ಕಲಬುರಗಿ: ಬ್ಯಾಂಕ್‍ನಿಂದ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ 1 ಲಕ್ಷ 80 ಸಾವಿರ ಹಣವನ್ನು ಹಾಡಹಗಲೇ ಕಳ್ಳರಿಬ್ಬರು ಎಗರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಸೇಡಂ ಪಟ್ಟಣದ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಉದ್ಯಮಿ ಹಾಗೂ ರಾಜಕಾರಣಿಯಾಗಿರುವ ಅಶೋಕ ಮಹಾಡಿಕ್ ಎನ್ನೋರೇ ಹಣ ಕಳೆದುಕೊಂಡವರು. ಮನೆಯಲ್ಲಿ ಮದುವೆ ಇರೋದ್ರಿಂದ ಅಶೋಕ ಮಹಾಡಿಕ್ ಅವರು ಸೇಡಂ ಪಟ್ಟಣದ ಎಸ್ಬಿಐ ಬ್ಯಾಂಕ್‍ನಿಂದ 1 .80 ಲಕ್ಷ ಹಣ ನಗದು ಡ್ರಾ ಮಾಡಿಕೊಂಡು ಬಂದಿದ್ದರು.
ಇಲ್ಲಿನ ಜಿಕೆ ಪೆಟ್ರೋಲ್ ಬಂಕ್ ಬಳಿ ತೆರಳಿ ಬೈಕ್ ಮೇಲೆ ಹಣದ ಬ್ಯಾಗ್ ಇಟ್ಟು ತಮ್ಮ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದರು. ಆಗ ಬೈಕ್‍ನಲ್ಲಿ ಬಂದಿದ್ದ ಇಬ್ಬರು ಕಳ್ಳರು ಹಣದ ಬ್ಯಾಗ್ ಅನ್ನು ಕದ್ದೊಯ್ದಿ ದ್ದಾರೆ ಎಂದು ಮಹಾಡಿಕ್ ತಿಳಿಸಿದ್ದಾರೆ.
ಕಳ್ಳತನದ ಪ್ರತಿಯೊಂದು ದೃಶ್ಯಾವಳಿಗಳು ಬ್ಯಾಂಕ್ ಮತ್ತು ಪೆಟ್ರೋಲ್ ಬಂಕ್ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಆರೋಪಿಗಳ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.