ETV Bharat / state

ತೊಗರಿ ಬೆಳೆ ಹಾನಿ.. ಪರಿಹಾರಕ್ಕೆ ಒತ್ತಾಯಿಸಿ ಕಲಬುರಗಿ ಬಂದ್​​: ಮಿಶ್ರ ಪ್ರತಿಕ್ರಿಯೆ - ಈಟಿವಿ ಭಾರತ ಕನ್ನಡ ನ್ಯೂಸ್​​

ತೊಗರಿ ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯಿಸಿ ಕಲಬುರಗಿ ಬಂದ್​ - ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ರೈತರು - ಕಲಬುರಗಿ ಬಂದ್​ಗೆ ಮಿಶ್ರ ಪ್ರತಿಕ್ರಿಯೆ - 70 ಸಾವಿರ ಹೆಕ್ಟೇರ್ ತೊಗರಿ ಬೆಳೆ ಹಾನಿ

formers-protested-against-government-at-kalburgi
ತೊಗರಿ ಬೆಳೆ ಹಾನಿ..ಪರಿಹಾರಕ್ಕೆ ಒತ್ತಾಯಿಸಿ ಕಲಬುರಗಿ ಬಂದ್​​ : ಮಿಶ್ರ ಪ್ರತಿಕ್ರಿಯೆ
author img

By

Published : Jan 17, 2023, 3:49 PM IST

Updated : Jan 17, 2023, 7:41 PM IST

ತೊಗರಿ ಬೆಳೆ ಹಾನಿ ಪರಿಹಾರಕ್ಕೆ ಒತ್ತಾಯಿಸಿ ಕಲಬುರಗಿ ಬಂದ್​​

ಕಲಬುರಗಿ : ತೊಗರಿ ನಾಡಿನಲ್ಲಿ ತೊಗರಿ ಬೆಳೆದ ರೈತರು ನೆಟೆ ರೋಗದಿಂದ ಬೆಳೆಗಳನ್ನು ಕಳೆದುಕೊಂಡಿದ್ದು, ಈ ಹಿನ್ನೆಲೆ ಪರಿಹಾರಕ್ಕೆ ಒತ್ತಾಯಿಸಿ ರೈತ ಸಂಘಟನೆಗಳು ಕಲಬುರಗಿ ಬಂದ್​ ನಡೆಸಿದವು. ಈ ಸಂದರ್ಭದಲ್ಲಿ ಬೆಳೆ ಕಳೆದುಕೊಂಡ ರೈತರಿಗೆ ನಷ್ಟ ಪರಿಹಾರ ನೀಡುವಂತೆ ರೈತಪರ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದವು.

ಕಲಬುರಗಿ ಬಂದ್​ಗೆ​ ರೈತ ಸಂಘಟನೆಗಳ ಕರೆ: ತೊಗರಿ‌ ಬೆಳೆಯನ್ನು ನಂಬಿರುವ ರೈತರ ಕಣ್ಣೀರ ಕಥೆಯನ್ನು ಯಾರೂ ಕೇಳೋರಿಲ್ಲ. ಒಂದು ಕಡೆ ಅತಿವೃಷ್ಠಿಯಿಂದ ಬೆಳೆ ಕಳೆದುಕೊಂಡ‌ ರೈತರು ಈಗ ನೆಟೆ ರೋಗದಿಂದ ಬೆಳೆ ಕಳೆದುಕೊಂಡು ಕಣ್ಣೀರು ಹಾಕುವಂತಾಗಿದೆ. ನೆಟೆ ರೋಗದಿಂದಾಗಿ ತೊಗರಿ ಬೆಳೆದ ರೈತರು ಮತ್ತೆ ಸಂಕಷ್ಟದಲ್ಲಿದ್ದು, ರೈತರ ಪರಿಹಾರಕ್ಕೆ ಇಂದು ರೈತ ಸಂಘಟನೆಗಳು ಕಲಬುರಗಿ ನಗರದಲ್ಲಿ ಪ್ರತಿಭಟನೆ ನಡೆಸಿದವು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ರೈತ ಮುಖಂಡ ಶರಣಬಸಪ್ಪ ಮಮಶೆಟ್ಟಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ, ರೈತರ ಪರ ಎಂದು ಹೇಳಿಕೊಂಡು‌ ಜನತೆಗೆ ವಂಚನೆ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಕೇವಲ ಬಂಡವಾಳ ಶಾಹಿಯಾಗಿ ವರ್ತಿಸುತ್ತಿದೆ. ನರೇಂದ್ರ ಮೋದಿ ಕೇವಲ ಅದಾನಿ ಅಂಬಾನಿ ಅವರಿಗೆ ಲಾಭ ತರುವಂತಹ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ಜನವರಿ 19 ರಂದು ಕಲಬುರಗಿಗೆ ಆಗಮಿಸುವ ಪ್ರಧಾನಿ ಮೋದಿ ಅವರೇ ತೊಗರಿ ರೈತರ ಬೆಳೆಗೆ ಪರಿಹಾರ ಎಂದು ನೀಡುತ್ತೀರಿ ಎಂದು ಆಕ್ರೋಶ ಹೊರ ಹಾಕಿದರು.

70 ಸಾವಿರ ಹೆಕ್ಟೇರ್ ತೊಗರಿ ಬೆಳೆ ಹಾನಿ :​ ಕಲಬುರಗಿ ಜಿಲ್ಲೆಯು ತೊಗರಿ ಕಣಜ ಎಂದು ಪ್ರಸಿದ್ಧಿ ಪಡೆದಿದೆ. ಕಳೆದ ಕೆಲ ತಿಂಗಳಿಂದ ಉಂಟಾದ ಅತಿವೃಷ್ಠಿಯಿಂದಾಗಿ‌ ರೈತರು ತಾವು ಬೆಳೆದ ಬೆಳೆ‌ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಇದರ ಬೆನ್ನಲ್ಲೇ ಕಲಬುರಗಿಯ ರೈತರು ತಾವು ಬೆಳೆದ ತೊಗರಿ ಬೆಳೆಗೆ ನೆಟೆ ರೋಗ ತಗುಲಿ ಬೆಳೆ ಸಂಪೂರ್ಣ ನಾಶವಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ತೊಗರಿಗೆ ಬಾಧಿಸಿದ ನಟೆರೋಗದಿಂದ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದ ತೊಗರಿ ಬೆಳೆಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.

ಜಿಲ್ಲೆಯಲ್ಲಿ ಬರೋಬ್ಬರಿ 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಬೆಳೆಯಲಾಗುತ್ತಿತ್ತು. ಈ ಬಾರಿ 4.78 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬೆಳೆಯಲಾಗಿದೆ. ಪ್ರಾಥಮಿಕ ವರದಿ ಪ್ರಕಾರ ಸುಮಾರು 70 ಸಾವಿರ ಹೆಕ್ಟೇರ್ ಪ್ರದೇಶದ ತೊಗರಿ ಬೆಳೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಯಾವುದೇ ಕ್ರಮಕೈಗೊಂಡಿಲ್ಲ. ರೈತರಿಗೆ ಪರಿಹಾರ ನೀಡದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ರೈತ ಸಂಘಟನೆಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದವು. ಬೆಳ್ಳಂಬೆಳಗ್ಗೆ 5 ಗಂಟೆಯಿಂದಲೇ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು.

ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಲಬುರಗಿ ನಗರ ಪ್ರವೇಶ ಮಾಡಲು ಅವಕಾಶ ಇಲ್ಲದ ಕಾರಣ ಸಾರಿಗೆ ಬಸ್​ಗಳಿಗೆ ರಿಂಗ್​ ರಸ್ತೆವರೆಗೆ ಸಂಪರ್ಕಕ್ಕೆ ಕಲ್ಪಿಸಲಾಗಿತ್ತು. ಇನ್ನು ನಗರದಿಂದ ಹೊರ ಜಿಲ್ಲೆಗಳಿಗೆ ಪ್ರಯಾಣ ಬೆಳೆಸುವವರಿಗೂ ತೊಂದರೆಯಾಗದಂತೆ ರಿಂಗ್ ರಸ್ತೆಯಿಂದಲೇ ಬಸ್​ ವ್ಯವಸ್ಥೆ ಕಲ್ಪಿಸಲಾಗಿತ್ತು.

ಬಂದ್​ಗೆ ಮಿಶ್ರ ಪ್ರತಿಕ್ರಿಯೆ : ಇನ್ನು ಬೆಳಗ್ಗೆಯಿಂದಲೇ ಆರಂಭವಾಗಿದ್ದ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬೆಳಗ್ಗೆ 11 ಗಂಟೆವರೆಗೆ ಮಾತ್ರ ನಗರದಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಬಳಿಕ ಎಂದಿನಂತೆ ಆರಂಭವಾಗಿತ್ತು. ಮತ್ತೊಂದೆಡೆ ಇಂದಿನ ಕಲಬುರಗಿ ಬಂದ್​ ಬಗ್ಗೆ ಪ್ರತಿಕ್ರಿಯೆ ನೀಡಿದ ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್, ರೈತರ ತೊಗರಿ ಬೆಳೆ ಪರಿಹಾರವನ್ನು ಸರ್ಕಾರ ಶ್ರೀಘ್ರದಲ್ಲೆ ನೀಡುತ್ತೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ : ರೈತಪರ ಬೇಡಿಕೆ ಈಡೇರಿಕೆಗಾಗಿ ನಾಳೆ ಕಲಬುರಗಿ ನಗರ ಬಂದ್

Last Updated : Jan 17, 2023, 7:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.