ಕಲಬುರಗಿ: ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ತತ್ತರಿಸಿರುವ ಕಲಬುರಗಿ ಜಿಲ್ಲೆಯ ಜನರನ್ನು ಮತ್ತೆ ಕೊರೊನಾ ಕಾಡುತ್ತಿದೆ. ಕಳೆದೊಂದು ವಾರದಿಂದ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆ ದ್ವಿಗುಣಗೊಳ್ತಿದೆ. ಕೋವಿಡ್ ಪ್ರಕರಣಗಳು ಏರಿಕೆಯ ಆತಂಕ ಒಂದೆಡೆಯಾದ್ರೆ, ಸೋಂಕಿತರು ಟ್ರಾವೆಲ್ ಹಿಸ್ಟರಿ ನೀಡಲು ಹಿಂದೇಟು ಹಾಕ್ತಿದ್ದಾರೆ. ಹಾಗಾಗಿ, ಟ್ರಾವೆಲ್ ಹಿಸ್ಟರಿ ಟ್ರ್ಯಾಕ್ ಮಾಡೋದೇ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಾಗಿದೆ.
1. ಹೊಸ ವರ್ಷದ ಜೊತೆಗೆ ಹೆಚ್ಚಿದ ಕೊರೊನಾ:
ಬಿಸಿಲೂರಿನಲ್ಲಿ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಜನರು ಪ್ರಾಣ ಕಳೆದುಕೊಂಡರು. ಇನ್ನೇನು ರೋಗದ ಕಾಟ ತಪ್ಪಿತು ಎನ್ನುವಷ್ಟರಲ್ಲೇ 2022ರ ಹೊಸ ವರ್ಷಾರಂಭದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಕ್ರಮೇಣ ಏರತೊಡಗಿದೆ.
ಇದನ್ನೂ ಓದಿ: 2021ರಲ್ಲಿ ಬೆಂಗಳೂರಿನಲ್ಲಿ ಕಡಿಮೆ ಅಪರಾಧ ಪ್ರಕರಣಗಳು ದಾಖಲು : ಕಮಲ್ ಪಂತ್
ಕಳೆದೊಂದು ವಾರದಲ್ಲಿ ಪ್ರತಿ ದಿನ ಕೇಸ್‌ಗಳ ಸಂಖ್ಯೆ ಡಬಲ್ ಆಗುತ್ತಾ ಬರ್ತಿದೆ. ಕಳೆದ ಡಿಸೆಂಬರ್ ಅಂತ್ಯದ ವರೆಗೂ ಜಿಲ್ಲೆಯಲ್ಲಿ ಕೇವಲ ಒಂದೆರಡು ಕೇಸ್‌ಗಳು ಮಾತ್ರ ಪತ್ತೆಯಾಗ್ತಿದ್ದವು. ಆದ್ರೆ ಜನವರಿ 2 ಮತ್ತು 3 ರಂದು ದಿಢೀರ್ 09 ಕೇಸ್‌ಗಳು ಕಂಡುಬರುತ್ತಿದ್ದು, 4 ರಂದು ಏಕಾಏಕಿ 16 ಪ್ರಕರಣಗಳು ಬೆಳಕಿಗೆ ಬಂದಿವೆ. 5ರಂದು ಮತ್ತೆ 28 ಕೋವಿಡ್ ಹೊಸ ಪ್ರಕರಣಗಳು ಹಾಗೂ ನಿನ್ನೆ ಮತ್ತೆ 25 ಪ್ರಕರಣಗಳು ಪತ್ತೆಯಾಗಿ ದಿನೇ ದಿನೆ ಸೋಂಕಿತರು ಹೆಚ್ಚಾಗುತ್ತಿದ್ದಾರೆ.
2. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆ:
ಒಂದೆಡೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗ್ತಿದ್ರೆ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೋಂಕಿತರ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚೋದೆ ದೊಡ್ಡ ತಲೆನೋವು. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ನಾಲ್ವರಿಗೆ ಕೊರೊನಾ ಸೋಂಕು ಪತ್ತೆಯಾಗಿತ್ತು. ಕೋವಿಡ್ ದೃಢಪಡ್ತಿದ್ದಂತೆ ಸೋಂಕಿತರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ರು. ಕೊನೆಗೆ ಆರೋಗ್ಯ ಅಧಿಕಾರಿಗಳು ಆಯಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸೋಂಕಿತರನ್ನು ಪತ್ತೆ ಮಾಡಿದ್ದಾರೆ.