ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ತಡರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯು ಹಲವೆಡೆ ಅವಾಂತರ ಸೃಷ್ಟಿಸಿದೆ. ನಗರದ ತಗ್ಗು ಪ್ರದೇಶದಲ್ಲಿರುವ ಪೂಜಾ ಕಾಲೋನಿ, ಪ್ರಶಾಂತ ನಗರ, ಖಾದ್ರಿಚೌಕ್ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
![heavy-rain-in-many-parts-of-kalaburagi](https://etvbharatimages.akamaized.net/etvbharat/prod-images/kn-klb-02-maleya-avanthara-ka10021_30082021162441_3008f_1630320881_785.jpg)
ರಸ್ತೆ ಸಂಪರ್ಕ ಕಡಿತ:
ನಿರಂತರ ಮಳೆಯಿಂದ ಜಿಲ್ಲೆಯ ಹಲವು ಸೇತುವೆಗಳು ಜಲಾವೃತಗೊಂಡಿವೆ. ಚಿಂಚೋಳಿ ತಾಲೂಕಿನ ಐನೋಳಿ, ದೇಗಲಮಡಿ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತವಾಗಿ ವಾಹನ ಸವಾರರು ಪರದಾಡುವಂತಾಗಿದೆ. ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಜಲಾಶಯದ ಎರಡು ಗೇಟ್ಗಳ ಮೂಲಕ ನದಿಗೆ ನೀರು ಹರಿಬಿಡಲಾಗಿದೆ.
ಗಂಡೊರಿ ನಾಲಾ, ಅಮರ್ಜಾ ಯೋಜನೆ, ಕೆಳದಂಡೆ ಮುಲ್ಲಾಮಾರಿ ಜಲಾಶಯಗಳಿಂದ ಸಹ ನದಿಗೆ ನೀರು ಹರಿಬಿಡಲಾಗಿದೆ. ಜಲಾಶಯದಿಂದ ನೀರು ಬಿಟ್ಟಿರುವ ಹಿನ್ನೆಲೆ ನದಿಪಾತ್ರದ ಜನರಿಗೆ ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
![heavy-rain-in-many-parts-of-kalaburagi](https://etvbharatimages.akamaized.net/etvbharat/prod-images/kn-klb-02-maleya-avanthara-ka10021_30082021162441_3008f_1630320881_61.jpg)
ಸದ್ಯ ಜಿಲ್ಲೆಯ ಹಲವೆಡೆ ವರುಣನ ಅಬ್ಬರ ಮುಂದುವರೆದಿದೆ. ಇನ್ನೂ ಎರಡು ದಿನ ಮಳೆ ಬರುವ ಸಾಧ್ಯತೆ ಇದೆ. ನಗರ ಪ್ರದೇಶದಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದು, ಮೋಡ ಕವಿದ ವಾತಾವರಣ, ಆಗಾಗ ತುಂತುರು ಮಳೆಯಿದ್ದು, ತಂಪು ಗಾಳಿ ಬೀಸುತ್ತಿದೆ.
ಇದನ್ನೂ ಓದಿ: ಪತಿ ರಾಜ್ ಕುಂದ್ರಾರಿಂದ ದೂರವಾಗಲು ಹೊರಟಿದ್ದಾರಾ ಶಿಲ್ಪಾ ಶೆಟ್ಟಿ?