ETV Bharat / state

ಸಿದ್ದರಾಮಯ್ಯ ಮಾಡಿದ ಒಳ್ಳೆ ಕೆಲಸ ಮುಂದುವರೆಸುತ್ತೇವೆ, ಕೆಟ್ಟ ಕೆಲಸ ಕೈ ಬಿಡುತ್ತೇವೆ: ಸಚಿವ ಬಿ.ಸಿ.ನಾಗೇಶ್ - ಕಲಬುರಗಿ ಜಿಲ್ಲೆ

ರಾಜ್ಯದಲ್ಲಿ ವಿದ್ಯಾಸಿರಿ ಯೋಜನೆಯನ್ನು ನಾವು ನಿಲ್ಲಿಸಿಲ್ಲ, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಸಿದ್ದರಾಮಯ್ಯನವರು ಮಾಡಿದ್ದ ಒಳ್ಳೆ ಕೆಲಸಗಳನ್ನು ಮುಂದುವರೆಸುತ್ತೇವೆ. ಅದೇ ರೀತಿ ಅವರು ಮಾಡಿರುವ ಕೆಲ ಕೆಟ್ಟ ಕೆಲಸಗಳನ್ನು ಕೈಬಿಡುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಕಲಬುರಗಿಯಲ್ಲಿ ಹೇಳಿದರು.

education minister bc nagesh reaction about RSS Criticised
ಆರ್‌ಎಸ್‌ಎಸ್‌ ಬಗ್ಗೆ ಟೀಕೆಗೆ ತಲೆ ಕೆಡಿಸಿಕೊಳ್ಳಲ್ಲ - ಶಿಕ್ಷಣ ಸಚಿವ ಬಿಸಿ ನಾಗೇಶ್‌
author img

By

Published : Oct 26, 2021, 12:23 PM IST

Updated : Oct 26, 2021, 1:32 PM IST

ಕಲಬುರಗಿ: ಆರ್‌ಎಸ್‌ಎಸ್ ಅನ್ನೋದು 1925ರಲ್ಲಿ ಶುರುವಾಗಿದೆ. ಅಲ್ಲಿಂದ‌ ಇಲ್ಲಿಯವರೆಗೂ ಟೀಕೆಗಳ ಮಧ್ಯೆಯೇ ಬೆಳೆದುಕೊಂಡು ಬಂದಿದೆ. ಯಾರೇ ಏನು‌ ಮಾತನಾಡಿದರೂ ಆರ್‌ಎಸ್‌ಎಸ್ ಆಗಲಿ, ನಾವಾಗಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಸಿದ್ದರಾಮಯ್ಯ ಮಾಡಿದ ಒಳ್ಳೆ ಕೆಲಸ ಮುಂದುವರೆಸುತ್ತೇವೆ, ಕೆಟ್ಟ ಕೆಲಸ ಕೈ ಬಿಡುತ್ತೇವೆ: ಸಚಿವ ಬಿ.ಸಿ.ನಾಗೇಶ್

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಬಗ್ಗೆ ಟೀಕೆ ವಿಚಾರ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಗಾಂಧಿ ಹತ್ಯೆಗೂ ಆರ್‌ಎಸ್‌ಎಸ್‌ಗೂ ಸಂಬಂಧವಿಲ್ಲ ಎಂದು ಸುಪ್ರಿಂ ಕೋರ್ಟ್, ಅಂದಿನ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಹೇಳಿದ ಮೇಲೂ ಇವತ್ತಿಗೂ ಕಾಂಗ್ರೆಸ್‌ನವರು ಆರೋಪ ಮಾಡುತ್ತಲೇ ಇದ್ದಾರೆ ಎಂದರು.

ಯಾವುದೋ ಒಂದು ಧರ್ಮವನ್ನು ಅವಹೇಳನ ಮಾಡಲು ಏನ್ ಬೇಕಾದ್ರೂ ಕಾಂಗ್ರೆಸ್‌ನವರು ಹೇಳುತ್ತಾರೆ. ಸಂಘ ಬೆಳೆದಿರೋದೇ ವಿರೋಧದ ನಡುವಿನ ಪ್ರಪಂಚದಲ್ಲಿ. ಭಾರತಕ್ಕೆ ಯಾವ ಬೆಲೆಯಿತ್ತೋ ಆ ಬೆಲೆಯನ್ನ ಮತ್ತೊಮ್ಮೆ ತಂದು ಕೋಡೋಕೆ ಮುಂದಾಗಿದೆ. ವಿತ್ ಯೂ , ವಿತ್ ಔಟ್ ಯೂ , ಅಗೆನೆಸ್ಟ್ ಯೂ ಎಂದು ಸಂಘ ಸ್ಪಷ್ಟವಾಗಿ ಹೇಳಿದೆ ಎಂದ ಸಚಿವರು, ದೇಶಕ್ಕಾಗಿ ಮಾಡುತ್ತಿರುವ ಕೆಲಸ ಮುಂದುರೆಯುತ್ತದೆ. ವಿರೋಧಗಳ ಬಗ್ಗೆ ಆರ್‌ಎಸ್‌ಎಸ್ ತಲೆ ಕೆಡಿಸಿಕೊಳ್ಳಲ್ಲ, ನಾವೂ ತಲೆಕೆಡಿಸಿಕೊಳ್ಳಲ್ಲ ಎಂದು ತೀರುಗೇಟು ನೀಡಿದ್ದಾರೆ.

'ಹಾನಗಲ್, ಸಿಂದಗಿಯಲ್ಲಿ ಬಿಜೆಪಿ ಗೆಲ್ಲುತ್ತೆ':

ಇದೇ ವೇಳೆ ಮಾತನಾಡಿದ ಸಚಿವ ಬಿ.ಸಿ.ನಾಗೇಶ್‌, ಹಾನಗಲ್, ಸಿಂದಗಿ ಎರಡು ಕ್ಷೇತ್ರಗಳಲ್ಲಿ ನಮ್ಮ ಪಕ್ಷ ಗೆಲ್ಲಲ್ಲಿದೆ. ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಏನೇನು ಮಾಡಿದ್ದಾರೆಂಬುದು ಪ್ರಪಂಚಕ್ಕೆ ಗೊತ್ತಿದೆ. ಈ ಬಗ್ಗೆ ಸಾರ್ವಜನಿಕರು ಉತ್ತರ ಸಹ ಕೊಟ್ಟಿದ್ದಾರೆ ಎಂದರು.

'ಧರ್ಮ, ಜಾತಿ ಆಧಾರದ ಮೇಲೆ ನಾವು ಶಿಕ್ಷಣ ನೀಡುತ್ತಿಲ್ಲ':

ಸಿದ್ದರಾಮಯ್ಯ ನೀಡುವ ವಿದ್ಯಾಶ್ರೀ ಯೋಜನೆ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ವಿದ್ಯಾಸಿರಿ ಯೋಜನೆ ನಾವು ನಿಲ್ಲಿಸಿಲ್ಲ, ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿತ್ತು. ಸಿದ್ದರಾಮಯ್ಯನವರು ಮಾಡಿದ್ದ ಒಳ್ಳೆ ಕೆಲಸಗಳನ್ನು ಮುಂದುವರೆಸುತ್ತೇವೆ. ಅದೇ ರೀತಿ ಅವರು ಮಾಡಿರುವ ಕೆಲ ಕೆಟ್ಟ ಕೆಲಸಗಳನ್ನು ಸಹ ಕೈಬಿಡುತ್ತೇವೆ ಎಂದು ತಿಳಿಸಿದರು.

Last Updated : Oct 26, 2021, 1:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.