ಕಲಬುರಗಿ: ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. 14 ವರ್ಷದ ಬಾಲಕನಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಪಿ-529 ಮಹಿಳೆಯ ಸಂಪರ್ಕದಿಂದ ಸೋಂಕು ತಗುಲಿದೆ.
ಸೋಂಕಿತ ಮಹಿಳೆ ಮೋಮಿನ್‌ಪುರದ ನಿವಾಸಿಯಾಗಿದ್ದು, ಈಕೆಗೆ ಇತ್ತೀಚೆಗೆ ಬಲಿಯಾದ 57 ವರ್ಷದ ಬಟ್ಟೆ ವ್ಯಾಪಾರಿ (ಪಿ-205)ಯ ಸಂಪರ್ಕದಿಂದ ಸೋಂಕು ತಗುಲಿತ್ತು. ಇದೀಗ ಮಹಿಳೆಯ ಸಂಪರ್ಕದಿಂದ ಬಾಲಕನಿಗೆ ಸೋಂಕು ತಗುಲಿದೆ.
ಮೃತಪಟ್ಟ ಬಟ್ಟೆ ವ್ಯಾಪಾರಿಯಿಂದ ಇದುವರೆಗೆ ಒಟ್ಟು 30 ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 73ಕ್ಕೆ ಏರಿಕೆಯಾಗಿದೆ.