ETV Bharat / state

ಮಾಜಿ ಶಾಸಕ ಬಸವಂತರೆಡ್ಡಿ ಮೋತಕಪಲ್ಲಿ ನಿಧನ: ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ - Former MLA Basavantreddy Motakapalli's funeral

ಸೇಡಂನ ಮಾಜಿ ಶಾಸಕ ಬಸವಂತರೆಡ್ಡಿ ಮೋತಕಪಲ್ಲಿ ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವದೊಂದಿಗೆ ನೆರವೇರಿಸಲಾಗಿದೆ.

sedam
ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ
author img

By

Published : Jan 6, 2021, 8:42 AM IST

Updated : Jan 6, 2021, 9:37 AM IST

ಸೇಡಂ: ವಿಧಾನಸಭಾ ಕ್ಷೇತ್ರದಲ್ಲೇ ಕಂಡು ಕೇಳರಿಯದ ಸರಳ ಸಜ್ಜನಿಕೆಯ ರಾಜಕಾರಣಿ, ಎರಡು ಬಾರಿ ಶಾಸಕರಾಗಿ ಸೇಡಂ ಪ್ರತಿನಿಧಿಸಿದ ಅಜಾತ ಶತ್ರು ಮಾಜಿ ಶಾಸಕ ಬಸವಂತರೆಡ್ಡಿ ಮೋತಕಪಲ್ಲಿಯವರು ನಿಧನರಾಗಿದ್ದು, ಅವರ ಅಂತ್ಯಕ್ರಿಯೆಯನ್ನು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವದೊಂದಿಗೆ ನೆರವೇರಿಸಲಾಗಿದೆ.

ನಿಧನರಾದ ಮಾಜಿ ಶಾಸಕ ಬಸವಂತರೆಡ್ಡಿ ಮೋತಕಪಲ್ಲಿ ಅವರ ಅಂತ್ಯಕ್ರಿಯೆಯನ್ನು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವದೊಂದಿಗೆ ನೆರವೇರಿಸಲಾಗಿದೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಸವಂತರೆಡ್ಡಿ ಮೋತಕಪಲ್ಲಿ ಅವರು ತಾಲೂಕಿನ ಮೋತಕಪಲ್ಲಿ ಗ್ರಾಮದ ಅವರ ಸ್ವನಿವಾಸದಲ್ಲಿ ಸೋಮವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ತಮ್ಮ ಸರಳ ಗುಣಗಳಿಂದಲೇ ಇಡೀ ಕ್ಷೇತ್ರದಲ್ಲಿ ಮಾದರಿ ಎನಿಸಿಕೊಂಡಿದ್ದ ಅವರು ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿ, ಆರು ಜನ ಮೊಮ್ಮಕ್ಕಳಲ್ಲದೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದರು. ರಾಜ್ಯದ ಅನೇಕ ರಾಜಕಾರಣಿಗಳು ಮತ್ತು ಸಾಹಿತಿಗಳಿಗೆ ಪರಿಚಿತರಾಗಿದ್ದರು. ಜೊತೆಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರಾಗಿದ್ದರು.

ಓದಿ: ಬಸವಂತ ರೆಡ್ಡಿ ಪಾಟೀಲ್ ಮೋತಕಪಲ್ಲಿ ನಿಧನಕ್ಕೆ ಮಲ್ಲಿಕಾರ್ಜುನ್​ ಖರ್ಗೆ ಸಂತಾಪ

ಬಸವಂತರೆಡ್ಡಿ ಮೋತಕಪಲ್ಲಿಯವರ ನಿಧನ ಸುದ್ದಿ ತಿಳಿಯುತ್ತಲೇ ಅಪಾರ ಅಭಿಮಾನಿಗಳು ಮೋತಕಪಲ್ಲಿ ಗ್ರಾಮದತ್ತ ಆಗಮಿಸಿದ್ದರು. ಅವರ ನಿವಾಸದ ಬಳಿ ಮಧ್ಯಾಹ್ನದವರೆಗೂ ಪಾರ್ಥೀವ ಶರೀರದ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಇನ್ನು ಅವರ ಅಂತ್ಯಕ್ರಿಯೆ ಮೋತಕಪಲ್ಲಿ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ನಡೆದಿದ್ದು, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪೊಲೀಸ್ ಗೌರವದೊಂದಿಗೆ ನೆರವೇರಿಸಲಾಗಿದೆ.

ಇನ್ನು ನಿಧನರಾದ ಬಸವಂತರೆಡ್ಡಿ ಮೋತಕಪಲ್ಲಿ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಡಾ. ಉಮೇಶ ಜಾಧವ್​​​ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Last Updated : Jan 6, 2021, 9:37 AM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.