ಕಲಬುರಗಿ:ರಾಜ್ಯ ಸಭೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ ರೈತರನ್ನು ಅಪಮಾನ ಮಾಡುವಂತಿದೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಯುಕ್ತ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆಂದೋಲನ ಜೀವಿಗಳು, ಪರಾವಲಂಬಿಗಳು ಎನ್ನುವ ಮೋದಿ ಹೇಳಿಕೆ ಅಪಮಾನಕರವಾಗಿದೆ. ಮೋದಿ ಅವರೇ ಸ್ವತಃ ಕಾರ್ಪೋರೇಟ್ ಕಂಪನಿಗಳ ಪರಾವಲಂಬಿಗಳಾಗಿದ್ದಾರೆ ಎಂದು ಕಿಡಿಕಾರಿದರು.
ಮೋದಿ ವಿರುದ್ಧ ಮಾತನಾಡಿದರೆ ಕೊಲೆ ಬೆದರಿಕೆ:
ಮೋದಿ ವಿರುದ್ಧ ಯಾರು ಮಾತನಾಡಿದರೆ ಅವರಿಗೆ ಕೊಲೆ ಬೆದರಿಕೆಗಳು ಬರುತ್ತಿವೆ. ಮೋದಿ ವಿರುದ್ಧ ಮಾತನಾಡಿದ್ದಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಲೆ ಬೆದರಿಕೆ ಬರುತ್ತಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಂದೋಲನಗಳು, ಟೀಕೆಗಳು ಸಾಮಾನ್ಯ. ಟೀಕಿಸುವವರಿಗೆಲ್ಲ ಕೊಲೆ ಬೆದರಿಕೆ ಹಾಕುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಜನ ಪ್ರಧಾನಿ ಮೋದಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.