ಕಲಬುರಗಿ: ಚಿತ್ತಾಪುರ ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಪ್ರಚಾರ ಭಾಷಣದಲ್ಲಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ಬಾಬುರಾವ್ ಚಿಂಚಿನಸೂರ ತೊಡೆ ತಟ್ಟಿ ಗುಡುಗಿದ್ದಾರೆ.
ಇಂದು ಪ್ರಚಾರದ ನಿಮಿತ್ತ ಸಾಲಹಳ್ಳಿ ಗ್ರಾಮಕ್ಕೆ ಆಗಮಸಿದ್ದ ವೇಳೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸ್ಪರ್ಧಿಸಿ ಮಾತನಾಡುವ ಗಂಡು ಯಾರು ಇರಲಿಲ್ಲ. ಡಾ. ಉಮೇಶ್ ಜಾಧವ್ ನಿಜವಾದ ಗಂಡು. ಖರ್ಗೆ ವಿರುದ್ಧ ತೊಡೆ ತಟ್ಟಿ ಅಖಾಡಕ್ಕೆ ಧುಮುಕಿದ್ದಾರೆ ಎಂದು ತಾವೂ ತೊಡೆ ತಟ್ಟಿ ಚಿಂಚನಸೂರ ಗುಡುಗಿದ್ರು.
ಮೇ 23ರ ನಂತರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಸ್ಫೋಟ ಆಗಲಿದೆ. ಈಗ ಚಿಂಚೋಳಿಗೆ ಕಾರುಗಳಲ್ಲಿ ಬರುತ್ತಿರುವ ಎಲ್ಲರೂ ಮಾಜಿಗಳಾಗುತ್ತಾರೆ. ಮೇ 23ರ ಬಳಿಕ ಕಾಂಗ್ರೆಸ್ ಮೂರು ಹೋಳಾಗಲಿದೆ. ಒಂದು ಸಿದ್ದರಾಮಯ್ಯ ಗುಂಪು, ಇನ್ನೊಂದು ಡಿ.ಕೆ.ಶಿವಕುಮಾರ್ ಗುಂಪು, ಮತ್ತೊಂದು ಪರಮೇಶ್ವರ್ ಗುಂಪು ಎಂದು ಭವಿಷ್ಯ ನುಡಿದರು.