ಕಲಬುರಗಿ: ತುಂಬಿ ಹರಿಯುತ್ತಿರುವ ಭೀಮಾ ನದಿ ಸೇತುವೆಯ ಅಪಾಯ ಲೆಕ್ಕಿಸದೆ ಹರಿಯುವ ನೀರಿನಲ್ಲಿಯೇ ಭಾಗಮ್ಮ ದೇವಿ ಭಕ್ತರು ರಸ್ತೆ ದಾಟುತ್ತಿದ್ದಾರೆ.
ಅಫಜಲಪುರ ತಾಲ್ಲೂಕಿನ ಘತ್ತರಗಿ ಗ್ರಾಮದಲ್ಲಿ ಭೀಮಾನದಿಗೆ ಅಡ್ಡಲಾಗಿ ಬೃಹತ್ ಸೇತುವೆ ನಿರ್ಮಿಸಲಾಗಿದೆ. ಸೊನ್ನ ಬ್ಯಾರೇಜ್ದಿಂದ ಭೀಮಾ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಂದ ಪರಿಣಾಮ ಘತ್ತರಗಿ ಸೇತುವೆ ಜಲಾವೃತಗೊಂಡು ಸೇತುವೆ ಮೇಲೆ ನೀರು ಹರಿಯುತ್ತಿದೆ.
ಜೇವರ್ಗಿ ಮಾರ್ಗದಿಂದ ಘತ್ತರಗಿ ತಲುಪುವ ಪ್ರಯಾಣಿಕರಿಗೆ ರಸ್ತೆ ಸಂಚಾರ ಕಡಿತಗೊಂಡಿದೆ. ಆದರೆ ತುಂಬಿ ಹರಿಯುತ್ತಿರುವ ನೀರಿನಲ್ಲಿಯೇ ಜನರು ಸೇತುವೆಯನ್ನು ದಾಟುವ ದುಸ್ಸಾಹಸ ಮಾಡುತ್ತಿದ್ದಾರೆ.
ಸ್ವಲ್ಪ ಎಡವಟ್ಟಾದ್ರು ಪ್ರಾಣಕ್ಕೆ ಕುತ್ತು ಬರಲಿದೆ. ಈ ಬಗ್ಗೆ ಗೊತ್ತಿದ್ದರೂ ಮುಳುಗಡೆಯಾದ ಸೇತುವೆಯನ್ನು ಭಕ್ತರು ದಾಟಿ ಘತ್ತರಗಿ ದರ್ಶನಕ್ಕೆ ಬರುತ್ತಿದ್ದಾರೆ. ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿದ್ರು ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಇದನ್ನೂ ಓದಿ: ಮುಳುಗಿದ ಸೇತುವೆ ಮೇಲೆ ವಿದ್ಯಾರ್ಥಿನಿಯರು, ವಾಹನ ಸವಾರರ ಸಂಚಾರ.. ಅಪಾಯಕ್ಕೆ ಆಹ್ವಾನ