ETV Bharat / state

ಕಲಬುರಗಿ ವಿಮಾನ ನಿಲ್ದಾಣಕ್ಕೆ 6 ಕೋಟಿ ರೂ. ಮೌಲ್ಯದ ಅಗ್ನಿಶಾಮಕ ವಾಹನ ಸೇರ್ಪಡೆ - ಕಲಬುರಗಿ ವಿಮಾನ ನಿಲ್ದಾಣ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 6 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಟ್ರಿಯಾ ದೇಶದಿಂದ ರೊಸೆನ್ ಬೌರ್ (ROSENBAUER) ಎಂಬ ವೊಲ್ವೋ ಕಂಪೆನಿಯ ಈ ಅಗ್ನಿಶಾಮಕ ವಾಹನವನ್ನು ಖರೀದಿಸಿ ತಂದಿದೆ. ಅತಿಹೆಚ್ಚು ಉಷ್ಣಾಂಶ, ಶೀತ, ಆರ್ದ್ರತೆ, ಹೊಗೆ, ಧೂಳುಮಯದಂತಹ ಪ್ರತಿಕೂಲ ವಾತಾವರಣದಲ್ಲಿಯೂ ಈ ಅಗ್ನಿಶಾಮಕ ವಾಹನ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ಇದನ್ನು ಕಲಬುರಗಿ ಇಲ್ಲಿನ ವಿಮಾನ ನಿಲ್ದಾಣಕ್ಕೆ ಹಸ್ತಾಂತರಿಸಲಾಗಿದೆ.

fire engine vehicle  to Kalaburagi Airport
ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಗ್ನಿಶಾಮಕ ವಾಹನ
author img

By

Published : Aug 1, 2020, 8:06 PM IST

ಕಲಬುರಗಿ: ಇಲ್ಲಿನ ವಿಮಾನ ನಿಲ್ದಾಣಕ್ಕೆ ಅತ್ಯಾಧುನಿಕ ತಂತ್ರಜ್ಞಾನವುಳ್ಳ 6 ಕೋಟಿ ರೂಪಾಯಿ ಮೌಲ್ಯದ ಅಗ್ನಿಶಾಮಕ ವಾಹನ ಸೇರ್ಪಡೆಯಾಗಿದೆ. ಕಲಬುರಗಿ ಲೋಕಸಭಾ ಸದಸ್ಯರಾದ ಡಾ.ಉಮೇಶ್ ಜಾಧವ್​, ಇಂದು ವಿಮಾನ ನಿಲ್ದಾಣದ ಸೇವೆಗೆ ಇದನ್ನು ಸಮರ್ಪಣೆ ಮಾಡಿದರು.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 6 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಟ್ರಿಯಾ ದೇಶದಿಂದ ರೊಸೆನ್ ಬೌರ್ (ROSENBAUER) ಎಂಬ ವೊಲ್ವೋ ಕಂಪೆನಿಯ ಈ ಅಗ್ನಿಶಾಮಕ ವಾಹನವನ್ನು ಖರೀದಿಸಿ ತಂದಿದೆ. ಅತಿಹೆಚ್ಚು ಉಷ್ಣಾಂಶ, ಶೀತ, ಆರ್ದ್ರತೆ, ಹೊಗೆ, ಧೂಳುಮಯದಂತಹ ಪ್ರತಿಕೂಲ ವಾತಾವರಣದಲ್ಲಿಯೂ ಈ ಅಗ್ನಿಶಾಮಕ ವಾಹನ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ.

ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ ಸಂಪೂರ್ಣ ಸ್ವಯಂಚಾಲಿತ ವಾಹನ ಇದಾಗಿದ್ದು, ಗರಿಷ್ಠ 121 ಕಿಲೋಮೀಟರ್ ವೇಗದಲ್ಲಿ ಚಲಿಸಲಿದೆ. ಅಗ್ನಿ ಅವಘಡ ಸಂಭವಿಸಿದಾಗ 65 ಮೀಟರ್ ದೂರದವರೆಗೆ ನೀರು ಚಿಮುಕಿಸುವ ಶಕ್ತಿ ಇದಕ್ಕಿದೆ. ಟ್ಯಾಂಕರ್ 6,000 ಲೀಟರ್ ನೀರು ಸಂಗ್ರಹದ ಸಾಮರ್ಥ್ಯ ಹೊಂದಿದ್ದು, ಕಾರ್ಯಾಚರಣೆ ವೇಳೆ ಕೆಲವೇ ನಿಮಿಷಗಳಲ್ಲಿ 3,000 ಲೀಟರ್ ಹೊರಚಿಮ್ಮಿಸಿ, ಬೆಂಕಿಯ ಜ್ವಾಲೆಗಳನ್ನು ಶಮನಗೊಳಿಸಲಿದೆ. 800 ಲೀಟರ್ ನೊರೆ ( ರಾಸಾಯನಿಕ ಮಿಶ್ರಿತ) ಟ್ಯಾಂಕನ್ನು ಕೂಡ ಒಳಗೊಂಡಿದೆ. ಅಂದರೆ ತೈಲಗಾರ, ವಿಮಾನ ನಿಲ್ದಾಣಗಳಂತಹ ಸ್ಥಳಗಳಲ್ಲಿ ಅತಿವೇಗವಾಗಿ ವ್ಯಾಪಿಸುವ ಬೆಂಕಿಯನ್ನು ನಂದಿಸಲು ಬಳಸುವ ನೊರೆ ಇದಾಗಿದೆ. ಒಮ್ಮೆಗೆ ಇಡೀ ಅಗ್ನಿ ಅವಘಡ ಪ್ರದೇಶವನ್ನು ನಿಯಂತ್ರಿಸುವ ಹಾಗೂ ವಿಮಾನದ ರನ್ ವೇಗಳಲ್ಲಿ ಚಲಿಸುತ್ತಲೇ ಕಾರ್ಯಾಚರಿಸುವಂತಹ ಆನೆಬಲ ಇದಕ್ಕಿದೆ ಎಂದು ಸಂಸದ ಡಾ.ಉಮೇಶ್ ಜಾಧವ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.