ಸೇಡಂ: ಬೆಂಗಳೂರಿಂದ ತಾಲೂಕಿನ ರಂಜೋಳ ಗ್ರಾಮಕ್ಕೆ ಮರಳಿದ ಇಬ್ಬರು ಯುವಕರು ಕೊರೊನಾ ಸೋಂಕಿತರಲ್ಲ, ಜಿಲ್ಲಾ ಗಡಿಯಲ್ಲಿ ಪರೀಕ್ಷಿಸಿ, ಕೈಗೆ ಸೀಲ್ ಹಾಕಲಾಗಿದೆ ಅಷ್ಟೇ ಎಂದು ಪಿಎಸ್ಐ ಸುಶೀಲಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಂಜೋಳ ಗ್ರಾಮದ ಇಬ್ಬರು ಯುವಕರು ಬೆಂಗಳೂರಿನಿಂದ ಸೇಡಂಗೆ ಬೈಕ್ ಮೂಲಕ ವಾಪಸ್ ಬಂದಿದ್ದರು. ಇವರ ಕೈನಲ್ಲಿ ಸೀಲ್ ಹಾಕಿದ್ದನ್ನನು ಗಮನಿಸಿ ಇವರಿಗೆ ಕೊರೊನಾ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ್ದರು.
ಈ ಹಿನ್ನೆಲೆ ಯುವಕರ ಹಳ್ಳಿಗೆ ಭೇಟಿ ನೀಡಿರುವ ಪಿಎಸ್ಐ ಅಲ್ಲಿನ ಜನರಿಗೆ ಯುವಕರ ಬಗ್ಗೆ ಮಾಹಿತಿ ನೀಡಿದ್ದಾರೆ. ಯುವಕರಿಬ್ಬರೂ ವೈದ್ಯಕೀಯ ತಪಾಸಣೆಗೆ ಒಳಗಾಗಿದ್ದಾರೆ. ಅವರಿಗೆ ಯಾವುದೇ ಕಾಯಿಲೆ ಇಲ್ಲ ಎಂದು ಹೇಳಿದ್ದಾರೆ.