ETV Bharat / state

ಭಾರತ-ಪಾಕ್​ ಯುದ್ಧ@50.. ವೈರಿ ನೆಲಕ್ಕೆ ನುಗ್ಗಿ ರುಂಡ ಚೆಂಡಾಡಿ ತಂದಿದ್ದ ಕಲಬುರಗಿಯ ಧೀರ ಯೋಧ!

author img

By

Published : Dec 19, 2021, 4:28 PM IST

Updated : Dec 19, 2021, 4:52 PM IST

1971ರ ಡಿಸೆಂಬರ್‌ನಲ್ಲಿ ಭಾರತ ಮತ್ತು ಪಾಕ್ ಯುದ್ಧ ನಡೆದು ಇಂದಿಗೆ ಬರೋಬ್ಬರಿಗೆ 50 ವರ್ಷಗಳೇ ಕಳೆದಿವೆ. ಅಂದಿನ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಭಾಗಿಯಾದ ಕಲಬುರಗಿಯ ವೀರಯೋಧ ಅಂದಿನ ಯುದ್ಧದ ಪ್ರತಿ ರೋಚಕ ಹಣಾಹಣಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ..

Indo-Pakistani War of 1971: Detailed story of great warrior kalburgi shantayya swamy
ಭಾರತ- ಪಾಕ್​ ಯುದ್ಧಕ್ಕೆ 50 ವರ್ಷ

ಕಲಬುರಗಿ : ಅಂದು ಆ ಶತ್ರು ರಾಷ್ಟ್ರದ ಯೋಧ ಭಾರತದ ಯೋಧನ ತಲೆ ಕಡಿದು ಆತನ ಸೇನಾ ನೆಲಕ್ಕೆ ತೆಗೆದುಕೊಂಡು ಹೋಗಿ ತಾನೇ ಪರಾಕ್ರಮಿ ಎಂದು ಬೀಗಿದ್ದ. ಇದರಿಂದ ಹಸಿದ ಸಿಂಹದ ಮರಿಗಳಂತಾದ ನಮ್ಮ ಭಾರತೀಯ ಯೋಧರು, ಮುಯ್ಯಿಗೆಮುಯ್ಯಿ ಎಂಬಂತೆ ಪಾಕ್ ಸೇನಾ ನೆಲಕ್ಕೆ ನುಗ್ಗಿದ್ದರು. ಅಲ್ಲಿನ ಯೋಧನ ತಲೆ ಉರುಳಿಸಿ ಶತ್ರು ರಾಷ್ಟ್ರಕ್ಕೆ ಎದುರೇಟು ನೀಡಿದ್ದ ಹೆಮ್ಮೆಯ ಆ ಭಾರತೀಯ ಯೋಧ ನಮ್ಮ ಕಲಬುರಗಿಯವರು.

ಅದು 1971ರಲ್ಲಿ ಭಾರತ ಪಾಕಿಸ್ತಾನ ನಡುವೆ ನಡೆದ ಯುದ್ಧ.1971 ಡಿಸೆಂಬರ್ ಮೂರರಂದು ಆರಂಭವಾದ ಆ ಯುದ್ಧ ಬರೊಬ್ಬರಿ 13 ದಿನಗಳ ಕಾಲ ನಡೆದಿದೆ. ಆ ಯುದ್ಧದಲ್ಲಿ ಭಾರತದ ನೂರಾರು ಯೋಧರು ಸಾವನ್ನಪ್ಪಿದ್ದರೆ, ಸಾವಿರಾರು ಯೋಧರು ಗಾಯಗೊಂಡಿದ್ದರು. ಅಷ್ಟೇ ಅಲ್ಲ, ಭಾರತದ ಸೈನಿಕರ ರುಂಡವನ್ನ ಪಾಕ್ ಸೈನಿಕರು ಕತ್ತರಿಸಿಕೊಂಡು ಹೋಗಿದ್ದರು.

ರುಂಡಕ್ಕೆ ರುಂಡವೇ ಪ್ರತ್ಯುತ್ತರವಾಗಿ ತೆಗೆದುಕೊಂಡು ಬರುವಂತೆ ಆಗಿನ ಕರ್ನಲ್ ಆರ್ಡರ್ ಮಾಡಿದ್ದರು. ಕರ್ನಲ್ ಮಾತಿನಂತೆ ಪಾಕಿಸ್ತಾನ ಗಡಿಯೊಳಗೆ ನುಗ್ಗಿದ ಕಲಬುರಗಿಯ ವೀರಯೋಧ ಪಾಕಿಸ್ತಾನ್ ಸೈನಿಕನ ರುಂಡವನ್ನ ಚೆಂಡಾಡಿ ತಂದು ಭಾರತಕ್ಕೆ ಒಪ್ಪಿಸಿದ್ದ. ಇದಾದ ನಂತರ ಪಾಕಿಸ್ತಾನ ವಿರುದ್ಧ ಭಾರತ ಯದ್ಧದಲ್ಲಿ ಗೆದ್ದು ಇಂದಿಗೆ ಬರೊಬ್ಬರಿ 50ವರ್ಷವೇ ಕಳೆದಿದೆ. ಭಾರತ ಈಗ ಗೋಲ್ಡನ್ ಜುಬ್ಲಿ ವಿಜಯೋತ್ಸವದ ಸಂಭ್ರಮದಲ್ಲಿದೆ.

ಇವರು ವೈರಿ ನೆಲಕ್ಕೆ ನುಗ್ಗಿ ರುಂಡ ಚೆಂಡಾಡಿ ತಂದಿದ್ದ ಕಲಬುರಗಿಯ ಧೀರ ಯೋಧ..

1971 ಡಿಸೆಂಬರ್‌ನಲ್ಲಿ ನಡೆದ ಭಾರತ ಮತ್ತು ಪಾಕ್ ಯುದ್ಧ ನಡೆದು ಇಂದಿಗೆ ಬರೋಬ್ಬರಿಗೆ 50 ವರ್ಷಗಳೇ ಕಳೆದಿವೆ. ಅಂದಿನ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ಯುದ್ಧದಲ್ಲಿ ಭಾಗಿಯಾದ ಕಲಬುರಗಿಯ ವೀರಯೋಧ ಅಂದಿನ ಯುದ್ಧದ ಪ್ರತಿ ರೋಚಕ ಹಣಾಹಣಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ರುಂಡ ಚೆಂಡಾಡಿದ ಕಲಬುರಗಿ ವೀರ : ಪಾಕ್ ಸೈನಿಕರು ಭಾರತದ ಮೇಲೆ ದಾಳಿ ಮಾಡೋದಕ್ಕೆ ಸಜ್ಜಾಗಿದ್ದರು. ಆ ವೇಳೆಯಲ್ಲಿಯೇ ಕಲಬುರಗಿ ಮೂಲದ ಶಾಂತಯ್ಯಸ್ವಾಮಿ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂರನೇ ಬೇಟಾಲಿಯನ್‌ನಲ್ಲಿ ಕೆಲಸ ಮಾಡ್ತಿದ್ದ ಶಾಂತಯ್ಯಸ್ವಾಮಿ ಸೇರಿದಂತೆ 18 ಜನರ ಸೈನಿಕರ ತಂಡವನ್ನ ಪಂಜಾಬ್ ಪ್ರಾಂತ್ಯದ ಕಲ್ಶನ್ಪುರಕ್ಕೆ ಕಳುಹಿಸಲಾಗಿತ್ತು.

ಆ 18 ಜನರ ಸೈನಿಕರ ತಂಡದ ಮುಖ್ಯಸ್ಥನಾಗಿ ಕಲಬುರಗಿಯ ಯೋಧ ಶಾಂತಯ್ಯಸ್ವಾಮಿ ನೇತೃತ್ವ ವಹಿಸಿಕೊಂಡಿದ್ದರು. ಡಿಸೆಂಬರ್ ಮೂರರಂದೇ ಪಾಕ್ ಸೇನೆ ಇವರ ಮೇಲೆ ದಾಳಿ ಮಾಡಿ ಭಾರತದ ಯೋಧರನ್ನ ಗಾಯಗೊಳಿಸಿತ್ತು. ಬಳಿಕ ಮಧ್ಯರಾತ್ರಿ ಮಳೆ ಬರುತ್ತಿದ್ದ ಸಂದರ್ಭದಲ್ಲಿ ಪಾಕ್ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿ ಬೆಂಗಳೂರು ಮೂಲದ ಯೋಧ ಶಂಕರ್​​ನ ತಲೆ ಕಡಿದುಕೊಂಡು ಹೋಗಿದ್ದರು.

ಪಾಕ್​ನೆಲಕ್ಕೇ ನುಗ್ಗಿ ಯೋಧನ ಆರ್ಭಟ : ಇದಾದ ನಂತರ ನಮ್ಮ ಸೈನ್ಯದ ಮುಖ್ಯಸ್ಥರು ರುಂಡದ ಬದಲಿಗೆ ರುಂಡವೆ ಬೇಕು ಅಂತಾ ಆದೇಶ ನೀಡದ ಬಳಿಕ ಶಾಂತಯ್ಯಸ್ವಾಮಿ ಮತ್ತು ಅವರ ತಂಡ ಪಾಕಿಸ್ತಾನದ ಒಳಗೆ ನುಗ್ಗಿದ್ದರು. ಆದ್ರೆ, ಪಾಕ್ ದಾಳಿಗೆ ಶಾಂತಯ್ಯ ಜೊತೆಗಿದ್ದ ಒಬ್ಬೊಬ್ಬರೇ ಯೋಧರು ಹುತಾತ್ಮರಾಗುತ್ತಿದ್ದರು.

ಆದ್ರೂ ಸ್ವಾಮಿ ಅವರು ಮಾತ್ರ ವಾಪಸ್ ಆಗದೇ ಮುನ್ನುಗ್ಗಿ ಪಾಕ್ ಸೈನಿಕರ ಟ್ಯಾಂಕರ್ ಮೇಲೆ ಬಾಂಬ್ ದಾಳಿ ಮಾಡಿ ಪಾಕ್ ಸೈನಿಕರನ್ನು ಹೊಡೆದುರುಳಿಸಿದ್ದರು. ಅಲ್ಲಿಂದ ಒಂದು ರುಂಡವನ್ನು ಭಾರತಕ್ಕೆ ತಂದರು. ಬಳಿಕ ಡಿಸೆಂಬರ್ 16ರಂದು ಪಾಕಿಸ್ತಾನದ 93 ಸಾವಿರ ಸೈನಿಕರು ಭಾರತದ ಮುಂದೆ ಮಂಡಿಯೂರಿ ಶರಣಾಗತಿಯಾಗಿದ್ದರು. ಅಲ್ಲಿಗೆ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ಗೆದ್ದು ಬೀಗಿದ್ದು ಇತಿಹಾಸ.

ಸ್ವಾಮಿಗೆ ರಾಷ್ಟ್ರಪತಿ ಪದಕ : ಕಲಬುರಗಿಯ ಶಾಂತಯ್ಯ ಸ್ವಾಮಿಗೆ ರಾಷ್ಟ್ರಪತಿ ವಿವಿ ಗಿರಿಯವರು 1972ರಲ್ಲಿ ರಾಷ್ಟ್ರಪತಿ ಪದಕ ನೀಡಿ ಗೌರವಿಸಿದ್ದರು. ಇನ್ನು 50ನೇ ವರ್ಷದ ವಿಜಯೋತ್ಸವ ಹಿನ್ನೆಲೆ ಭಾರತದಾದ್ಯಂತ ಸುವರ್ಣ ವಿಜಯ ವರ್ಷ ಅಂತಾ ಆಚರಣೆ ಮಾಡಲು ಮುಂದಾಗಿದೆ. ಅಂದಿನ ಯುದ್ಧವನ್ನ ಗೆಲ್ಲೋದಕ್ಕೆ ಕಾರಣರಾದ ಭಾರತ ಸೈನ್ಯದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರ ಯುದ್ಧದ ನೈಪುಣ್ಯತೆ ಭಾರತ ಗೆದ್ದು ಬೀಗುವಂತೆ ಮಾಡಿತ್ತು. ಹೀಗಾಗಿ, ಅಂದಿನ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿ ಮಡಿದ ಭಾರತದ ವೀರ ಯೋಧರ ಕುಟುಂಬದವರಿಗೆ ಸನ್ಮಾನ ಮಾಡುವ ಕಾರ್ಯಕ್ರಮವನ್ನು ದೇಶ್ಯಾದಂತ ಹಮ್ಮಿಕೊಳ್ಳಲಾಗಿದೆ.

Last Updated : Dec 19, 2021, 4:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.