ETV Bharat / state

ಕಲಬುರಗಿ: ಹೆತ್ತವರ ಪಾದಪೂಜೆ ನೆರವೇರಿಸಿ ಭಾವುಕರಾದ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು

author img

By ETV Bharat Karnataka Team

Published : Sep 23, 2023, 6:12 PM IST

ಮಕ್ಕಳ ಮಾತುಗಳಿಗೆ ಕಣ್ಣಂಚಲಿ ನೀರು ತುಂಬಿದ ಪೋಷಕರು, ಮಕ್ಕಳನ್ನು ತಬ್ಬಿಕೊಂಡು ಆಶೀರ್ವದಿಸಿದರು.

Engineering students performed their parents Pada Puja
ಹೆತ್ತವರ ಪಾದಪೂಜೆ ನೆರವೇರಿಸಿ ಭಾವುಕರಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳು

ಕಲಬುರಗಿ: ಮೊಬೈಲ್ ಗೀಳಿನಿಂದ ಹೆತ್ತವರೊಂದಿಗೆ ಮಕ್ಕಳು‌ ಮಾತನಾಡುವುದೇ ಕಡಿಮೆ. ಹೆತ್ತವರ ಮಾತು ಕೇಳದೆ ಸದಾ ತಂದೆ ತಾಯಿ ಮನಸ್ಸು ನೋಯಿಸೋದು ಪ್ರತಿ‌ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಮಕ್ಕಳು ಯೌವನಕ್ಕೆ ಬರುತ್ತಿದ್ದಂತೆ ತಾವೇ ಶ್ರೇಷ್ಠ ಎಂದುಕೊಂಡು ಹೆತ್ತವರ ಕಣ್ಣೀರಿಗೆ ಕಾರಣರಾಗುತ್ತಾರೆ. ಇಂತಹ ಇಂದಿನ‌ ದಿನಮಾನಗಳಲ್ಲಿ ಶರಣಬಸವ ವಿಶ್ವವಿದ್ಯಾಲಯದಲ್ಲಿ ವಿಶಿಷ್ಠವಾದ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿತ್ತು.

ಪಾಲಕರು ಮತ್ತು ಮಕ್ಕಳು ಪ್ರತಿನಿತ್ಯ ಮನೆಯಲ್ಲಿ ಪರಸ್ಪರ ಭೇಟಿಯಾಗುತ್ತಾರೆ. ಆದರೆ ಇಂದು ಶರಣಬಸವ ವಿಶ್ವವಿದ್ಯಾಲಯದಲ್ಲಿ ಭೇಟಿಯಾಗಿದ್ದು ಬಹಳ ವಿಶೇಷ. ಶರಣಬಸವ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಶ್ರದ್ಧಾಭಕ್ತಿಯಿಂದ ತಂದೆ ತಾಯಿಗಳ ಪಾದಪೂಜೆ ನೇರವೇರಿಸಿ ಗಮನ ಸೆಳೆದರು.‌ ಶರಣಬಸವ ವಿಶ್ವವಿದ್ಯಾಲಯದ ದೊಡ್ಡಪ್ಪ ಅಪ್ಪ ಸಭಾಮಂಟಪದಲ್ಲಿ, ಮೊದಲ ವರ್ಷ ಪ್ರವೇಶ ಪಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ತಮ್ಮ ತಂದೆ ತಾಯಿಗಳಿಗೆ ಏರ್ಪಡಿಸಿದ್ದ ಪಾದಪೂಜೆ ಕಾರ್ಯಕ್ರಮದಲ್ಲಿ ಗಮನ ಸೆಳೆಯುವ ದೃಶ್ಯಗಳು ಕಂಡುಬಂದವು.

ತಂದೆ ತಾಯಿಯ ಪಾದಪೂಜೆಯ ಕಾರ್ಯಕ್ರಮದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ತಂದೆ ತಾಯಿಯ ಪಾದ ಮಾಡಿದರು. ಭಾವುಕರಾಗಿ ಅಪ್ಪಿಕೊಂಡು ಹಿಂದೆ ತಿಳಿಯದೇ ನಡೆದ ತಪ್ಪಿಗೆ ಕ್ಷಮಿಸಿ ಎಂದು ಭಾವುಕರಾದರು. ಇನ್ನೊಮ್ಮೆ ಯಾವುದೇ ರೀತಿಯ ನೋವು ಕೊಡುವುದಿಲ್ಲ, ಸರಿಯಾಗಿ ಅಭ್ಯಾಸ ಮಾಡುತ್ತೇವೆಂದು ಕಾಲಿಗೆರಗಿದರು. ಆಗ ಹೆತ್ತ ಕರುಳುಗಳ ಕಣ್ಣಂಚಿನಲ್ಲಿ ನೀರು ತುಂಬಿತ್ತು. ಹೆತ್ತವರೂ ಮಕ್ಕಳನ್ನು ಅಪ್ಪಿಕೊಂಡು ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ಅವರ ತಂದೆತಾಯಂದಿರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಮೋಟಿವೇಶನಲ್ ಸ್ಪೀಕರ್ ಸತೀಶ್ ಆರ್ ಅವರು ಮಕ್ಕಳಿಗೆ ಪಾದಪೂಜೆಯ ವಿಧಿವಿಧಾನಗಳನ್ನು ಹೇಳಿಕೊಟ್ಟರು. ತಾಯಿಗೆ ಮಮ್ಮಿ ಎನ್ನದೆ ಅಮ್ಮಾ ಎಂದು ಕರೆಯಬೇಕೆಂದು ಮನವರಿಕೆ ಮಾಡಿಕೊಟ್ಟರು. ನಂತರ ಅಧ್ಯಾಪಕ ವೃಂದಕ್ಕೆ ವಿದ್ಯಾರ್ಥಿಗಳು ಪಾದಪೂಜೆ ಸಲ್ಲಿಸಿದರು.

ಹೆತ್ತವರ ಪಾದಪೂಜೆ ನೆರವೇರಿಸಿ ಭಾವುಕರಾದ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು

ವಿವಿಧ ವಿಭಾಗಗಳ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಕಾರ್ಯಕ್ರಮ‌ ಆಯೋಜಿಸಿ ಪೋಷಕರೊಂದಿಗೆ ಭಾವನಾತ್ಮಕ ಬೆರೆಯುವಂತೆ ಮಾಡಿದ ಶರಣಬಸವ ವಿಶ್ವವಿದ್ಯಾಲಯ ಹಾಗೂ ಅಧ್ಯಾಪಕ ವೃಂದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಶರಣಬಸವ ವಿಶ್ವವಿದ್ಯಾಲಯದಲ್ಲಿ ತಮ್ಮ ಮಕ್ಕಳಿಗೆ ಪ್ರವೇಶ ಪಡೆದಿದ್ದು ನಮ್ಮ ಅದೃಷ್ಟ, ಅಧ್ಯಯನಕ್ಕಾಗಿ ಮಕ್ಕಳು ಕಾಲೇಜಿಗೆ ಬಂದರೂ ಜೊತೆಯಲ್ಲಿ ಅವರು ಸಂಸ್ಕೃತಿಯನ್ನು ಕಲಿಯುತ್ತಾರೆಂದು ಪೋಷಕರು ಸಂತೋಷ ವ್ಯಕ್ತಪಡಿಸಿದರು.

ಪೋಷಕರು ಮಕ್ಕಳು ಭಾವನಾತ್ಮಕವಾಗಿ ಬೆರೆತು ಸಂಭ್ರಮಿಸಿದ ಕ್ಷಣವಾಗಿತ್ತು. ಪ್ರತಿ ಕಾಲೇಜುಗಳಲ್ಲಿ ಇಂತಹ ಸಂಸ್ಕೃತಿ ಬೆಳೆಸಿದರೆ ಆಧುನಿಕ ಭರಾಟೆಯಲ್ಲಿ ಮರೆಯಾಗುತ್ತಿರುವ ಹಿರಿಯರ ಮೇಲಿನ ಗೌರವ ಪ್ರೀತಿ ಹೆಚ್ಚಾಗಲಿದೆ ಎನ್ನುವ ಮಾತುಗಳು ಪೋಷಕರಿಂದ ಕೇಳಿಬಂದವು. ಈ ಸಂದರ್ಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ್​ ಕುಮಾರ್​ ಬಿಡವೆ, ವಿವಿಯ ಡೀನ್ ಡಾ. ಲಕ್ಷೀ ಪಾಟೀಲ್ ಮಾಕಾ, ವಿವಿಯ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯ ಡೀನ್ ಡಾ. ಶಿವಕುಮಾರ್​ ಜವಳಗಿ ಸೇರಿದಂತೆ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಇದನ್ನೂ ಓದಿ : ಶಾಲೆಯಲ್ಲಿ ತಂದೆ ತಾಯಿ ಪಾದ ಪೂಜೆ ಮಾಡಿದ ಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.