ಕಲಬುರಗಿ: ಜಿಲ್ಲೆಯಲ್ಲಿಂದು 211 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಏಳು ಮಂದಿ ಬಲಿಯಾಗಿದ್ದಾರೆ.
70 ವರ್ಷದ ಪುರುಷ, 52 ವರ್ಷದ ಪುರುಷ, 62 ವರ್ಷದ ಪುರುಷ, 54 ವರ್ಷದ ಪುರುಷ, 70 ವರ್ಷದ ಪುರುಷ, 35 ವರ್ಷದ ಪುರುಷ ಹಾಗೂ 72 ವರ್ಷದ ಮಹಿಳೆ ಸೇರಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿನ ಒಟ್ಟು ಮೃತರ ಸಂಖ್ಯೆ 170ಕ್ಕೆ ಏರಿಕೆಯಾಗಿದೆ.
ಇಂದು 194 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 6,885 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟು 9,036 ಸೋಂಕಿತರ ಪೈಕಿ 1,981 ಸಕ್ರಿಯ ಪ್ರಕರಣಗಳಿವೆ.