ETV Bharat / state

ಕಲಬುರಗಿ ಗಾಂಜಾ ಪತ್ತೆ ಪ್ರಕರಣ: ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು

author img

By

Published : Sep 12, 2020, 1:16 PM IST

ಗಾಂಜಾ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ, ಕರ್ತವ್ಯ ಲೋಪ ಆರೋಪದಡಿ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿದೆ.

kalburgi
ಕಲಬುರಗಿ

ಕಲಬುರಗಿ: ಜಿಲ್ಲೆಯ ಕಾಳಗಿ ಬಳಿಯ ಲಕ್ಷ್ಮಣನಾಯಕ ತಾಂಡಾದ ಕುರಿ ಫಾರ್ಮ್ ಹೌಸ್​ನಲ್ಲಿ ಪತ್ತೆಯಾದ ಅಪಾರ ಪ್ರಮಾಣದ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಳಗಿ ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್​​​ಪಿ ಸಿಮಿ ಮರಿಯಮ್ ಜಾರ್ಜ್​ ಆದೇಶ ಹೊರಡಿಸಿದ್ದಾರೆ.

ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು

ಪಿಎಸ್ಐ ಬಸವರಾಜ ಚಿತಕೋಟೆ, ಎಎಸ್ಐ ನೀಲಕಂಠಪ್ಪ ಹೆಬ್ಬಾಳ, ಮತ್ತು ಬೀಟ್ ಪೊಲೀಸ್ ಕಾನ್ಸ್​ಟೇಬಲ್​​​ಗಳಾದ ಶರಣಪ್ಪ ಹಾಗೂ ಅನಿಲ್ ಭಂಡಾರಿ ಎಂಬುವರನ್ನು ಅಮಾನತುಗೊಳಿಸಲಾಗಿದೆ. ಗಾಂಜಾ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಪೊಲೀಸ್ ಇಲಾಖೆ, ಕರ್ತವ್ಯ ಲೋಪ ಆರೋಪದಡಿ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಿದೆ. ಕಾಳಗಿ ಪಿಎಸ್ಐ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದ್ದು, ಜೊತೆಗೆ ಸಿಪಿಐ ಭೋಜರಾಜ ರಾಠೋಡ ಅಮಾನತಿಗೂ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಿರುವುದಾಗಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ತಿಳಿಸಿದ್ದಾರೆ.

ಕಾಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಲಕ್ಷ್ಮಣನಾಯಕ್ ತಾಂಡಾದ ಕುರಿ ಫಾರ್ಮ್ ಹೌಸ್​ನಲ್ಲಿ 6 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಯಾಗಿತ್ತು. ಬೆಂಗಳೂರಿನ ಶೇಷಾದ್ರಿಪುರಂ ಪೊಲೀಸರು ಭರ್ಜರಿ ಕಾರ್ಯಾಚರಣೆರ ನಡೆಸಿ ಬೃಹತ್ ಗಾಂಜಾ ಮಾಫಿಯಾ ಬಯಲಿಗೆಳೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಆರೋಪಿಗಳು ಒರಿಸ್ಸಾ ಮತ್ತಿತರ ಕಡೆಗಳಿಂದ ಗಾಂಜಾ ತಂದು ಬೆಂಗಳೂರು ಸೇರಿದಂತೆ ಹಲವೆಡೆ ಮಾರಾಟ ಮಾಡುತ್ತಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.