ಕಲಬುರಗಿ: ದೇವಸ್ಥಾನಕ್ಕೆ ತೆರಳುವ ರಸ್ತೆ ನಿರ್ಮಾಣ ವಿಚಾರದಲ್ಲಿ ದೇವಸ್ಥಾನ ಪೂಜಾರಿ ಮತ್ತು ಟ್ರಸ್ಟ್ನ ಸದಸ್ಯರು ಪರಸ್ಪರ ಹೊಡೆದಾಡಿಕೊಂಡ ಘಟನೆ ಚಿತ್ತಾಪುರ ತಾಲೂಕಿನ ದಂಡಗುಂಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದಿದೆ.
ದೇವಸ್ಥಾನದ ಪೂಜಾರಿ ವಿದ್ಯಾಧರ್ ಮಾಲೀಕತ್ವದ ಸ್ಥಳವನ್ನು ದೇವಸ್ಥಾನದ ಟ್ರಸ್ಟ್ ರಸ್ತೆ ನಿರ್ಮಾಣ ಮಾಡಲು ಖರೀದಿಸಿತ್ತು. ಇಂದು ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಕರೆಯಲಾಗಿತ್ತು. ಈ ವೇಳೆ ಹಣ ಕೊಡುವ ವಿಚಾರದಲ್ಲಿ ವಿದ್ಯಾಧರ್ ಮತ್ತು ಟ್ರಸ್ಟ್ನ ಸದಸ್ಯ ಮಹಾಂತಗೌಡ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದ ನಂತರ ಎರಡೂ ಕಡೆಯವರು ಪರಸ್ಪರ ಕೈ ಮಿಲಾಯಿಸಿದ್ದಾರೆ. ಚಪ್ಪಲಿಯಿಂದ ಹೊಡೆದಾಡಿಕೊಂಡಿದ್ದಾರೆ.
ವಿಶೇಷ ಅಂದ್ರೆ, ಟ್ರಸ್ಟ್ ಮುಖ್ಯಸ್ಥರು ಆಗಿರುವ ಎಂಎಲ್ಸಿ ಬಿ.ಜಿ.ಪಾಟೀಲ್ ಎದುರಿಗೆ ಇಷ್ಟೊಂದು ಗಲಾಟೆ ನಡೆದಿದೆ. ಸ್ವತಃ ಬಿ.ಜಿ.ಪಾಟೀಲ್ ಎರಡೂ ಕಡೆಯವರನ್ನು ತಡೆದರು. ಸುಮಾರು ಹೊತ್ತು ಪರಸ್ಪರ ಹೊಡೆದಾಡುವುದನ್ನು ಬಿಟ್ಟಿಲ್ಲ. ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ: ಬೆನ್ನು ನೋವು ಹಿನ್ನೆಲೆ ಮತ್ತೆ ಮನೆಗೆ ಮರಳಿದ ಸಿದ್ದರಾಮಯ್ಯ