ಕಲಬುರಗಿ: ಜಿಲ್ಲಾಡಳಿತ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಚಂದ್ರಶೇಖರ್ ಪಾಟೀಲ್ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ದಸರಾ ಕ್ರೀಡಾಕೂಟ ಆಯೋಜಿಸಲಾಗಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುವರ್ಣ ಮಾಲಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹಾಕಿ, ತ್ರೋಬಾಲ್, ವಾಲಿಬಾಲ್, ಈಜು ಮತ್ತು ಬಾಸ್ಕೆಟ್ ಬಾಲ್, ಕಬ್ಬಡ್ಡಿ, ಖೋ-ಖೋ ಹೀಗೆ ಹಲವು ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಶಾಲಾ, ಕಾಲೇಜುಗಳಿಂದ ವಿದ್ಯಾರ್ಥಿಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಬುಧವಾರ ಚಾಲನೆ ನೀಡಲಾಗಿದ್ದ ಕ್ರೀಡಾಕೂಟಕ್ಕೆ ಮಳೆ ಕಾರಣದಿಂದಾಗಿ ಮೊದಲು ಒಳಾಂಗಣ ಕ್ರೀಡೆಗಳನ್ನು ಆಡಿಸಲಾಗಿತ್ತು. ಈಗ ಹೊರಾಂಗಣ ಕ್ರೀಡೆಗಳನ್ನು ಮಳೆ ಕಡಿಮೆಯಾದ ನಂತರ ಆಡಿಸಲಾಗುತ್ತಿದೆ ಎಂದು ಕ್ರೀಡಾಕೂಟ ತಿಳಿಸಿದೆ.