ETV Bharat / state

ನಮ್ಮದು ದುಡ್ಡಿನ ರಾಜಕೀಯ ಅಲ್ಲ, ಜನ ಮನದಲ್ಲಿ ನಾಟುವಂತ ರಾಜಕೀಯ: ಹೆಚ್​.ಡಿ ದೇವೇಗೌಡ - Etv Bharat Kannada

ಕುಮಾರಸ್ವಾಮಿ ದುಡ್ಡಿನ ರಾಜಕಾರಣ ಮಾಡುತ್ತಿಲ್ಲ, ಯಾವುದೇ ಕಾರ್ಯಕ್ರಮಕ್ಕೆ ದುಡ್ಡಿನಿಂದ ಜನರನ್ನು ಕರೆತರುತ್ತಿಲ್ಲ ಎಂದು ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

Kn_klb
ಹೆಚ್​ ಡಿ ದೇವೇಗೌಡ
author img

By

Published : Dec 2, 2022, 6:59 PM IST

ಕಲಬುರಗಿ: ನಮ್ಮದು ದುಡ್ಡಿನ ರಾಜಕೀಯ ಅಲ್ಲ, ಕುಮಾರಸ್ವಾಮಿ ದುಡ್ಡಿನ ರಾಜಕಾರಣ ಮಾಡುತ್ತಾರೆ ಅನ್ನೋದಾದರೆ ಪಂಚರತ್ನ ಯಾತ್ರೆ ದುಡ್ಡಿನಿಂದ ನಡೆಯುತ್ತಿದೆಯಾ? ಒಂದು ವರ್ಷದಿಂದ ಜಲಧಾರೆ, ಪಂಚರತ್ನ ಕಾರ್ಯಕ್ರಮ ಜನರ ಮನದಲ್ಲಿ ನಾಟುವಂತ ಕಾರ್ಯಕ್ರಮ ಮಾಡುತ್ತಿದ್ದಾರೆ. ದುಡ್ಡಿನಿಂದ ಜನರನ್ನ ಕರೆ ತರುತ್ತಿಲ್ಲ ದುಡ್ಡಿನ ರಾಜಕೀಯ ಮಾಡುತ್ತಿಲ್ಲ ಎಂದು ಜೆಡಿಎಸ್ ವರಿಷ್ಠರಾದ ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಸಿದ ಅವರು, ಕಳೆದ ಬಾರಿ 25 ಸಾವಿರ ಕೋಟಿ ಸಾಲ ಮನ್ನಾ ಮಾಡುತ್ತೇನೆ ಅಂತಾ ಹೇಳಿದ್ದರು ಇದೇನು ದುಡ್ಡಿನಿಂದ ಹೇಳಿದ್ರಾ? ಎಂದರು. ಇನ್ನು ಬಿಜೆಪಿಗೆ ರೌಡಿಗಳ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಒಪ್ಪದ ಅವರು, ರೌಡಿ ರಾಜಕೀಯ ಬಗ್ಗೆ ನನಗೆ ಕೇಳ ಬೇಡಿ ಬೇರೆಯವರಿಗೆ ಕೇಳಿ ಎಂದು ಹೇಳಿದರು.

ಹೆಚ್​ ಡಿ ದೇವೇಗೌಡ ಪ್ರತಿಕ್ರಿಯೆ

ಗಡಿ ವಿವಾದದ ಪ್ರಶ್ನೆಗೆ, ಹಿಂದೆ ಜೆಡಿಎಸ್ ಯಾವ ತಿರ್ಮಾನ ಕೈಗೊಂಡಿತ್ತೋ ಅದರಂತೆ ನಡೆಯಲಿದೆ. ಗಡಿ ಬಗ್ಗೆ ಯಾವುದೆ ಮರು ಪರೀಶಿಲನೆ ಜೆಇಎಸ್ ಮಾಡಲ್ಲ ಎಂದರು. ಇನ್ನು ನಿಖಿಲ್ ಕುಮಾರಸ್ವಾಮಿ, ಭವಾನಿ ರೇವಣ್ಣ ಸ್ಪರ್ಧೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಹಾಗೆ ತೆರಳಿದರು.

ಇದನ್ನೂ ಓದಿ: ರಾಜ್ಯದ 224 ಕ್ಷೇತ್ರಗಳಲ್ಲೂ ಸ್ಪರ್ಧೆ: ಹೆಚ್ ​ಡಿ ದೇವೇಗೌಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.