ಕಲಬುರಗಿ: ಮಹಾನಗರ ಪಾಲಿಕೆ ಉದ್ಯಾನವನದಲ್ಲಿರುವ ಅಕ್ರಮ ಕಟ್ಟಡಗಳನ್ನು ತೆರವುಗೋಳಿಸುವಂತೆ ಆಗ್ರಹಸಿ ಜೈ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು.
ಜೈ ಕನ್ನಡಿಗರ ರಕ್ಷಣಾ ವೇದಿಕೆ ಕಾರ್ಯಕರ್ತರು ಸಂಘಟನೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಸಚಿನ್ ಫರತಾಬಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸರಕಾರಿ ಜಾಗದಲ್ಲಿ ಖಾಸಗಿ ಕಟ್ಟಡ ನಿರ್ಮಿಸಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದ್ದರು ಕೂಡ ಕಲಬುರಗಿಯಲ್ಲಿ ಸರ್ಕಾರಿ ಜಾಗವನ್ನೆ ಒತ್ತುವರಿ ಮಾಡಿಕೊಂಡು ಹಲವಾರು ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಆರೋಪಿಸಿದರು.
ಇನ್ನು ಮಹಾನಗರ ಪಾಲಿಕೆ ಉದ್ಯಾನವನ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಖಾಸಗಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಎಂಟು-ಹತ್ತು ವರ್ಷಗಳಿಂದ ಜೈ ಕನ್ನಡಿಗರ ರಕ್ಷಣಾ ವೇದಿಕೆ ಸಂಘಟನೆ ಪ್ರತಿಭಟನೆ ಮಾಡುತ್ತಲೇ ಬಂದಿದೆ. ಆದರೆ ಎಚ್ಚೆತುಕೊಳ್ಳದ ಪಾಲಿಕೆ ಅಧಿಕಾರಿಗಳು, ಆಯುಕ್ತರು ಖಾಸಗಿ ಕಟ್ಟಡಕ್ಕೆ ಅನುಮತಿ ನೀಡಿದ್ದು, ಕೂಡಲೆ ಉದ್ಯಾನವನದಲ್ಲಿ ಅನಧಿಕೃತವಾಗಿ ನಿರ್ಮಿಸಲಾದ ಕಟ್ಟಡವನ್ನು ತೆರುವುಗೊಳಿಸಿ ಮಹಾನಗರ ಪಾಲಿಕೆ ಉದ್ಯಾನವನ ಉಳಿಸಬೇಕೆಂದು ಒತ್ತಾಯಿಸಿದರು.