ETV Bharat / state

ಪ್ರಭಾವಿ ರಾಜಕಾರಣಿಯೊಬ್ಬರಿಂದ ನನ್ನ ಕೊಲೆಗೆ ಸುಪಾರಿ: ಕಾಂಗ್ರೆಸ್​ ಮುಖಂಡ ನಾಟೀಕಾರ್​ ಆರೋಪ - kalburgi congress news

ಕಲಬುರಗಿ ಜಿಲ್ಲೆ ಅಫಜಲಪರ ತಾಲೂಕಿನಲ್ಲಿ ಪ್ರಭಾವಿ ರಾಜಕೀಯ ವ್ಯಕ್ತಿಗಳಿಂದ ನನ್ನು ಕೊಲೆ ಮಾಡಲು ಸುಪಾರಿ ನೀಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಶಿವಕುಮಾರ್ ನಾಟೀಕಾರ್​ ಆರೋಪಿಸಿದರು.

congress leader natikar press meet
ಕಾಂಗ್ರೆಸ್ ಮುಖಂಡ ಶಿವಕುಮಾರ್ ನಾಟೀಕಾರ್​
author img

By

Published : Sep 10, 2020, 10:09 PM IST

ಕಲಬುರಗಿ: ಪ್ರಭಾವಿ ರಾಜಕಾರಣಿಯೊಬ್ಬರು ಸುಪಾರಿ ನೀಡಿ ನನ್ನ ಕೊಲೆಗೆ ಯತ್ನಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಿವಕುಮಾರ್ ನಾಟೀಕಾರ್​ ಆರೋಪಿಸಿದರು.

ಕಾಂಗ್ರೆಸ್ ಮುಖಂಡ ಶಿವಕುಮಾರ್ ನಾಟೀಕಾರ್​

ಆಗಸ್ಟ್​ 24 ರಂದು ಸುಪಾರಿ ಹಂತಕ ಪಿಸ್ತೂಲ್​ನೊಂದಿಗೆ ನನ್ನ ಮನೆಗೆ ನುಗ್ಗಿ ಕೊಲೆಗೆ ಯತ್ನಿಸಿದ್ದಾನೆ. ನಾನು ಹೊರಗಡೆ ಇಲ್ಲದೆ ಇರುವುದನ್ನು ಕಂಡು ಕಾರು ಹಾಗೂ ಮನೆ ಮೇಲೆ ದಾಳಿ ಮಾಡಿ, ಪರಾರಿಯಾಗಿದ್ದಾನೆ ಎಂದು ಹೇಳಿದರು.

ಈ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಇದರ ಹಿಂದೆ ಅಫಜಲಪುರ ತಾಲೂಕಿನ ಪ್ರಭಾವಿ ರಾಜಕಾರಣಿಯ ಕೈವಾಡವಿದ್ದು, ಕೆಲವೇ ದಿನಗಳಲ್ಲಿ ಅವರ ಹೆಸರು ಬಹಿರಂಗಪಡಿಸುತ್ತೇನೆ. ಅಫಜಲಪುರದಲ್ಲಿ ಗೂಂಡಾ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ರಾಜಕೀಯವಾಗಿ ಬೆಳೆಯುವವರನ್ನು ಕಂಡರೆ ಕೆಲವರಿಗೆ ಆಗುವುದಿಲ್ಲ ಎಂದು ಹೇಳಿದರು.

ಹೀಗಾಗಿಯೇ ನಮ್ಮಂಥವರನ್ನು ಮಟ್ಟಹಾಕಲು ಸುಪಾರಿ ಕಿಲ್ಲರ್​ಗಳನ್ನು ಬಳಸಿಕೊಳ್ಳುತ್ತಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಎಂದು ನಾಟೀಕಾರ ಆಗ್ರಹಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.