ಕಲಬುರಗಿ: ಮೂರನೇ ದಿನದ ಸಂಪೂರ್ಣ ಲಾಕ್ಡೌನ್ಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳ್ಳಂ ಬೆಳಗ್ಗೆ ಕಲಬುರಗಿ ಮಹಾನಗರ ಸಂಪೂರ್ಣ ಸ್ತಬ್ಧವಾಗಿದ್ದು, ರಸ್ತೆಗಳು ಬಿಕೋ ಎನ್ನುತ್ತಿವೆ. ತರಕಾರಿ, ಹಣ್ಣು, ದಿನಸಿ ವಸ್ತುಗಳ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಹಾಲು, ಮೆಡಿಕಲ್, ಹೋಟೆಲ್ಗಳು ಸೇರಿದಂತೆ ತುರ್ತು ಮತ್ತು ಅಗತ್ಯ ವಸ್ತುಗಳ ಅಂಗಡಿಗಳು ಮಾತ್ರ ತೆರೆದಿವೆ.
ಮುಂಜಾನೆಯೇ ರಸ್ತೆಗಿಳಿದು ಸಿಟಿ ರೌಂಡ್ಸ್ ಹಾಕುತ್ತಿರುವ ಪೊಲೀಸ್ ಅಧಿಕಾರಿಗಳು, ರಸ್ತೆಗಳಲ್ಲಿ ಓಡಾಡುತ್ತಿರುವ ವಾಹನ ಸವಾರರನ್ನು ಪರಿಶೀಲನೆ ಮಾಡುತ್ತಿದ್ದಾರೆ. ಬಡಾವಣೆಗಳಲ್ಲಿ ಬೆರಳೆಣಿಕೆಯಷ್ಟು ದಿನಸಿ ಅಂಗಡಿಗಳು ತೆರೆದಿರುವುದು ಗೋಚರಿಸುತ್ತಿದೆ.