ETV Bharat / state

ಕಲಬುರಗಿ: ಸಾಲಬಾಧೆಗೆ ಮತ್ತೋರ್ವ ರೈತ ಬಲಿ

ತೊಗರಿ ನಾಡು ಎಂದು ಖ್ಯಾತಿ ಪಡೆದಿರುವ ಕಲಬುರಗಿಯ ರೈತ ಸಾಲ ಬಾಧೆಯಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

farmer-succumbed-to-debt-committed-suicide-by-jumping-into-a-well
ಕಲಬುರಗಿ: ಸಾಲಬಾಧೆಗೆ ಮತ್ತೋರ್ವರೈತ ಬಲಿ...ತಾವೇ ತೆಗೆಸಿದ ಬಾವಿಗೆ ಹಾರಿ ಆತ್ಮಹತ್ಯೆ
author img

By

Published : Dec 19, 2022, 9:54 PM IST

ಕಲಬುರಗಿ: ಜಿಲ್ಲೆಯಲ್ಲಿ ಸಾಲಬಾಧೆಯಿಂದ ಬೇಸತ್ತ ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಅಫಜಲಪೂರ ತಾಲೂಕಿನ‌ ಅವರಾದ ಗ್ರಾಮದಲ್ಲಿ ನಡೆದಿದೆ.‌

ಜಟೆಪ್ಪ ಕಾಂಬಳೆ (60) ಆತ್ಮಹತ್ಯೆಗೆ ಶರಣಾಗಿರುವ ರೈತ. ಅವರಾದ ಗ್ರಾಮದಲ್ಲಿ ಮೃತ ಜೆಟ್ಟೆಪ್ಪ ಅವರಿಗೆ ಸೇರಿದ್ದ 2.25 ಎಕರೆ ಜಮೀನಿದ್ದು, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಬ್ಯಾಂಕ್ ನಲ್ಲಿ ₹1.60 ಲಕ್ಷ, ಡಿಸಿಸಿ ಬ್ಯಾಂಕ್‌ನಲ್ಲಿ ₹50 ಸಾವಿರ, ಖಾಸಗಿಯಾಗಿ ₹50 ಸಾವಿರ ಸೇರಿ ಸುಮಾರು 2 ಲಕ್ಷದ 60 ಸಾವಿರ ಸಾಲವನ್ನು ಕೃಷಿಗಾಗಿ ಪಡೆದುಕೊಂಡಿದ್ದರು ಎಂದು ಮೃತ ರೈತನ ಮಗ ಶರಣಪ್ಪ ಕಾಂಬಳೆ ದೂರಿನಲ್ಲಿ ವಿವರಿಸಿದ್ದಾರೆ.

ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರತಿಕೂಲ ಹವಮಾನದಿಂದ, ಮೇಲಾಗಿ ಈ ವರ್ಷ ತೊಗರಿಗೆ ನೆಟೆ ರೋಗ ಅಂಟಿದ ಪರಿಣಾಮ ರೈತ ಜೆಟ್ಟೆಪ್ಪ ಬೆಳೆದ ಬೆಳೆ ಹಾನಿಯಾಗಿದೆ. ಇದರಿಂದಾಗಿ ಸಾಲ ಮರುಪಾವತಿ ಮಾಡಲಾಗದೆ ನೊಂದಿದ್ದ ರೈತ, ತಮ್ಮ ಹೊಲದಲ್ಲಿ ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಶವವನ್ನು ಬಾವಿಯಿಂದ ಹೊರತೆಗೆದಿದ್ದಾರೆ. ಈ ಕುರಿತು ರೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದಲ್ಲಿಯೇ ಅತಿ ಹೆಚ್ಚಾಗಿ ತೊಗರಿ ಬೆಳೆಯುವ ಕಲಬುರಗಿ ಜಿಲ್ಲೆಯಲ್ಲಿ ಈ ಬಾರಿ ನೆಟೆ ರೋಗ ಅಂಟಿ ಬಹುತೇಕ ರೈತರು ಬೆಳೆದ ತೊಗರಿ ಬೆಳೆ ಹಾನಿಯಾಗಿದೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಕೆಲಸ ಮಾಡಬೇಕು. ಈ ಬಗ್ಗೆ ಪ್ರತಿಪಕ್ಷಗಳು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತಬೇಕೆಂದು ಸ್ಥಳೀಯ ರೈತ ಮುಖಂಡರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮೆಸ್ಕಾಂ ನಿರ್ಲಕ್ಷ್ಯ ಆರೋಪ: ವಿದ್ಯುತ್ ತಂತಿ ತುಳಿದು ರೈತ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.