ETV Bharat / state

ಕಲಬುರಗಿಯಲ್ಲಿ ನಾಲ್ವರು ಕೊರೊನಾ ಸೋಂಕಿತರು ಗುಣಮುಖ: ನಿಟ್ಟುಸಿರು ಬಿಟ್ಟ ಜನತೆ

ಕೊರೊನಾ ಸೋಂಕಿನಿಂದ ಆತಂಕಗೊಂಡಿದ್ದ ಜನರು ಈಗ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಇಂದು ನಾಲ್ವರು ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ.ಶರತ್​ ತಿಳಿಸಿದ್ದಾರೆ.

corona virus are cured
ಕಲಬುರಗಿಯಲ್ಲಿ ನಾಲ್ವರು ಸೋಂಕಿನಿಂದ ಗುಣಮುಖ
author img

By

Published : May 2, 2020, 10:38 PM IST

ಕಲಬುರಗಿ: ಕೊರೋನಾ ಸೋಂಕಿನಿಂದ ಕರಾಳ ದಿನ ಎದುರಿಸುತ್ತಿದ್ದ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ. ಇಂದು ಮತ್ತೆ ನಾಲ್ಕು ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ವಾಪಸಾಗಿದ್ದಾರೆ.

Four of those who have been infected with corona virus are cured
ಕಲಬುರಗಿಯಲ್ಲಿ ನಾಲ್ವರು ಸೋಂಕಿತರು ಗುಣಮುಖ

ಈ ಮೂಲಕ ಒಟ್ಟು 18 ಕೊರೊನಾ ಸೋಂಕಿತ ರೋಗಿಗಳು ಗುಣಮುಖರಾಗಿದ್ದಾರೆ. ಈಗ ಹೊಸದಾಗಿ 5 ವರ್ಷದ ಮಗು ಸೇರಿದಂತೆ ನಾಲ್ವರು ಗುಣಮುಖರಾಗಿದ್ದಾರೆ. ನಗರದ ದರ್ಗಾ ಪ್ರದೇಶದ 10 ವರ್ಷದ ಬಾಲಕಿ (ರೋಗಿ ಸಂಖ್ಯೆ-254), ಖಾದ್ರಿ ಚೌಕ್ ಪ್ರದೇಶದ 32 ವರ್ಷದ ಯುವಕ(ರೋಗಿ ಸಂಖ್ಯೆ-314) ಹಾಗೂ ಮೋಮಿನಪುರ ಪ್ರದೇಶದ 5 ವರ್ಷದ ಮಗು(ರೋಗಿ ಸಂಖ್ಯೆ-315) ಮತ್ತು 13 ವರ್ಷದ ಬಾಲಕಿ(ರೋಗಿ ಸಂಖ್ಯೆ-392) ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಬಿ‌.ಶರತ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ‌ ಪಾಸಿಟಿವ್ ಪತ್ತೆಯಾದ 55 ಜನರಲ್ಲಿ ಒಟ್ಟು 18 ರೋಗಿಗಳು ಕೊರೊನಾ ಸೋಂಕಿನಿಂದ ಗುಣಮುಖರಾದ್ದಾರೆ. ಉಳಿದಂತೆ ಐವರು ಮೃತಪಟ್ಟಿದ್ದಾರೆ. ಉಳಿದ 32 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.