ಕಲಬುರಗಿ: ನೆರೆಪೀಡಿತ ಪ್ರದೇಶಗಳಿಗೆ ಪರಿಹಾರ ಒದಗಿಸುವುದಾಗಿ ನೀಡಿರುವ ಭರವಸೆ ಏನಾಯ್ತು ಎಂದು ಕಾಂಗ್ರೆಸ್ ವಕ್ತಾರ ದಿನೇಶ್ ಗುಂಡೂರಾವ್ ಕಂದಾಯ ಸಚಿವ ಆರ್.ಅಶೋಕ್ಗೆ ಪ್ರಶ್ನಿಸಿದ್ದಾರೆ.
ಕಂದಾಯ ಸಚಿವ ಆರ್.ಅಶೋಕ್ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅದರಲ್ಲೂ ಕಲಬುರಗಿ ಭಾಗದಲ್ಲಿ ಅತಿ ಹೆಚ್ಚು ಪ್ರವಾಹ ಉಂಟಾಗಿದ್ದು, ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವುದಾಗಿ ಹೇಳಿದ್ದರು. ಈ ಕುರಿತು ಟ್ವೀಟ್ ಮಾಡಿರುವ ಗುಂಡೂರಾವ್, ಕಳೆದ ಸೆಪ್ಟೆಂಬರ್‌ನಲ್ಲಿ ನಿಯಮ ಮೀರಿ ಕೇಂದ್ರದಿಂದ ನೆರೆ ಪರಿಹಾರ ಕೇಳುವುದಾಗಿ ಹೇಳಿದ್ರಿ. ಆ ಪರಿಹಾರದ ಕಥೆ ಏನಾಯ್ತು ಎಂದು ಪ್ರಶ್ನಿಸಿದ್ದಾರೆ.
ನೀವು ಕೇಳಿದ ಪರಿಹಾರ ಪ್ರವಾಹ ಸಂತ್ರಸ್ತರಿಗೆ ಸಿಕ್ಕಿದೆಯಾ? ಒಂದು ತಿಂಗಳ ಬಳಿಕ ರಾಜ್ಯದ ಜನ ಮತ್ತೆ ಪ್ರವಾಹಕ್ಕೆ ಸಿಲುಕಿಕೊಂಡಿದ್ದಾರೆ. ಈಗ ಮತ್ತೆ ಗಾಳಿಯಲ್ಲಿ ಗುಂಡು ಹಾರಿಸಿ ದಿಕ್ಕು ತಪ್ಪಿಸುವ ಯೋಜನೆ ಏನಾದ್ರು ಇದೆಯೇ ಎಂದು ಕುಟುಕಿದ್ದಾರೆ.