ETV Bharat / state

ಮುಂದಿನ ಎಂಎಲ್ಎ ಅರವಿಂದ ಚೌಹಾಣ್‌ ಎಂದು ಪೋಸ್ಟ್ ಹಾಕಿದ್ದ ಯುವಕನಿಗೆ ಮಾಜಿ ಶಾಸಕನಿಂದ ಆವಾಜ್..

ಈಗ ಬಂದು ಮುಂದಿನ ಎಂಎಲ್​​ಎ ಅಂತ ಹೇಳೋಕೆ ನೀನ್ಯಾರು ಎಂದು ಕೀಳು ಪದಗಳ ಪ್ರಯೋಗ ಮಾಡಿದ್ದಾರೆ. ತಮ್ಮದೇ ಪಕ್ಷದ ಯುವಕನಿಗೆ ವಾಲ್ಮೀಕಿ ನಾಯಕ ಅವರು ಈ ರೀತಿ ಆವಾಜ್ ಹಾಕಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ..

Former MLA valmiki nayaka
ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಚಿತ್ತಾಪುರ ಮಾಜಿ ಶಾಸಕ
author img

By

Published : Nov 20, 2020, 5:59 PM IST

ಕಲಬುರಗಿ: ನಮ್ಮ ಮುಂದಿನ ಎಂಎಲ್ಎ ಅರವಿಂದ ಚೌಹಾಣ್ ಎಂದು ಫೇಸ್​​ಬುಕ್​ನಲ್ಲಿ ಪೋಸ್ಟ್ ಹಾಕಿದ್ದಕ್ಕೆ, ಯುವಕನೋರ್ವನನ್ನು ಚಿತ್ತಾಪುರ ಮಾಜಿ ಶಾಸಕ ವಾಲ್ಮೀಕಿ ನಾಯಕ ಅವ್ಯಾಚ ಶಬ್ದದಿಂದ ನಿಂದಿಸಿದ ಘಟನೆ ಬೆಳಕಿಗೆ ಬಂದಿದೆ.

ರಾವೂರ್ ಗ್ರಾಮದ ನಿವಾಸಿ ಮಹಾಂತೇಶ್ ಕಿರಣಗಿ ಎಂಬ ಯುವಕ ತನ್ನ ಫೇಸ್​​ಬುಕ್ ಖಾತೆಯಲ್ಲಿ ಚಿತ್ತಾಪುರದ ಮುಂದಿನ ಎಂಎಲ್ಎ ಅರವಿಂದ ಚೌಹಾಣ್ ಎಂದು ಬರೆದುಕೊಂಡಿದ್ದಾನೆ.

ಇದರಿಂದ ಕೆಂಡಾಮಂಡಲರಾದ ಮಾಜಿ ಶಾಸಕ ವಾಲ್ಮೀಕಿ ನಾಯಕ, ಯುವಕನಿಗೆ ಕರೆ ಮಾಡಿ ಮನಬಂದಂತೆ ಅವ್ಯಾಚ ಶಬ್ದಗಳಿಂದ ಬೈಯ್ದಿದ್ದಾರೆ. ಅಲ್ಲದೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಆವಾಜ್ ಹಾಕಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಯುವಕ ನಾನು ಅರವಿಂದ್ ಚೌಹಾಣ್ ಪಿಎ ಎಂದು ಹೇಳಿದರೂ, ನೀನು ಯಾರ ಪಿಎ ಆದ್ರೂ ಆಗಿರು. ಮುಂದಿನ ಎಂಎಲ್ಎ ಅರವಿಂದ ಎಂದು ಯಾಕ್ ಪೋಸ್ಟ್ ಮಾಡಿದ್ದಿಯಾ.. ನಾವು ನಲವತ್ತು ವರ್ಷಗಳಿಂದ ದುಡಿಯುತ್ತಿದ್ದೇವೆ.

ಈಗ ಬಂದು ಮುಂದಿನ ಎಂಎಲ್​​ಎ ಅಂತ ಹೇಳೋಕೆ ನೀನ್ಯಾರು ಎಂದು ಕೀಳು ಪದಗಳ ಪ್ರಯೋಗ ಮಾಡಿದ್ದಾರೆ. ತಮ್ಮದೇ ಪಕ್ಷದ ಯುವಕನಿಗೆ ವಾಲ್ಮೀಕಿ ನಾಯಕ ಅವರು ಈ ರೀತಿ ಆವಾಜ್ ಹಾಕಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.