರಿಕೆಗೆ ಮಾತ್ರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟೀಕಿಸಿದ್ದಾರೆ.

Former CM Kumaraswamy spoke at a press conference
ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
author img

By

Published : Apr 13, 2023, 3:56 PM IST

Updated : Apr 13, 2023, 4:09 PM IST

ಮಾಜಿ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು

ಕಲಬುರಗಿ: ಜನತಾ ಪರಿವಾರದಿಂದ ಹೊರಗೆ ಹೋದವರು ಮತ್ತೆ ವಾಪಸ್ ಬರ್ತಿದ್ದಾರೆ. ಮತ ಪರಿವರ್ತನೆ ಆಗುವಂತ ಬಲಿಷ್ಠ ಅಭ್ಯರ್ಥಿಗಳು ಸಂಪರ್ಕದಲ್ಲಿದ್ದು, ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗಲಿದೆ. ನಾಳೆ ಅನೇಕರು ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ‌ ತಿಳಿಸಿದ್ದಾರೆ. ಕಲಬುರಗಿ ಜಿಲ್ಲೆಯ ಜೆಡಿಎಸ್ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಕುಮಾರಸ್ವಾಮಿ, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು. ಉತ್ತರ ಕರ್ನಾಟಕ ಭಾಗದಿಂದ 30 ರಿಂದ 40 ಅಭ್ಯರ್ಥಿಗಳ ಗೆಲವು ಖಚಿತ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ನಾಳೆ ಎರಡನೇ ಹಂತದ ಜೆಡಿಎಸ್ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಮಾಡಲಾಗುವುದು. ನಿರಂತರವಾಗಿ ಪಕ್ಷ ಸಂಘಟನೆಗೆ ಓಡಾಡುತ್ತಿರುವುದರಿಂದ ಬಿಡುವು ಇಲ್ಲದೇ ಎರಡನೇ ಹಂತದ ಟಿಕೆಟ್ ಹಂಚಿಕೆ ಲಿಸ್ಟ್ ಬಿಡುಗಡೆ ಮಾಡಲು ಆಗಿಲ್ಲ. ನಾಳೆ ಎರಡನೇ ಲಿಸ್ಟ್ ಕೂಡಾ ಬಿಡುಗಡೆ ಮಾಡಲಾಗುವುದು. 123 ಸೀಟು ಗೆಲ್ಲವು ಯೋಜನೆಗೆ ಏನೆಲ್ಲ ಸರ್ಕಸ್ ಮಾಡ್ಬೇಕು‌ ಮಾಡ್ತಿದ್ದೇವೆ ಎಂದು ಹೇಳಿದರು.

ರಾಜ್ಯದ 123 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು ಎಂಬ ಉದ್ದೇಶ ಇರಿಸಿಕೊಂಡು ಜೆಡಿಎಸ್ ಕಾರ್ಯತಂತ್ರ ಮಾಡುತ್ತಿದೆ. ಬಿಜೆಪಿ ಅಥವಾ ಕಾಂಗ್ರೆಸ್​ಗೆ ಬಹುಮತ ಸಿಗದು. ಹೀಗಾಗಿ ಜೆಡಿಎಸ್ ಮಾತ್ರ ಪರ್ಯಾಯ ರಾಜಕೀಯವಾಗಿ ಬೆಳೆಯುತ್ತಿದೆ. ಯಾವುದೇ ಕಾರಣಕ್ಕೂ ಸಮ್ಮಿಶ್ರ ಸರ್ಕಾರ ರಾಜ್ಯದಲ್ಲಿ ಬರುವುದಿಲ್ಲ. ಬದಲಿಗೆ ಜೆಡಿಎಸ್ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ವೈಎಸ್‌ವಿ ದತ್ತಾ ಮರಳಿ ಜೆಡಿಎಸ್ ಬರ್ತಾರಾ ಎಂಬ ಪ್ರಶ್ನೆಗೆ ದತ್ತಾ ಅವರು ನನ್ನ ಜೊತೆ ಸಂಪರ್ಕದಲ್ಲಿ ಇಲ್ಲ, ಶಾಸಕರಿದ್ದಾಗ, ಪಕ್ಷದಲ್ಲಿದ್ದಾಗ ನನ್ನ ಜತೆ ಅನ್ಯೂನ್ಯತೆ ಇಲ್ಲ, ರೇವಣ್ಣ ಪ್ರಜ್ವಲ್ ಜತೆ ಅನ್ಯೂನ್ಯತೆ ಹೊಂದಿದ್ದಾರೆ. ಅವರ ಪಕ್ಷ‌ ಸೇರ್ಪಡೆ ಬಗ್ಗೆ ದೊಡ್ಡವರು ಚರ್ಚೆ ಮಾಡ್ತಾರೆ ಎಂದು ಹೇಳಿದರು.

ಜನರನ್ನು ನಂಬಿಸಲು ಖರ್ಗೆ ಸಿಎಂ ಹೇಳಿಕೆ: ಕಾಂಗ್ರೆಸ್ ಗೆಲುವು ಸಾಧಿಸಿದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡ್ತೇವಿ ಎಂಬ ಡಿಕೆ ಶಿ‌ವಕುಮಾರ ಹೇಳಿಕೆ ವಿಚಾರಕ್ಕೆ ಮಾತನಾಡಿದ ಕುಮಾರಸ್ವಾಮಿ, ಅವಕಾಶ ಸಿಕ್ಕಾಗ ಖರ್ಗೆ ಅವರನ್ನು ಸಿಎಂ ಮಾಡ್ಲಿಲ್ಲ, ಈಗ ಜನರಿಗೆ ತೋರಿಸೋದಕ್ಕೆ ಇಲ್ಲದ್ದನ್ನು ಹೇಳ್ತಿದ್ದಾರೆ ಎಂದು ಟೀಕಿಸಿದರು. 2018ರಲ್ಲಿ ದೇವೇಗೌಡರು‌ ನೇರವಾಗಿ ಹೇಳಿದ್ದರು, ಆಗ‌ ಎಲ್ಲ ಸಾಧ್ಯತೆಗಳೂ ಇದ್ದವು. ಆದರೂ ಖರ್ಗೆ ಅವರನ್ನ ಸಿಎಂ ಮಾಡ್ಲಿಲ್ಲ, ಅವಕಾಶ ಬಿಟ್ಟವರು ಈಗ ಗೆದ್ದರೆ ಸಿಎಂ ಮಾಡುತ್ತೇವೆ ಅನ್ನೋದು ಜನರಿಗೆ ಹೇಳೋದಕ್ಕೆ ಮಾತ್ರ ಎಂದು ವ್ಯಂಗ್ಯವಾಡಿದರು.

ಬಿಜೆಪಿಯಲ್ಲಿ ಇರುವವರು ಬಹಳಷ್ಟು ಜನ ಜನತಾ ಪರಿವಾರದವರು. ಜನತಾದಳದಿಂದ ರಾಜಕಾರಣ ಪ್ರವೇಶಿಸಿ ಬೆಳವಣಿಗೆ ಕಂಡಿರುವ ಕುಟುಂಬಗಳವು. ಆದ್ದರಿಂದ ಅವರೆಲ್ಲ ತಮ್ಮ ಮೂಲ ಮನೆಗೆ ವಾಪಸ್​ ಆಗಬೇಕು ಎಂದು ಕುಮಾರಸ್ವಾಮಿ ಹೇಳಿದರು. ಇದೇ ವೇಳೆ ಬಿಜೆಪಿ ಅವರ ಗುಜರಾತ್ ಮಾಡೆಲ್​ ಬಗ್ಗೆ ಏನೂ ಹೇಳುವುದಿಲ್ಲ ಎಂದರು.

ಇದನ್ನೂಓದಿ:ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ನನಗೆ ಟಿಕೆಟ್ ನೀಡಿಲ್ಲ: ಬಿ ವೈ ವಿಜಯೇಂದ್ರ

Last Updated : Apr 13, 2023, 4:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.