ETV Bharat / state

ಧಮ್ ಇದ್ರೆ ಮೋದಿ ಬೆಂಗಳೂರಲ್ಲಿ ಅಗ್ನಿಪಥ್​ ಬಗ್ಗೆ ಸುದ್ದಿಗೋಷ್ಟಿ ಮಾಡಲಿ : ಪ್ರಿಯಾಂಕ್ ಖರ್ಗೆ ಸವಾಲು

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಎಂಟು ವರ್ಷದ ಸಾಧನೆಗಳ ಬಗ್ಗೆ ಬಹಳ ವಿಜೃಂಭಣೆಯಿಂದ ಉತ್ಸವವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಸಂವಿಧಾನದ ಎಲ್ಲಾ ಆಶಯಗಳನ್ನ ಈಡೇರಿಸಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಮೋದಿಯವರ ಮಾಸ್ಟರ್ ಸ್ಟ್ರೋಕ್ ಗಳನ್ನು ಕೂಡಾ ಪರಿಶೀಲನೆ ಮಾಡಿಕೊಳ್ಳಬೇಕು ಎಂದು ಪ್ರಿಯಾಂಕ್​ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

author img

By

Published : Jun 19, 2022, 5:01 PM IST

Updated : Jun 19, 2022, 5:27 PM IST

ಅಗ್ನಿಪಥ್​  ಬಗ್ಗೆ ಕಿಡಿಕಾರಿದ ಕಾಂಗ್ರೆಸ್​ ಮುಖಂಡ ಪ್ರಿಯಾಂಕ್ ಖರ್ಗೆ

ಕಲಬುರಗಿ: ಅಗ್ನಿಪಥ್ ವಿರೋದಿಸಿ ನಡೆಯುತ್ತಿರುವ ಪ್ರತಿಭಟನೆಗಳಿಂದ ದೇಶ ಹೊತ್ತಿ‌ ಉರಿಯುತ್ತಿದೆ. 200ಕ್ಕೂ ಹೆಚ್ಚು ರೈಲುಗಳು ಬಂದ್ ಆಗಿವೆ.‌ ಹಲವಾರು ರೈಲುಗಳು ಬೆಂಕಿಗೆ ಆಹುತಿಯಾಗಿವೆ. ರಾಜ್ಯದಲ್ಲಿಯೂ ಕೂಡಾ ಪ್ರತಿಭಟನೆ‌ ನಡೆಯುತ್ತಿದೆ. ಯುವಕರು ರಸ್ತೆಗಿಳಿದು‌ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ದೇಶದ ಯುವಕರ ಭವಿಷ್ಯ ಹಾಳು‌ ಮಾಡಲು ಮೋದಿ ಸರ್ಕಾರ ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಎಂಟು ವರ್ಷದ ಸಾಧನೆಗಳ ಬಗ್ಗೆ ಬಹಳ ವಿಜೃಂಭಣೆಯಿಂದ ಉತ್ಸವವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ. ಸಂವಿಧಾನದ ಎಲ್ಲಾ ಆಶಯಗಳನ್ನ ಈಡೇರಿಸಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಮೋದಿಯವರ ಮಾಸ್ಟರ್ ಸ್ಟ್ರೋಕ್ ಗಳನ್ನು ಕೂಡಾ ಪರಿಶೀಲನೆ ಮಾಡಿಕೊಳ್ಳಬೇಕು. ಯಾವ ಯೋಜನೆಗಳು ಉದ್ದೇಶ ಮತ್ತು ಗುರಿ ಮುಟ್ಟಲಿಲ್ಲ. ಈ ಹಿಂದೆ ರೈತರೇ ರಸ್ತೆಗಿಳಿದು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಮಾಡಿದರು. ಬಿಜೆಪಿ ಶಾಸಕರು, ಸಂಸದರು ವಕ್ತಾರರ ಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ. ಕಾರಣ‌ ರಾತ್ರಿ ಮೋದಿ ಕನಸ್ಸಲ್ಲಿ ಕಂಡಿದ್ದನ್ನ ಇವರು ಮಾಧ್ಯಮದಲ್ಲಿ ಡಿಫೆಂಡ್ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ವಾಗ್ದಾಳಿ ನಡೆಸಿದರು.

ಈ‌ ಯೋಜನೆ ಪ್ರಕಾರ ಹೊಸ ಸೈನಿಕರನ್ನ ಆರು‌ ತಿಂಗಳ‌ ತರಬೇತಿ‌ ನೀಡಿ ಅಗ್ನಿವೀರರ ಹೆಸರನಲ್ಲಿ‌ ಅವರನ್ನು‌ ನೌಕಾದಳ, ಭೂದಳ ಹಾಗೂ‌ ವಾಯುದಳದ ಸೈನಿಕರನ್ನಾಗಿ‌ 64,000 ಸೈನಿಕರನ್ನ ನೇಮಕ ಮಾಡಿ‌ ನಾಲ್ಕು ವರ್ಷದ ನಂತರ ಅವರನ್ನು ಸೇವೆಯಿಂದ‌ ಬಿಡುಗಡೆ ಮಾಡುತ್ತಾರೆ. ಆಗ 75% ಸೇವಾ ಕಮಿಷನ್ ನೀಡುತ್ತಾರೆ. ಇದಕ್ಕೆ ಮಾಜಿ ಸೈನಿಕರು‌ ವಿರೋಧಿಸಿದ್ದಾರೆ. ಈ ಯೋಜನೆ ತರುವ ಮುನ್ನ ಪೈಲಟ್ ಪ್ರಾಜೆಕ್ಟ್ ಮಾಡಬೇಕಿತ್ತು. ಯಾಕೆಂದರೆ ಭಾರತವು ಪಾಕಿಸ್ತಾನ, ಚೀನಾ ಹಾಗೂ ನೇಪಾಳದಂತ ದೇಶಗಳ ಗಡಿ ಹಂಚಿಕೊಂಡಿದೆ. ಚೀನಾ ಈಗಾಗಲೇ ಭಾರತದ ಗಡಿ ಒಳಗೆ ಬಂದು ಗ್ರಾಮಗಳನ್ನೇ ನಿರ್ಮಿಸಿಕೊಂಡಿದೆ. ಹೀಗಿರುವಾಗ ಒಪ್ಪಂದ‌ದ ಮೇಲೆ ಸೈನಿಕರನ್ನು ನೇಮಿಸುವುರು ಹೇಗೆ ಸೂಕ್ತ ಎನ್ನುವ ಪ್ರಶ್ನೆ ಎದ್ದಿದೆ ಎಂದರು.

ಧಮ್ ಇದ್ರೆ ಮೋದಿ ಬೆಂಗಳೂರಲ್ಲಿ ಅಗ್ನಿಪಥ್​ ಬಗ್ಗೆ ಸುದ್ದಿಗೋಷ್ಟಿ ಮಾಡಲಿ : ಪ್ರಿಯಾಂಕ್ ಖರ್ಗೆ ಸವಾಲು

ಆರು ತಿಂಗಳು ತರಬೇತಿ ಸಾಕಾಗುತ್ತದೆಯೇ? : ತಜ್ಞರ ಪ್ರಕಾರ 6-7 ವರ್ಷದ ತರಬೇತಿ ನಂತರ ಒಬ್ಬ ಸೈನಿಕ‌ ಯುದ್ಧಭೂಮಿಗೆ ಹೋಗಲು ಯೋಗ್ಯನಾಗುತ್ತಾನೆ. ಹೀಗಿರುವಾಗ ಕೇವಲ ಆರು ತಿಂಗಳ ತರಬೇತಿ‌ ಹೊಂದಿ ಕೇವಲ ನಾಲ್ಕು ವರ್ಷ ಮಾತ್ರ ಸೈನ್ಯದಲ್ಲಿ‌ ಇರಬೇಕಾದರೆ ಸೈನಿಕ‌ ಹೋರಾಟದ ಮನೋಭಾವನೆಯಿಂದ‌ ಕೆಲಸ ಮಾಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಮೋದಿಗೆ ಸವಾಲ್ : ಪ್ರಧಾನಿ ನರೇಂದ್ರ ಮೋದಿಯವರ ಒಂದೊಂದು ಯೋಜನೆಗಳು ದೇಶದಲ್ಲಿ ಒಂದೊಂದು ವಿವಾದ ಸೃಷ್ಟಿಸುತ್ತಿವೆ. ಡಿಫೆನ್ಸ್ ಎಕ್ಸ್‌ಪರ್ಟ್‌ಗಳ ಜೊತೆ ಚರ್ಚಿಸಿ ಅಗ್ನಿಪಥ್ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಿ. ಯುವಕರ ದಾರಿಗೆ ದೀಪ ಆಗೋದು ಬಿಟ್ಟು, ಮೋದಿಯವರು ಬೆಂಕಿ ಇಡ್ತಿದಾರೆ. ನಾಳೆ ಬೆಂಗಳೂರಿಗೆ ಮೋದಿ ಬರ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಒಂದೇ ಒಂದು ಸುದ್ದಿಗೋಷ್ಟಿಯನ್ನು ಅವರು ಮಾಡಿಲ್ಲ. ಸುದ್ದಿಗೋಷ್ಟಿ ನಡೆಸಲು ಮೋದಿಯವರಿಗೆ ಸಿಎಂ, ಕಟೀಲ್ ಮನವರಿಕೆ ಮಾಡಿಕೊಡಲಿ. ಧಮ್ ಇದ್ರೆ ಈ ಬಗ್ಗೆ ಒಂದು ಸುದ್ದಿಗೋಷ್ಟಿ ಮಾಡಲಿ ಎಂದು ಮೋದಿಗೆ ಸವಾಲು ಹಾಕಿದರು.

ಶಾ ವಿರುದ್ಧ ಕಿಡಿ : ಗಲಭೆಗಳಾದಾಗ ಗೃಹ ಸಚಿವ ಅಮಿತ್​ ಶಾ ಸುಮ್ಮನಾಗುತ್ತಾರೆ. ಗಲಾಟೆಗಳಾದರೂ ಒಂದೇ ಒಂದು ಹೇಳಿಕೆ ಇಲ್ಲ ಎಂದು ಪ್ರಿಯಾಂಕ್​ ಖರ್ಗೆ ಹರಿಹಾಯ್ದರು.

ಇದನ್ನೂ ಓದಿ: ಯುಪಿಯಲ್ಲಿ ಎಲ್ಲೆಲ್ಲೂ 'ಬುಲ್ಡೋಜರ್' ಸದ್ದು.. ವಧುವಿನ ಮನೆಗೆ ವರ ತಲುಪಿದ್ದೂ ಇದರಲ್ಲೇ!

Last Updated : Jun 19, 2022, 5:27 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.