ಸೇಡಂ : ಕೊರೊನಾ ತಡೆಗೆ ತಾಲೂಕಿನ ಸಿಪಿಐ ರಾಜಶೇಖರ್ ಹಳಗೋದಿ ಮತ್ತು ಪಿಎಸ್ಐ ಸುಶೀಲ್‌ಕುಮಾರ್ ತರಕಾರಿ ವ್ಯಾಪಾರಿಗಳಿಗೆ ಹ್ಯಾಂಡ್ ಗ್ಲೌಸ್ ಮತ್ತು ಮಾಸ್ಕ್ ವಿತರಿಸಿದರು.
ಅವಶ್ಯಕ ತರಕಾರಿ ವ್ಯಾಪಾರಸ್ಥರು ಕಡ್ಡಾಯವಾಗಿ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಧರಿಸುವುದರಿಂದ ಕೊರೊನಾ ಸೋಂಕಿನಿಂದ ಪಾರಾಗಬಹುದು. ಇನ್ನೂ ಕೈಗಳನ್ನು ಶುಚಿಯಾಗಿಟ್ಟುಕೊಂಡು ವ್ಯಾಪಾರ ಮಾಡಬೇಕು ಎಂದು ಪೊಲೀಸ್ ಸಿಬ್ಬಂದಿ ಸೂಚನೆ ನೀಡಿದರು.
ತಾಲೂಕಿನ ಪ್ರತಿ ಬಡಾವಣೆಯ ನಿವಾಸಿಗಳಿಗೆ ತರಕಾರಿ ದೊರೆಯುವಂತಾಗಬೇಕು. ಬೇಡಿಕೆ ಹೆಚ್ಚಿದಂತೆ ದರ ಏರುಪೇರು ಆಗದಂತೆ ವ್ಯಾಪಾರಸ್ಥರು ಎಚ್ಚರಿಕೆ ವಹಿಸಬೇಕು ಎಂದು ಇದೇ ವೇಳೆ ಸೂಚಿಸಿದರು.