ETV Bharat / state

24 ಗಂಟೆಗಳಲ್ಲಿ ಕೊರೊನಾ ವರದಿ ಕೈ ಸೇರಬೇಕು: ದತ್ತಾತ್ರೇಯ ಪಾಟೀಲ ರೇವೂರ - 24 ಗಂಟೆಗಳಲ್ಲಿ ಕೊರೊನಾ ವರದಿ ಕೈ ಸೇರಬೇಕು

ಸ್ಯಾಂಪಲ್ ಪಡೆದು ವಾರವಾದರೂ ವರದಿ ಬಾರದಿದ್ದಲ್ಲಿ ಜನರು ಅನಗತ್ಯ ಗೊಂದಲಕ್ಕೀಡಾಗುತ್ತಾರೆ, ಹೀಗಾಗಿ ಕೋವಿಡ್-19 ತಪಾಸಣೆಯ ವೈದ್ಯಕೀಯ ವರದಿ, ಸ್ಯಾಂಪಲ್ ಪಡೆದ 24 ಗಂಟೆಯಲ್ಲಿ ಸಾರ್ವಜನಿಕರಿಗೆ ದೊರಕುವಂತಾಗಬೇಕು ಎಂದು ದತ್ತಾತ್ರೇಯ ಪಾಟೀಲ ರೇವೂರ ಹೇಳಿದ್ದಾರೆ.

Dattatreya patil revoor
ದತ್ತಾತ್ರೇಯ ಪಾಟೀಲ ರೇವೂರ
author img

By

Published : Aug 5, 2020, 12:41 PM IST

ಕಲಬುರಗಿ: ಕೋವಿಡ್-19 ತಪಾಸಣೆಯ ವೈದ್ಯಕೀಯ ವರದಿ ಸ್ಯಾಂಪಲ್ ಪಡೆದ 24 ಗಂಟೆಯಲ್ಲಿ ಸಾರ್ವಜನಿಕರಿಗೆ ದೊರಕುವಂತಾಗಬೇಕು ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೇಳಿದ್ದಾರೆ.

ಕೆಕೆಆರ್​ಡಿಬಿ ಕಚೇರಿಯಲ್ಲಿ ಕೋವಿಡ್-19 ನಿಯಂತ್ರಣ ಮತ್ತು ಕಲಬುರಗಿ ಜಿಮ್ಸ್ ಆಸ್ಪತ್ರೆ ಮಂಡಳಿಯಿಂದ ನೀಡಲಾದ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಸ್ಯಾಂಪಲ್ ನೀಡಿದ ವ್ಯಕ್ತಿಗೆ ತ್ವರಿತಗತಿಯಲ್ಲಿ ವೈದ್ಯಕೀಯ ವರದಿ ನೀಡುವತ್ತ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದರು.

ಸ್ಯಾಂಪಲ್ ಪಡೆದು ವಾರವಾದರೂ ವರದಿ ಬಾರದಿದ್ದಲ್ಲಿ ಜನರು ಅನಗತ್ಯ ಗೊಂದಲಕ್ಕೆ ಈಡಾಗುತ್ತಾರೆ. ಇದಕ್ಕೆ ಅವಕಾಶ ನೀಡಬಾರದು. ಸ್ಯಾಂಪಲ್ಸ್ ಹೆಚ್ಚು ಸಂಗ್ರಹಗೊಂಡಲ್ಲಿ ಬೆಂಗಳೂರು ಅಥವಾ ಪುಣೆಗೆ ಕಳುಹಿಸಿ 24 ಗಂಟೆಯಲ್ಲಿ ವೈದ್ಯಕೀಯ ವರದಿಯನ್ನು ಸಂಬಂಧಿಸಿದ ವ್ಯಕ್ತಿಗಳಿಗೆ ತಿಳಿಸುವ ಕೆಲಸವಾಗಬೇಕು ಎಂದಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್-19ನಿಂದ ಮೃತರ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ ರೇವೂರ, ಜನರಲ್ಲಿ ಕೊರೊನಾ ರೋಗಿಗೆ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದರ ಬಗ್ಗೆ ವಿಶ್ವಾಸ ಬರಲು ವಿನೂತನ ಪ್ರಯತ್ನಗಳು ಆಗಬೇಕಿದೆ. ಇದಲ್ಲದೇ ಮರಣ ಪ್ರಮಾಣ ತಗ್ಗಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಜಿಮ್ಸ್, ಇಎಸ್​ಐಸಿ ಸೇರಿದಂತೆ ಎಲ್ಲ ಕೋವಿಡ್-19 ಆಸ್ಪತ್ರೆ ಮತ್ತು ಐಎಂಎ ಪ್ರತಿನಿಧಿಗಳೊಂದಿಗೆ ಸಭೆ ಕರೆದು ಸಮನ್ವಯತೆ ಸಾಧಿಸಿ ನಿಯಂತ್ರಣ ಕ್ರಮದ ಸೂತ್ರ ರೂಪಿಸುವಂತೆ ಸಲಹೆ ನೀಡಿದರು.

ಕೋವಿಡ್ ಆಸ್ಪತ್ರೆ ಮತ್ತು ಕೋವಿಡ್ ಕೇರ್ ಸೆಂಟರ್​ನಲ್ಲಿ ಕೊರೊನಾ ರೋಗಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ, ಆ್ಯಂಬುಲೆನ್ಸ್ ಸೇವೆ, ಹಾಸಿಗೆ ಲಭ್ಯತೆ, ಊಟೋಪಚಾರ ಸರಿಯಾಗಿ ತಲುಪುತ್ತಿಲ್ಲ ಎಂಬ ಆರೋಪ ಬರುತ್ತಿದ್ದು, ಮುಂದಿನ ದಿನದಲ್ಲಿ ವೈದ್ಯೋಪಚಾರ ಗುಣಮಟ್ಟವನ್ನು ಹೆಚ್ಚಿಸಬೇಕು. ಕನಿಷ್ಠ ಅರ್ಧ ಗಂಟೆಗೊಮ್ಮೆ ವೈದ್ಯ ಅಥವಾ ನರ್ಸ್, ರೋಗಿಗೆ ವೈಯಕ್ತಿಕವಾಗಿ ವಿಚಾರಿಸಿದಲ್ಲಿ ರೋಗಿಯಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಬೇಗ ಗುಣಮುಖನಾಗಲು ಸಾಧ್ಯ. ಜಿಮ್ಸ್‌ಗೆ ಬರುವ ಯಾವುದೇ ರೋಗಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದಲ್ಲಿ ಬೇರೆ ಆಸ್ಪತ್ರೆಯಲ್ಲಿ ರೋಗಿ ಪ್ರವೇಶ ಪಡೆಯಲು ಅಗತ್ಯ ಕ್ರಮ ವಹಿಸಬೇಕು. ಕೋವಿಡ್-19 ನಿಯಂತ್ರಣಕ್ಕೆ ಮಂಡಳಿಯಿಂದ ನೀಡಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ದತ್ತಾತ್ರೇಯ ಪಾಟೀಲ ತಿಳಿಸಿದರು.

ಮಂಡಳಿ ಅನುದಾನ ಸದ್ಬಳಕೆ ಮಾಡಿಕೊಳ್ಳಿ:

ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ರೋಗಿಗಳಿಗೆ ನೀರು ಪೂರೈಸಲಿ ಎಂದು 2.77 ಕೋಟಿ ರೂ. ಮೊತ್ತದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಮೂಲಕ ನೀರು ಪೂರೈಕೆ ಕಾಮಗಾರಿ ಕೈಗೊಳ್ಳಲು ಕಳೆದ ಮಾರ್ಚ್ 2 ರಂದೇ ಅನುಮೋದನೆ ನೀಡಿದ್ದರು. ಇದುವರೆಗೆ ಕಾಮಗಾರಿ ಆರಂಭಿಸದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅಧ್ಯಕ್ಷರು, ಕೂಡಲೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮತ್ತು ಮಂಡಳಿ ಅನುದಾನ ಸದುಪಯೋಗ ಮಾಡಿಕೊಳ್ಳುವಂತೆ ಜಿಮ್ಸ್ ನಿರ್ದೇಶಕರಿಗೆ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.