ETV Bharat / state

ಜೇವರ್ಗಿ ಶಾಸಕರ ಮನೆಯ ಆವರಣದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ - ಅಜಯ್ ಸಿಂಗ್ ಮನೆಯ ಆವರಣದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ

ಜೇವರ್ಗಿ ಶಾಸಕ ಡಾ. ಅಜಯ್​ ಸಿಂಗ್​ ಮನೆಯ ಆವರಣದಲ್ಲಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

youth-committed-suicide-in-the-premises-of-jewargi-mlas-house
ಜೇವರ್ಗಿ ಶಾಸಕರ ಮನೆಯ ಆವರಣದಲ್ಲಿ ಆತ್ಮಹತ್ಯೆಗೆ ಶರಣಾದ ಯುವಕ
author img

By ETV Bharat Karnataka Team

Published : Aug 24, 2023, 5:36 PM IST

Updated : Aug 24, 2023, 6:37 PM IST

ಜೇವರ್ಗಿ ಶಾಸಕರ ಮನೆಯ ಆವರಣದಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಕಲಬುರಗಿ : ಜೇವರ್ಗಿ ಶಾಸಕ, ಕೆಕೆಆರ್​ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಮನೆಯ ಆವರಣದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯ ಶರಣನಗರದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಕಲಬುರಗಿ ತಾಲ್ಲೂಕಿನ ಪಟ್ಟಣ ಗ್ರಾಮದ ನಿವಾಸಿ ದೇವೇಂದ್ರ (30) ಎಂದು ಗುರುತಿಸಲಾಗಿದೆ.

ಮೃತ ದೇವೇಂದ್ರ ಶಾಸಕ ಅಜಯ್​ ಸಿಂಗ್​ ಮನೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದ. ಬುಧವಾರ ರಾತ್ರಿ ದೇವೇಂದ್ರ ಶಾಸಕರ ಮನೆ ಆವರಣದಲ್ಲಿ ಸಾವಿಗೆ ಶರಣಾಗಿದ್ದಾನೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಲಬುರಗಿ ಬ್ರಹ್ಮಪುರ ಠಾಣೆ ಪೊಲೀಸರು, ಜೊತೆಗೆ ಬೆರಳಚ್ಚು ತಜ್ಞರ ತಂಡವು ಭೇಟಿ ನೀಡಿ ಪರಿಶೀಲನೆ ನಡೆಸಿದೆ. ದೇವೇಂದ್ರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಜೇವರ್ಗಿ ಶಾಸಕ ಅಜಯ್​ ಸಿಂಗ್​ ಅವರ ಮನೆಯ ಆವರಣದಲ್ಲಿ ವ್ಯಕ್ತಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಮಾಹಿತಿ ದೊರೆತ ತಕ್ಷಣ ಬ್ರಹ್ಮಪುರ ಪೊಲೀಸರು ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೃತನ ಕುಟುಂಬಸ್ಥರು ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಹೇಳಿದರು.

ರಾತ್ರಿ ಹೊತ್ತು ವಾಚಮ್ಯಾನ್​ ಕೆಲಸ ಮಾಡುತ್ತಿದ್ದ ದೇವೇಂದ್ರ, ಹಗಲು ಹೊತ್ತು ಆಟೋ ಓಡಿಸುತ್ತಿದ್ದ. ಆಗಾಗ ಪಟ್ಟಣಕ್ಕೆ ಹೋಗಿ ತನ್ನ ತಾಯಿಯನ್ನು ಭೇಟಿಯಾಗಿ ಬರುತ್ತಿದ್ದ. ಕಳೆದ ಕೆಲವು ದಿನಗಳಿಂದ ದೇವೇಂದ್ರ ವಾಚಮ್ಯಾನ್​ ಕೆಲಸಕ್ಕೆ ಗೈರಾಗಿದ್ದ ಎನ್ನಲಾಗಿದ್ದು, ನಿನ್ನೆ ತಡರಾತ್ರಿ 12:30ರ ಸುಮಾರಿಗೆ ಶಾಸಕರ ಮನೆಗೆ ಬಂದಿದ್ದ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ.

ದೇವೇಂದ್ರನ ಪತ್ನಿ ಕಳೆದ ಐದು ವರ್ಷಗಳ ಹಿಂದೆ ಮೃತಪಟ್ಟಿದ್ದು, ಕುಟುಂಬಸ್ಥರು ಇನ್ನೊಂದು ಮದುವೆ ಮಾಡಲು ಒತ್ತಾಯಿಸಿದ್ದರೂ ದೇವೇಂದ್ರ ಮದುವೆಯಾಗಲು ಒಪ್ಪಿರಲಿಲ್ಲ. ನಿನ್ನೆ ತಾಯಿಯನ್ನು ಭೇಟಿ ಮಾಡಿ ವಾಪಸ್ ಕಲಬುರಗಿಗೆ ತೆರಳುತ್ತಿದ್ದೇನೆ ಎಂದು ಹೇಳಿ ಮನೆಯಿಂದ ಹೊರಟಿದ್ದ. ಆದರೆ ಇಂದು ಬೆಳಗ್ಗೆ ಅಜಯ್​ ಸಿಂಗ್​ ಅವರ ಮನೆಯ ಆವರಣದಲ್ಲಿ ದೇವೇಂದ್ರ ಮೃತದೇಹ ಪತ್ತೆಯಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ : ಪುತ್ತೂರಿನಲ್ಲಿ ಚೂರಿಯಿಂದ ಇರಿದು ಯುವತಿಯ ಕೊಲೆ.. ಆರೋಪಿ ಯುವಕನ ಬಂಧನ

Last Updated : Aug 24, 2023, 6:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.