ETV Bharat / state

ಕಲಬುರಗಿ: ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಮಾಜಿ ಗ್ರಾಪಂ‌ ಸದಸ್ಯನ ಬರ್ಬರ ಹತ್ಯೆ

Kalaburagi crime: ಐದು ವರ್ಷಗಳ ಹಿಂದೆ ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಮಾಜಿ ಗ್ರಾಮ ಪಂಚಾಯಿತಿ ಸದಸ್ಯನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.

crime-ex-gram-panchayat-member-brutally-murdered-in-kalaburagi
ಕಲಬುರಗಿ: ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಮಾಜಿ ಗ್ರಾಪಂ‌ ಸದಸ್ಯನ ಬರ್ಬರ ಹತ್ಯೆ
author img

By

Published : Jul 24, 2023, 7:33 PM IST

Updated : Jul 27, 2023, 1:33 PM IST

ಕಲಬುರಗಿ: ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಮಾಜಿ ಗ್ರಾಮ ಪಂಚಾಯತ್​ ಸದಸ್ಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೇವರ್ಗಿ ತಾಲೂಕಿನ ಮದರಿ ಗ್ರಾಮದಲ್ಲಿ ನಡೆದಿದೆ. ಅಶೋಕ ಪ್ಯಾಟಿ (45) ಕೊಲೆಯಾದವರು. ಅಶೋಕ್ ಪ್ಯಾಟಿ ಪಕ್ಕದ ಮನೆಯ ಹಾಲಗಡ್ಲಾ ಕುಟುಂಬದ ಜಾನಪ್ಪ, ಸಿದ್ದಪ್ಪ, ಗುಂಡಪ್ಪ ಮತ್ತು ಅವರ ಸಂಬಂಧಿಗಳು ಈ ಕೊಲೆ ಮಾಡಿದ್ದಾರೆ ಎಂದು ಮೃತನ‌‌ ಪತ್ನಿ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ ?: ಕೊಲೆಯಾದ ಅಶೋಕ್ ಪ್ಯಾಟಿ ಮತ್ತು ಕೊಲೆ ಆರೋಪಿಗಳು ಒಂದೇ ಸಮುದಾಯಕ್ಕೆ ಸೇರಿದರಾಗಿದ್ದು, ಎರಡು ಕುಟುಂಬದ ನಡುವೆ ಈ ಮೊದಲು ಅನ್ಯೋನ್ಯತೆ ಇತ್ತು. ಆದರೆ ಕಳೆದ‌ ಎರಡು ವರ್ಷಗಳಿಂದ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ‌ ನಡುವೆ ವೈಷಮ್ಯ ಬೆಳದಿತ್ತು. ಮೃತ ಅಶೋಕ್​ ತಮ್ಮ ಪರಿಚಯಸ್ಥ ಇಮಾಮ್ ಬಿ ಅನ್ನೋ ಮಹಿಳೆಗೆ ಮಧ್ಯಸ್ಥಿಕೆ‌ ವಹಿಸಿ ಐದು ವರ್ಷದ ಹಿಂದೆ ಆರೋಪಿ ಜಾನಪ್ಪ ಅವರ ಚಿಕ್ಕಮ್ಮಳಾದ ಶಾಂತಮ್ಮ ಅವರಿಂದ ಐದು‌ ಸಾವಿರ ರೂಪಾಯಿ ಸಾಲ ಕೊಡಿಸಿದ್ದರು.

ಆದರೆ ಅವರು ಹಣ ಮರಳಿ ಕೊಟ್ಟಿರಲಿಲ್ಲ, ಹೀಗಾಗಿ ಮಧ್ಯಸ್ಥಿಕೆ ವಹಿಸಿ ಸಾಲ ಕೊಡಿಸಿದ್ದ ಅಶೋಕ್​ಗೆ ಜಾನಪ್ಪ ಮತ್ತು ಆತನ ಸಂಬಂಧಿ ಹಣಕ್ಕಾಗಿ ಪೀಡಿಸುತ್ತಿದ್ದರಂತೆ. ಇದೇ ವಿಷಯವಾಗಿ ಕಳೆದ ಎರಡು ವರ್ಷಗಳಿಂದ ಎರಡು‌ ಕುಟುಂಬಗಳ‌ ಮಧ್ಯೆ ಮನಸ್ತಾಪ ಉಂಟಾಗಿ ಆಗಾಗ ಜಗಳ ಕೂಡಾ ನಡೆದಿವೆ. ಇದೇ ಹಣಕಾಸಿನ ವಿಚಾರವಾಗಿ ಭಾನುವಾರ ಅಶೋಕ್​ ಹಾಗೂ ಆತನ ಪುತ್ರನೊಂದಿಗೆ ಜಾನಪ್ಪ ಜಗಳವಾಡಿದ್ದಾನೆ. ಈ ವೇಳೆ ಜಾನಪ್ಪ ಅಶೋಕನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೆದರಿಕೆ ಕೂಡಾ ಹಾಕಿದ್ದ ಎಂದು ಹೇಳಲಾಗುತ್ತಿದೆ.

ಈ ವಿಷಯ ತಿಳಿದ ಅಶೋಕನ ಪತ್ನಿ ಶಾರದಾ ಪ್ಯಾಟಿ ಸಂಜೆ ಆರೋಪಿ ಜಾನಪ್ಪನ ಮನೆಗೆ ಹೋಗಿ ಗಂಡ ಹಾಗೂ‌ ಮಗನ ತಂಟೆಗೆ ಯಾಕೆ‌ ಬರ್ತಿದ್ದೀಯಾ ಅಂತ ವಿಚಾರಿಸಿದ್ದಾರೆ. ಈ ವೇಳೆ ಎರಡು ಕುಟುಂಬದ ನಡುವೆ ಮಾತಿಗೆ ಮಾತು ಬೆಳೆದಿದೆ. ಜೊತೆಗೆ ಹೋಗಿದ್ದ ಅಶೋಕ್​, ಜಾನಪ್ಪ ಮತ್ತು ಆತನ ಸಹೋದರನಿಗೆ ಎರಡೇಟು ಹೊಡೆದು ವಾಪಸ್ ಮನೆಗೆ ಬಂದಿದ್ದಾನೆ. ಇದರಿಂದ ಕೋಪಗೊಂಡ ಜಾನಪ್ಪ ಮತ್ತು ಆತನ ಸಹೋದರರಾದ ಸಿದ್ದಪ್ಪ, ಗುಂಡಪ್ಪ ಮತ್ತು ಕುಟುಂಬದವರು ಅಶೋಕ್​ ಮನೆಗೆ ನುಗ್ಗಿ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾರೆ.

ಅಶೋಕ್​ ಮನೆಯಿಂದ ಹೊರಗೋಡಿ ಬಂದರೂ ಬೆನ್ನಟ್ಟಿ ನಡುರಸ್ತೆಯಲ್ಲಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.‌ ಘಟನೆಯಲ್ಲಿ ಆರೋಪಿಗಳಿಗೂ ಗಾಯಗಳಾಗಿದ್ದು ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ತಿಳಿದ ಡಿವೈಎಸ್‍ಪಿ, ಸಿಪಿಐ ಪರಶುರಾಮ ವನಜಕರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮೃತನ ಪತ್ನಿ ಶಾರದಾ ಪ್ಯಾಟಿ ಅವರು ಜಾನಪ್ಪ ಹಾಲಗಡ್ಲ ಸೇರಿ ಇತರೆ ಆರೋಪಿಗಳ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ರಾಜಕೀಯ ಮುಖಂಡನ ಅವಾಂತರ: ರಾಜಕೀಯ ಮುಖಂಡನೊಬ್ಬನ ಅನೈತಿಕ ಸಂಬಂಧದಿಂದ ಬೇಸತ್ತಿದ್ದ ಜನ, ಆತನನ್ನು ಹಿಗ್ಗಾಮುಗ್ಗಾ ಥಳಿಸಿದ ಘಟನೆ‌ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದಲ್ಲಿ ನಡೆದಿದೆ. ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದರೋಡೆಗೆ ಹೊಂಚು ಹಾಕಿ ಕುಳುತಿದ್ದ ಆರೋಪಿಗಳ ಬಂಧನ: ಕಲಬುರಗಿ ನಗರದ ಸಬ್ ಅರ್ಬನ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಬೇಲೂರ್ ಕ್ರಾಸ್ ಬಳಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಮೂವರು ಆರೋಪಿಗಳನ್ನು ಸೋಮವಾರ ಬೆಳಗ್ಗೆ ಬಂಧಿಸಿದ್ದಾರೆ. ಕಲಬುರಗಿ ಮೂಲದ ಅಬ್ದುಲ್ ರೆಹಮಾನ್ (25), ಮೊಹಮ್ಮದ್ ಹಿಸಾಮುದ್ದೀನ್ (24) ಮತ್ತು ಸೈಯದ್ ಆವೇಜ್ (18) ಬಂಧಿತ ಆರೋಪಿಗಳು. ಇನ್ನಿಬ್ಬರು ತಪ್ಪಿಸಿಕೊಂಡಿದ್ದು ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಬಂಧಿತರಿಂದ ಬೈಕ್, ಮೊಬೈಲ್ ಸೇರಿ 2 ಲಕ್ಷ ಮೌಲ್ಯದ ವಸ್ತುಗಳನ್ನು‌ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಜಗಳ: ಸಿಬ್ಬಂದಿಯ ಕೈಯನ್ನೇ ಕತ್ತರಿಸಿದ ಮಾಲೀಕ, ಆರೋಪಿ ಅರೆಸ್ಟ್..!

Last Updated : Jul 27, 2023, 1:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.