ETV Bharat / state

ಸರ್ವಜನ ವಶೀಕರಣಕ್ಕಾಗಿ ಗ್ರಾ.ಪಂ ಕಚೇರಿಯಲ್ಲೇ ನಡೆದಿದೆಯಂತೆ ವಾಮಾಚಾರ.!? ಹೀಗೊಂದು ಗುಲ್ಲು - Malagatti Village Arbitration Office

ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ, ಸದಸ್ಯರು ಮಾತ್ರವಲ್ಲ ಗ್ರಾಮ ಪಂಚಾಯತ್ ಕಚೇರಿಗೆ ಬರುವ ಸಾರ್ವಜನಿಕರು ಸಹ ನನ್ನ ವಶದಲ್ಲಿ ಇರಬೇಕು ಎಂದು ಗ್ರಾ.ಪಂ ಕಚೇರಿಗೆ ವಾಮಾಚಾರ ಮಾಡಿಸಿದ್ದಾರೆ ಎನ್ನಲಾದ ವಿಚಿತ್ರ ಘಟನೆ ನಡೆದಿದೆ. ಇದು ನಿಜವೋ ಕಿಡಿಗೇಡಿಗಳ ಕೃತ್ಯವೋ ಎನ್ನುವುದು ತನಿಖೆ ಬಳಿಕವೇ ಗೊತ್ತಾಗಬೇಕಾಗಿದೆ

ಸರ್ವಜನ ವಶೀಕರಣಕ್ಕಾಗಿ ಗ್ರಾ.ಪಂ ಕಚೇರಿಯಲ್ಲಿ ವಾಮಾಚಾರ.!
author img

By

Published : Sep 25, 2019, 10:07 PM IST

ಕಲಬುರಗಿ: ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ , ಸದಸ್ಯರು ಮಾತ್ರವಲ್ಲ ಗ್ರಾಮ ಪಂಚಾಯತ್ ಕಚೇರಿಗೆ ಬರುವ ಸಾರ್ವಜನಿಕರು ಸಹ ನನ್ನ ವಶದಲ್ಲಿ ಇರಬೇಕು ಎಂದು ಗ್ರಾ.ಪಂ ಕಚೇರಿಗೆ ವಾಮಾಚಾರ ಮಾಡಿಸಿದ್ದಾರೆ ಎನ್ನಲಾದ ವಿಚಿತ್ರ ಘಟನೆ ನಡೆದಿದೆ.

Balck Magic in Grampanchayat office
ಗ್ರಾ.ಪಂ ಕಚೇರಿಯಲ್ಲಿ ವಾಮಾಚಾರ

ಶಹಾಬಾದ ಸಮೀಪದ ಮಾಲಗತ್ತಿ ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಇಂತಹದೊಂದು ಬ್ಲ್ಯಾಕ್ ಮಾಜಿಕ್ ಮಾಡಲಾಗಿದೆ. ಕಚೇರಿ ಪ್ರವೇಶಿಸುವ ಮುಖ್ಯದ್ವಾರದ ಬಲಭಾಗದ ಮೂಲೆಯಲ್ಲಿರುವ ಕಪಾಟಿನ ಅಡಿ ವಾಮಾಚಾರ ಮಾಡಿದ ಎರಡು ಚೀಟಿಗಳು ಪತ್ತೆಯಾಗಿವೆ. ಚೀಟಿಗಳಲ್ಲಿ ಕುಂಬಳಕಾಯಿ ಚಿತ್ರ, ಮನುಷ್ಯನ ಮುಖದ ಆಕಾರದ ಚಿತ್ರ, ತಕ್ಕಡಿ ಆಕಾರದ ಮಧ್ಯದಲ್ಲಿ ಸ್ವಸ್ತಿಕ್ ಚಿತ್ರ, ದೇವರ ನಾಮಸ್ಮರಣ, ಆದಿಶಕ್ತಿ, ಆದೀಶ್ವರ ನಾಮಸ್ಮರಣ, ಹಲವು ಅಂಕಿ - ಸಂಖ್ಯೆಗಳು, ಅನೇಕರ ಹೆಸರುಗಳು ಇವೆ. ಒಂದರಲ್ಲಿ ಗ್ರಾಮ ಪಂಚಾಯ್ತಿ ಸಿಬ್ಬಂದಿ, ಜನಪ್ರತಿನಿಧಿಗಳು ಸೇರಿ 24 ಹೆಸರುಗಳಿದ್ದು, ಇನ್ನೊಂದರಲ್ಲಿ ಗ್ರಾಮ ಪಂಚಾಯಿತಿ 11 ಜನಪ್ರತಿನಿಧಿಗಳ ಹೆಸರಿದೆ. ಚೀಟಿಗೆ ಅರಿಶಿಣ - ಕುಂಕುಮ, ಗುಲಾಲ್ ಹಚ್ಚಿ ಪೂಜೆ ಮಾಡಲಾಗಿದೆ.

ಸರ್ವಜನ ವಶೀಕರಣ ಎಂದು ಚೀಟಿಯ ಕೊನೆಯಲ್ಲಿ ಬರೆಯಲಾಗಿದೆ. ಇದರೊಂದಿಗೆ ಕಚೇರಿಗೆ ಬರುವ ಎಲ್ಲರನ್ನೂ ವಾಮಾಚಾರದ ಮೂಲಕ ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ದುರುದ್ದೇಶ ವ್ಯಕ್ತವಾಗಿದೆ ಎಂಬ ವಿಶ್ಲೇಷಣೆಗಳು ಕೇಳಿ ಬಂದಿವೆ. ಎರಡು ಚೀಟಿಗಳು ಸದಸ್ಯರೊಬ್ಬರಿಗೆ ಸಿಕ್ಕಿದ್ದು, ಈ ಕುರಿತು ಸೂಕ್ತ ತನಿಖೆಗೆ ಸದಸ್ಯರು ಆಗ್ರಹಿಸಿದ್ದಾರೆ.

ಇಲ್ಲಿ ನಿಜಕ್ಕೂ ವಾಮಾಚಾರ ನಡೆದಿದೆಯೋ ಅಥವಾ ಯಾರಾದರು ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೋ ಎಂಬುದು ತನಿಖೆಯಿಂದ ಬಯಲಾಗಬೇಕಿದೆ.

Intro:ಕಲಬುರಗಿ: ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಅಧಿಕಾರಿ, ಸದಸ್ಸರು ಮಾತ್ರವಲ್ಲ ಗ್ರಾಮ ಪಂಚಾಯತ್ ಕಚೇರಿಗೆ ಬರುವ ಸಾರ್ವಜನಿಕರು ಸಹ ನನ್ನ ವಶದಲ್ಲಿ ಇರಬೇಕು ಎಂದು ಗ್ರಾ.ಪಂ ಕಚೇರಿಗೆ ವಾಮಾಚಾರ ಮಾಡಿಸಿರುವ ವಿಚಿತ್ರ ಘಟನೆ ನಡೆದಿದೆ.

ಶಹಾಬಾದ ಸಮೀಪದ ಮಾಲಗತ್ತಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಇಂತಹದೊಂದು ಬ್ಲ್ಯಾಕ್ ಮಾಜಿಕ್ ಮಾಡಲಾಗಿದೆ. ಕಚೇರಿ ಪ್ರವೇಶಿಸುವ ಮುಖ್ಯ ದ್ವಾರದ ಬಲಭಾಗದ ಮೂಲೆಯಲ್ಲಿರುವ ಅಲಮಾರಿ ಅಡಿಯಲ್ಲಿ ವಾಮಾಚಾರ ಮಾಡಿದ ಎರಡು ಚೀಟಿಗಳು ಪತ್ತೆಯಾಗಿವೆ.

ಚಿಟಿಗಳಲ್ಲಿ ಕುಂಬಳಕಾಯಿ ಚಿತ್ರ, ಮನುಷ್ಯನ ಮುಖ ಆಕಾರದ ಚಿತ್ರ, ತಕ್ಕಡಿ ಆಕಾರದ ಮದ್ಯದಲ್ಲಿ ಸ್ವಸ್ತಿಕ್ ಚಿತ್ರ, ದೇವರ ನಾಮಸ್ಮರಣ, ಆದಿಶಕ್ತಿ, ಆದೀಶ್ವರ ನಾಮಸ್ಮರಣ, ಹಲವು ಅಂಕಿ ಸಂಖ್ಯೆಗಳು, ಅನೇಕರ ಹೆಸರುಗಳು ಎರಡು ಚಿಟಿಯಲ್ಲಿವೆ. ಒಂದರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಜನಪ್ರತಿನಿಧಿಗಳು ಸೇರಿ 24 ಹೆಸರು, ಇನ್ನೊಂದರಲ್ಲಿ ಗ್ರಾಮ ಪಂಚಾಯತಿ 11 ಜನಪ್ರತಿನಿಧಿಗಳ ಹೆಸರುಳ್ಳ ಚಿಟಿಗೆ ಅರಸಿನ ಕುಂಕುಮ ಗುಲಾಲ್ ಇತ್ಯಾದಿಯಿಂದ ಪೂಜೆ ಮಾಡಲಾಗಿದೆ.

ಇನ್ನೊಂದು ಗಮನಾರ್ಹ ವಿಷಯ ಅಂದ್ರೆ ಸರ್ವಜನ ವಶೀಕರಣ ಎಂದು ಚಿಟಿಯ ಕೊನೆಯಲ್ಲಿ ಬರೆಯಲಾಗಿದೆ. ಇದರೊಂದಿಗೆ ಕಚೇರಿಗೆ ಬರುವ ಎಲ್ಲರನ್ನು ವಾಮಾಚಾರದ ಮೂಲಕ ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ದುರುದ್ದೇಶ ಪ್ರದರ್ಶನ ಮಾಡಲಾಗಿದೆ. ಎರಡು ಚಿಟಿಗಳು ಸದಸ್ಯರೊಬ್ಬರಿಗೆ ಸಿಕ್ಕಿದ್ದು, ಈ ಕುರಿತು ಸೂಕ್ತ ತನಿಖೆಗೆ ಸರ್ವ ಸದಸ್ಯರು ಆಗ್ರಹಿಸಿದ್ದಾರೆ. ಅದೇನೆ ಇರಲಿ ಮಾನವನ ಮೂಡನಂಬಿಕೆ ಪರಮಾವಧಿ ಗ್ರಾಮ ಆಡಳಿತ ಕೇಂದ್ರ ಕಚೇರಿವರೆಗೆ ತಲುಪಿದ್ದು ಮಾತ್ರ ನಿಜಕ್ಕೂ ದುರಂತದ ಸಂಗತಿ. ತಂತ್ರಜ್ಞಾನದ ಯುಗದಲ್ಲಿ ಇಂದಿಗೂ ಯಂತ್ರ ತಂತ್ರ ಬ್ಲಾಕ್ ಮ್ಯಾಜಿಕ್ ನಂತ ಮೌಡ್ಯ ಜೀವಂತ ಇರುವದು ವಿಪರ್ಯಾಸ್ ದ ಸಂಗತಿ.Body:ಕಲಬುರಗಿ: ಗ್ರಾ.ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಅಧಿಕಾರಿ, ಸದಸ್ಸರು ಮಾತ್ರವಲ್ಲ ಗ್ರಾಮ ಪಂಚಾಯತ್ ಕಚೇರಿಗೆ ಬರುವ ಸಾರ್ವಜನಿಕರು ಸಹ ನನ್ನ ವಶದಲ್ಲಿ ಇರಬೇಕು ಎಂದು ಗ್ರಾ.ಪಂ ಕಚೇರಿಗೆ ವಾಮಾಚಾರ ಮಾಡಿಸಿರುವ ವಿಚಿತ್ರ ಘಟನೆ ನಡೆದಿದೆ.

ಶಹಾಬಾದ ಸಮೀಪದ ಮಾಲಗತ್ತಿ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಇಂತಹದೊಂದು ಬ್ಲ್ಯಾಕ್ ಮಾಜಿಕ್ ಮಾಡಲಾಗಿದೆ. ಕಚೇರಿ ಪ್ರವೇಶಿಸುವ ಮುಖ್ಯ ದ್ವಾರದ ಬಲಭಾಗದ ಮೂಲೆಯಲ್ಲಿರುವ ಅಲಮಾರಿ ಅಡಿಯಲ್ಲಿ ವಾಮಾಚಾರ ಮಾಡಿದ ಎರಡು ಚೀಟಿಗಳು ಪತ್ತೆಯಾಗಿವೆ.

ಚಿಟಿಗಳಲ್ಲಿ ಕುಂಬಳಕಾಯಿ ಚಿತ್ರ, ಮನುಷ್ಯನ ಮುಖ ಆಕಾರದ ಚಿತ್ರ, ತಕ್ಕಡಿ ಆಕಾರದ ಮದ್ಯದಲ್ಲಿ ಸ್ವಸ್ತಿಕ್ ಚಿತ್ರ, ದೇವರ ನಾಮಸ್ಮರಣ, ಆದಿಶಕ್ತಿ, ಆದೀಶ್ವರ ನಾಮಸ್ಮರಣ, ಹಲವು ಅಂಕಿ ಸಂಖ್ಯೆಗಳು, ಅನೇಕರ ಹೆಸರುಗಳು ಎರಡು ಚಿಟಿಯಲ್ಲಿವೆ. ಒಂದರಲ್ಲಿ ಗ್ರಾಮ ಪಂಚಾಯತಿ ಸಿಬ್ಬಂದಿ ಜನಪ್ರತಿನಿಧಿಗಳು ಸೇರಿ 24 ಹೆಸರು, ಇನ್ನೊಂದರಲ್ಲಿ ಗ್ರಾಮ ಪಂಚಾಯತಿ 11 ಜನಪ್ರತಿನಿಧಿಗಳ ಹೆಸರುಳ್ಳ ಚಿಟಿಗೆ ಅರಸಿನ ಕುಂಕುಮ ಗುಲಾಲ್ ಇತ್ಯಾದಿಯಿಂದ ಪೂಜೆ ಮಾಡಲಾಗಿದೆ.

ಇನ್ನೊಂದು ಗಮನಾರ್ಹ ವಿಷಯ ಅಂದ್ರೆ ಸರ್ವಜನ ವಶೀಕರಣ ಎಂದು ಚಿಟಿಯ ಕೊನೆಯಲ್ಲಿ ಬರೆಯಲಾಗಿದೆ. ಇದರೊಂದಿಗೆ ಕಚೇರಿಗೆ ಬರುವ ಎಲ್ಲರನ್ನು ವಾಮಾಚಾರದ ಮೂಲಕ ತಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳುವ ದುರುದ್ದೇಶ ಪ್ರದರ್ಶನ ಮಾಡಲಾಗಿದೆ. ಎರಡು ಚಿಟಿಗಳು ಸದಸ್ಯರೊಬ್ಬರಿಗೆ ಸಿಕ್ಕಿದ್ದು, ಈ ಕುರಿತು ಸೂಕ್ತ ತನಿಖೆಗೆ ಸರ್ವ ಸದಸ್ಯರು ಆಗ್ರಹಿಸಿದ್ದಾರೆ. ಅದೇನೆ ಇರಲಿ ಮಾನವನ ಮೂಡನಂಬಿಕೆ ಪರಮಾವಧಿ ಗ್ರಾಮ ಆಡಳಿತ ಕೇಂದ್ರ ಕಚೇರಿವರೆಗೆ ತಲುಪಿದ್ದು ಮಾತ್ರ ನಿಜಕ್ಕೂ ದುರಂತದ ಸಂಗತಿ. ತಂತ್ರಜ್ಞಾನದ ಯುಗದಲ್ಲಿ ಇಂದಿಗೂ ಯಂತ್ರ ತಂತ್ರ ಬ್ಲಾಕ್ ಮ್ಯಾಜಿಕ್ ನಂತ ಮೌಡ್ಯ ಜೀವಂತ ಇರುವದು ವಿಪರ್ಯಾಸ್ ದ ಸಂಗತಿ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.