ಕಲಬುರಗಿ: ಕಳೆದ ಒಂದು ವಾರದಿಂದ ಖಾಲಿ ಇದ್ದ ಕಲಬುರಗಿ ಮಹಾನಗರ ಪಾಲಿಕೆ ಕಮಿಷನರ್ ಸ್ಥಾನಕ್ಕೆ ಭುವನೇಶ ಪಾಟೀಲ್ ಅವರನ್ನು ಸರ್ಕಾರ ನಿಯೋಜಿಸಿದ್ದು, ಇಂದು ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಇದ್ದ ಕಮಿಷನರ್ ಶಂಕ್ರಣ್ಣ ವಣಿಕ್ಯಾಳ ಭ್ರಷ್ಟಾಚಾರದ ಆರೋಪದಡಿ ಸಿಕ್ಕಿಬಿದ್ದಿದ್ದಾರೆ. ಅವರಿಂದ ತೆರವಾಗಿದ್ದ ಕಮಿಷನರ್ ಸ್ಥಾನಕ್ಕೆ ಭುವನೇಶ ಅವರನ್ನು ನೇಮಕ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ಭುವನೇಶ ಪಾಟೀಲ್ ಅವರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: 2ನೇ ಅಭ್ಯರ್ಥಿ ಗೆಲುವಿನ ಚರ್ಚೆಗೆ ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ