ETV Bharat / state

ಆಕ್ಸಿಜನ್ ಸಿಗದೆ ಮೃತಪಟ್ಟ ಡಾಕ್ಟರ್​ ಪತ್ನಿ : ಕಣ್ಣೆದುರೇ ನಡೆದ ದುರಂತಕ್ಕೆ ಕಂಬನಿ ಮಿಡಿದ ವೈದ್ಯ

author img

By

Published : May 3, 2021, 4:19 PM IST

ಎಷ್ಟೋ ರೋಗಿಗಳ ಜೀವ ಉಳಿಸಿದ ವೈದ್ಯರು ತಮ್ಮ ಕಣ್ಣೆದುರೇ ಆಕ್ಸಿಜನ್‌ ಕೊರತೆಯಿಂದ ಪತ್ನಿ ಸಾವಿಗೀಡಾಗಿರುವುದು ಕಂಡು ಭಾವುಕರಾಗಿ ಕಣ್ಣೀರಿಟ್ಟರು..

doctors-wife-died-by-lack-of-oxygen-in-kalburagi
ಆಕ್ಸಿಜನ್

ಕಲಬುರಗಿ : ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ವೈದ್ಯರೊಬ್ಬರ ಪತ್ನಿ ಅವರ ಕಣ್ಣೇದುರೇ ಮೃತಪಟ್ಟಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.

ನಗರದ ಖ್ಯಾತ ವೈದ್ಯ ಡಾ. ಸಿ ಎಸ್ ಪಾಟೀಲ್ ಅವರ ಧರ್ಮಪತ್ನಿ ಅರುಂಧತಿ ಪಾಟೀಲ್(54) ಅವರು ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೆ ಕೊನೆಯುಸಿರೆಳೆದಿದ್ದಾರೆ. ಕೊರೊನಾಗೆ ತುತ್ತಾಗಿದ್ದ ಅರುಂಧತಿ ಪಾಟೀಲ್ ಅವರನ್ನು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿದೆ. ಈ ವೇಳೆ ಸಮಯಕ್ಕೆ ಆಕ್ಸಿಜನ್‌ ದೊರೆಯದೆ ಅವರು ಮೃತಪಟ್ಟಿದ್ದಾರೆ.

ಸಿ ಎಸ್‌ ಪಾಟೀಲ್​ ಅವರು ಈ ಮುಂಚೆ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ ಸರ್ಕಾರಿ ವೃತ್ತಿಗೆ ರಾಜೀನಾಮೆ ನೀಡಿ ಕಲಬುರಗಿಯ ಜೇವ​ರ್ಗಿ ರಸ್ತೆಯಲ್ಲಿ ಖಾಸಗಿ ಕ್ಲಿನಿಕ್‌ ಒಂದನ್ನು ನಡೆಸುತ್ತಿದ್ದರು. ಡಾ. ಪಾಟೀಲ್ ಅವರು ಒಳ್ಳೆಯ ಚಿಕಿತ್ಸೆ ನೀಡುವ ಮೂಲಕ ಬಹಳಷ್ಟು ಜನರ ಜೀವ ಉಳಿಸಿದ್ದಾರೆ.

ಎಷ್ಟೋ ರೋಗಿಗಳ ಜೀವ ಉಳಿಸಿದ ವೈದ್ಯರು ತಮ್ಮ ಕಣ್ಣೆದುರೇ ಆಕ್ಸಿಜನ್‌ ಕೊರತೆಯಿಂದ ಪತ್ನಿ ಸಾವಿಗೀಡಾಗಿರುವುದು ಕಂಡು ಭಾವುಕರಾಗಿ ಕಣ್ಣೀರಿಟ್ಟರು.

ಓದಿ: ಚಾಮರಾಜನಗರ ಘಟನೆ ಕುರಿತು ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಬಿಎಸ್​ವೈ ಟ್ವೀಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.