ಕಲಬುರಗಿ: ಜಿಲ್ಲೆಯ ಶ್ರೀವಿಜಯ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಸಿಎಂ ಯಡಿಯೂರಪ್ಪ ಅವರಿಗೆ ನಿರಂತರ ಫೋನ್ ಕರೆಗಳು ಬರುತ್ತಿದ್ದ ಹಿನ್ನಲೆ ಅವರು ಕಾರ್ಯಕ್ರಮದ ಮಧ್ಯೆದಲ್ಲೇ ಎದ್ದುಹೋಗಿ ಫೋನ್ನಲ್ಲಿ ಮಾತನಾಡುವಂತ ಪ್ರಸಂಗ ಕಂಡುಬಂತು.
ಉದ್ಘಾಟನಾ ಭಾಷಣ ಮುಗಿಸಿ ಕುಳಿತು ಸಮ್ಮೇಳನಾಧ್ಯಕ್ಷರ ಭಾಷಣ ಆಲಿಸುತ್ತಿದ್ದ ವೇಳೆ ಸಿಎಂಗೆ ಹೈಕಮಾಂಡ್ನಿಂದ ಫೋನ್ ಬಂದಿದ್ದು, ಸಚಿವ ಸಂಪುಟದ ತಲೆಬಿಸಿ ಕಾರ್ಯಕ್ರಮದಲ್ಲೂ ಸಿಎಂರನ್ನು ಬಿಡಲಿಲ್ಲ ಎನ್ನುವಂತಿತ್ತು.
ಕಾರ್ಯಕ್ರಮದ ನಂತರ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಲು ಸಿಎಂ ನಿರ್ಧರಿಸಿದ್ದರು. ಆದರೆ, ಇದ್ದಕ್ಕಿದ್ದಂತೆ ಕಾರ್ಯಕ್ರಮ ರದ್ದಾಯಿತು.