ETV Bharat / state

ಆಹ್ವಾನವಿಲ್ಲದೇ ಜಿ20 ಶೃಂಗಸಭೆಗೆ ಹೇಗೆ ಹೋಗಲಿ: ಮಲ್ಲಿಕಾರ್ಜುನ ಖರ್ಗೆ

Mallikarjun Kharge talk: ಜೆಡಿಎಸ್​ ಐಡಿಯಾಲಜಿ ಚೇಂಜ್​ ಮಾಡಿದರೆ, ಅದರ ಬಗ್ಗೆ ನಾನು ಕಮೆಂಟ್​ ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

AICC President Mallikarjuna Kharge
ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ
author img

By ETV Bharat Karnataka Team

Published : Sep 9, 2023, 2:51 PM IST

Updated : Sep 9, 2023, 4:37 PM IST

ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ನವದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗೆ ಆಹ್ವಾನ ಇಲ್ಲದೇ ನಾನು ಹೇಗೆ ಹೋಗಲಿ ಎಂದು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಕಲಬುರಗಿ ಪ್ರವಾಸದಲ್ಲಿರುವ ಅವರು ಮಾಧ್ಯಮದವರ ಜೊತೆ ಮಾತನಾಡಿದರು.

ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿದ ಅವರು, ಇಬ್ಬರು ಒಂದಾಗಿದ್ದಾರೆ ಎಂದು ಪೇಪರ್​ನಲ್ಲಿ ನೋಡಿದೆ. ದೇವೇಗೌಡರು ಮತ್ತು ಮೋದಿ ಕೈ ಕೈ ಹಿಡಿದುಕೊಂಡಿರೋದು ನೋಡಿದ್ದೇನೆ. ಅವರಿಬ್ಬರು ಒಂದಾಗುವ ಪ್ರಯತ್ನ ಮಾಡ್ತಿದ್ದಾರೆ. ಎಷ್ಟು ಸೀಟ್ ಅವರು ಕೇಳ್ತಾರೆ ಇವರು ಎಷ್ಟು ಕೊಡ್ತಾರೆ ಅನ್ನೋದು ಇನ್ನೂ ಕ್ಲಿಯರ್ ಆಗಿಲ್ಲ. ಆದರೆ ನಮ್ಮನ್ನು ಯಾರು ಹತ್ತಿಕ್ಕುವುದಕ್ಕೆ ಆಗೋದಿಲ್ಲ. ದೇಶದಲ್ಲಿ 28 ಪಾರ್ಟಿ ಒಂದಾಗಿ ಚುನಾವಣೆ ಎದುರಿಸೋದಕ್ಕೆ ಮುಂದಾಗಿದ್ದೇವೆ. ನಾವು ಶೇ 60ರಷ್ಟು ಮತಗಳನ್ನು ಪಡೆಯಬೇಕು ಎಂದು ಲೆಕ್ಕಾಚಾರ ಇದೆ. ಇಂಡಿಯಾದ ನಾಲ್ಕನೇ ಮೀಟಿಂಗ್ ಕೂಡ ಮಾಡ್ತಿದ್ದೇವೆ. ನಾವೆಲ್ಲ ಒಂದಾಗಿ ಫೈಟ್ ಮಾಡೋದಕ್ಕೆ ಮುಂದಾಗಿದ್ದೇವೆ ಎಂದರು.

ಜೆಡಿಎಸ್ ಐಡಿಯಾಲಜಿ ಚೇಂಜ್ ಮಾಡಿದ್ರೆ ನಾನು ಕಮೆಂಟ್ ಮಾಡೋದಿಲ್ಲ. ಜೆಡಿಎಸ್ ಮೊದಲಿನಿಂದಲೂ ಸೆಕ್ಯೂಲರ್ ಅಂತಾ ಹೇಳ್ತಿದ್ದರು. ನಾನು ರಾಜಕೀಯದಲ್ಲಿ ಧರ್ಮ ತರಲು ಇಷ್ಟ ಪಡುವುದಿಲ್ಲ. ರಾಜಕೀಯ ಹಾದಿಯಲ್ಲಿ ಒಂದಾಗಿ ಪೈಟ್ ಮಾಡ್ತಿದ್ದೇವೆ. ಧರ್ಮದ ವಿಚಾರ ಬಂದಾಗ ಡಿಬೇಟ್ ಮಾಡೋಣ, ಯಾವುದು ಸರಿ, ಯಾವುದು ತಪ್ಪು, ಬಸವಣ್ಣ ಸರಿನೋ ಅಂಬೇಡ್ಕರ್ ಸರಿನೋ, ಎನ್ನುವುದರ ಬಗ್ಗೆ ಚರ್ಚೆ ಮಾಡೋಣ ಎಂದು ಹೇಳಿದರು.

ಸನಾತನ ಧರ್ಮದ ವಿಚಾರದಲ್ಲಿ ರಾಜಕೀಯ ತರಬಾರದು ಎಲ್ಲರೂ ಒಂದೇ ಎನ್ನುವ ಭಾವನೆ ಇಟ್ಕೊಂಡು ಹೋಗಬೇಕು. ಸನಾತನ ಧರ್ಮದ ಬಗ್ಗೆ ಎದುರಾಳಿಗಳಿಗೆ ತಕ್ಕ ಉತ್ತರ ಕೊಡಿ. ಪ್ರಧಾನಿ ಮೋದಿ ಹೇಳಿದ್ದಾರೆ ಅಂತೀರಲ್ಲ ಏನದರ ಅರ್ಥ? ನಾವು ಇಲ್ಲಿಯವರೆಗೆ ಈ ತರಹದ ರಾಜಕೀಯ ಮಾಡೇ ಇಲ್ಲ ಎಂದು ಮೋದಿ ವಿರುದ್ಧ ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷರ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

G20 ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ವಿರೋಧ ಪಕ್ಷದ ನಾಯಕರಿಗೆ ಆಹ್ವಾನ ನೀಡದಿರುವ ವಿಚಾರದ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಈ ರೀತಿ ಕೆಳಮಟ್ಟದ ರಾಜಕಾರಣವನ್ನು ಯಾರೂ ಕೂಡ ಮಾಡಬಾರದು. ಇಂತಹ ರಾಜಕಾರಣ ಮಾಡೋದು ಯಾರಿಗೂ ಸರಿಯಲ್ಲ. ಜಿ 20 ಸಭೆ ಸಾಮರಸ್ಯದ ಸಭೆ, ದೇಶದಲ್ಲಿ ಹಾಗೂ ಪ್ರಪಂಚದಲ್ಲಿ ಗದ್ದಲ ಇಲ್ಲದೇ ಸಾಮರಸ್ಯದಿಂದ ಇರೋದು ಒಳ್ಳೆಯದು ಎಂದು ಅವರು ಹೇಳಿದರು.

ಇದನ್ನೂ ಓದಿ : G20 ಔತಣಕೂಟಕ್ಕೆ 170 ಗಣ್ಯರಿಗೆ ರಾಷ್ಟ್ರಪತಿ ಮುರ್ಮು ಆಹ್ವಾನ: ರಾಜಕೀಯ ನಾಯಕರಿಗಿಲ್ಲ Invite..

Last Updated : Sep 9, 2023, 4:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.