ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಪಾಲಿಕೆ ಸದಸ್ಯೆವೋರ್ವರು ಸೆರಗೊಡ್ಡಿ ಮತಯಾಚಿಸುವ ಮೂಲಕ ಗಮನ ಸೆಳೆದರು.
ನಗರದ ಏಷ್ಯನ್ ಮಾಲ್ ಬಳಿಯ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರ ಬಂಜಾರಾ ಸಮಾವೇಶ ಏರ್ಪಡಿಸಲಾಗಿತ್ತು. ಈ ವೇಳೆ ತಾರ ಫೈಲ್ ಬಡಾವಣೆಯ ಪಾಲಿಕೆ ಸದಸ್ಯೆ ಹಾಗೂ ನಗರ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆಯಾಗಿರುವ ಲತಾ ರಾಠೋಡ ಭಾಷಣದ ಕೊನೆಯಲ್ಲಿ ಸೆರಗೊಡ್ಡಿ ತಮ್ಮ ಬಂಜಾರ ಭಾಷೆಯಲ್ಲಿ ಖರ್ಗೆಯವರ ಪರ ಮತಯಾಚಿಸಿದರು. ಅಲ್ಲದೇ ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದರು.
ಈ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಜಾರ ಸಮುದಾಯದ ಜನರು ಸೇರಿದಂತೆ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.