ಕಲಬುರಗಿ: ಜಿಲ್ಲೆಯಲ್ಲಿ ಭೀಕರ ಬರಗಾಲವಿದೆ. ಜನ-ಜಾನುವಾರುಗಳು ಸಂಕಷ್ಟದಲ್ಲಿ ಸಿಲುಕಿವೆ. ಹಾಗಾಗಿ ಜಿಲ್ಲೆಗೆ ಬಂದೊದಗಿದ ಸಂಕಷ್ಠ ದೂರವಾಗಲೆಂದು ಮಹಾತಾಯಿಯೊಬ್ಬರು ದೇವಸ್ಥಾನವೊಂದರಲ್ಲಿ 11 ದಿನಗಳ ಕಾಲ ಅನ್ನ ನೀರು ಬಿಟ್ಟು ಕಠೋರ ಮೌನ ಅನುಷ್ಠಾನ ಆಚರಿಸುತ್ತಿದ್ದಾರೆ.
ಅಫಜಲಪುರ ತಾಲೂಕಿನ ಅಳ್ಳಗಿ (ಬಿ) ಗ್ರಾಮದ ಲಕ್ಷ್ಮೀ ದೇವಸ್ಥಾನದಲ್ಲಿ ಯಲ್ಲಮ್ಮದೇವಿ ಅವತಾರಣಿ ಎಂದು ಪ್ರಸಿದ್ಧರಾದ ಮಾನಂದ ಬಗಲಿ ಎಂಬವರು 11 ದಿನಗಳ ಕಾಲ ಅನುಷ್ಠಾನ ಆಚರಣೆ ಕೈಗೊಂಡಿದ್ದಾರೆ. ದನ ಕರುಗಳಿಗೆ ಕುಡಿಯಲು ನೀರಿಲ್ಲ. ಜಿಲ್ಲೆಯ ಬರಗಾಲ ದೂರವಾಗಲಿ ಎಂಬುದೇ ಇವರ ಈ ವಿಶಿಷ್ಠ ಆಚರಣೆಯ ಉದ್ದೇಶವಾಗಿದೆ.
ಕಳೆದ ಐದು ದಿನಗಳಿಂದ ಅನ್ನ ಆಹಾರವಿಲ್ಲದೆ ನಡೆಸುತ್ತಿರುವ ಬಗಲಿಯವರ ಈ ಕಠೋರ ವ್ರತಾಚರಣೆ ಜನರ ಕುತೂಹಲಕ್ಕೆ ಕಾರಣವಾಗಿದೆ.