ETV Bharat / state

ಕೊರೊನಾ ಹೆಸರಲ್ಲಿ ಸರ್ಕಾರದಿಂದ ಕೋಟಿ ಕೋಟಿ ಲೂಟಿ; ಸೇಡಂ ಕಾಂಗ್ರೆಸ್​ ಆಕ್ರೋಶ - ಕಲಬುರಗಿ ಕಾಂಗ್ರೆಸ್​ ಆಕ್ರೋಶ

ನಮ್ಮ ಅವಧಿಯಲ್ಲಿ ತಂದ ಕಾಮಗಾರಿಗಳನ್ನು ತಮ್ಮ ಅವಧಿಯಲ್ಲಿ ತಂದವರಂತೆ ಸ್ಥಳೀಯ ಶಾಸಕರು ಬಿಂಬಿಸಿಕೊಳ್ಳುತ್ತಿದ್ದಾರೆ. ಲಂಚ ಹೊಡೆಯೋ ಕೆಲಸ ಮಾಡುವ ಮೂಲಕ ಇಡೀ ಕ್ಷೇತ್ರವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ.

Congress
ಕಾಂಗ್ರೆಸ್
author img

By

Published : Aug 20, 2020, 5:02 PM IST

ಸೇಡಂ(ಕಲಬುರಗಿ): ಬಡವರು ಸಂಕಷ್ಟದಲ್ಲಿರುವಾಗ ನೆರವಾಗಬೇಕಾದ ಸರ್ಕಾರ ಕೊರೊನಾ ಹೆಸರಲ್ಲಿ ಕೋಟಿ ಕೋಟಿ ಲೂಟಿ ನಡೆಸಿರುವುದು ತನಿಖೆಯಾಗಬೇಕು ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್

ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಎದುರು ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡ ಬಿಜೆಪಿ ಸರ್ಕಾರದ ವಿರುದ್ಧದ ಜನಧನಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ರೈತರ ಹೆಸರಲ್ಲಿ ತರುವ ಬಹುತೇಕ ಯೋಜನೆಗಳಿಂದ ದೊಡ್ಡ ಉದ್ಯಮಿಗಳು ಉದ್ಧಾರವಾಗುತ್ತಿದ್ದಾರೆಯೇ ಹೊರತು ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ಈ ಮೂಲಕ ಬಿಜೆಪಿ ಸರ್ಕಾರ ರೈತರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಕೈಗಾರಿಕಾ ವಿವಾದಗಳ ಕಾಯ್ದೆ, ತಿದ್ದುಪಡಿ ಸುಗ್ರೀವಾಜ್ಞೆ ಹಿಂಪಡೆಯಬೇಕು. ಅತಿವೃಷ್ಟಿಯಿಂದ ಆಗುತ್ತಿರುವ ಅನಾಹುತಗಳಿಗೆ ಪರಿಹಾರ ಕಲ್ಪಿಸಬೇಕು. ಕೊರೊನಾ ಮಹಾಮಾರಿಯ ಸಂಕಷ್ಟದಲ್ಲಿರುವ ಬಡವರ ಹೆಸರಲ್ಲೂ ಸಹ ಕೋಟ್ಯಾಂತರ ಹಣ ಲೂಟಿ ಮಾಡಲಾಗಿದೆ. ಮಾಸ್ಕ್, ಸ್ಯಾನಿಟೈಸರ್, ಆಕ್ಸಿಜನ್ ಉಪಕರಣ, ಥರ್ಮಲ್ ಸ್ಕ್ಯಾನರ್, ಪಿಪಿಇ ಕಿಟ್ ಖರೀದಿ ನೆಪದಲ್ಲಿ ಹಗಲು ದರೋಡೆಗೆ ಬಿಜೆಪಿ ಸರ್ಕಾರ ಇಳಿದಿದೆ. ಕೂಡಲೇ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನಡೆಸಬೇಕು ಎಂದು ಒತ್ತಾಯಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ವರ ರಾವ್ ಮಾಲಿಪಾಟೀಲ, ಜಿಪಂ ಸದಸ್ಯ ದಾಮೋದರರೆಡ್ಡಿ, ಸತೀಶರೆಡ್ಡಿ ಪಾಟೀಲ ರಂಜೋಳ, ಜೈಭೀಮ ಊಡಗಿ, ಅಶೋಕ ದಂಡೋತಿ, ಜಗನ್ನಾಥ ಚಿಂತಪಳ್ಳಿ, ಮಾತನಾಡಿ, ಸಹಾಯಕ ಆಯುಕ್ತ ರಮೇಶ ಕೋಲಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಹಾಪ್​ಕಾಮ್ಸ್ ರಾಜ್ಯ ಅಧ್ಯಕ್ಷ ಬಸವರಾಜ ಪಾಟೀಲ ಊಡಗಿ, ವಿಶ್ವನಾಥ ಪಾಟೀಲ ಮುನ್ನಾಗೌಡ, ಸುಭಾಶ ನಿಷ್ಠಿ, ವೆಂಕಟರಾಮರೆಡ್ಡಿ ಕಡತಾಲ, ರಾಜಶೇಖರ ಪುರಾಣಿಕ, ರಾಜು ಹಡಪದ್, ಸತ್ತಾರ ನಾಡೇಪಲ್ಲಿ, ಗಫೂರ್, ಮೈನೋದ್ದಿನ್ ಕಾಳಗಿ, ನಾಜಿಮೋದ್ದಿನ್, ಸೋಮಶೇಖರ ಬಿಬ್ಬಳ್ಳಿ, ಭೀಮರಾವ ಅಳ್ಳೊಳ್ಳಿ, ಸಣ್ಣ ಭಾನರೆಡ್ಡಿ ಭುತಪೂರ, ಮಹೇಶ ಎಳಮನಿ, ವೆಂಕಟಪ್ಪ ಮೋತಕಪಲ್ಲಿ, ಮಾರುತಿ ಮುಗಟಿ, ಸಂತೋಷ ತಳವಾರ, ದತ್ತಾತ್ರೇಯ ಐನಾಪೂರ, ಬಸವರಾಜ ರಾಯಕೋಡ, ಸಂತೋಷ ಮಹಾರಾಜ, ಅಂಕಿತ ಜೋಶಿ, ಶರಣಗೌಡ, ಜಗನ್ನಾಥ ಪಾಟೀಲ ಬಿಬ್ಬಳ್ಳಿ, ರುದ್ರು ಪಿಲ್ಲಿ ಇದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.