ETV Bharat / state

2 ತಿಂಗಳ ಬಳಿಕ  ಸೇವೆ ಆರಂಭಿಸಿದ ಅಲಾಯನ್ಸ್ ಏರ್ ವಿಮಾನ ಸಂಸ್ಥೆ - Alliance Air news

ಲಾಕ್‍ಡೌನ್ 4.0 ಸಡಿಲಿಕೆಯ ಕಾರಣ ಗುರುವಾರ ಅಲಾಯನ್ಸ್ ಬೆಂಗಳೂರು - ಕಲಬುರಗಿ ಮಧ್ಯೆ ತನ್ನ ಸೇವೆ ಪ್ರಾರಂಭಿಸಿದೆ.

Alliance Air
ಅಲಾಯನ್ಸ್ ಏರ್ ವಿಮಾನ ಸಂಸ್ಥೆ
author img

By

Published : May 28, 2020, 10:21 PM IST

ಕಲಬುರಗಿ: ಲಾಕ್​​ಡೌನ್ ಕಾರಣದಿಂದ ಕಳೆದ ಎರಡು ತಿಂಗಳನಿಂದ ವಿಮಾನ ಸಂಚಾರ ಸೇವೆ ನಿಲ್ಲಿಸಿದ್ದ ಅಲಾಯನ್ಸ್ ಏರ್ ವಿಮಾನ ಸಂಸ್ಥೆಯು ತನ್ನ ಸೇವೆ ಮತ್ತೆ ಆರಂಭಿಸಿದೆ.

Alliance Air
Alliance Air

ಲಾಕ್‍ಡೌನ್ 4.0 ಸಡಿಲಿಕೆಯ ಕಾರಣ ಗುರುವಾರ ಅಲಾಯನ್ಸ್ ಬೆಂಗಳೂರು - ಕಲಬುರಗಿ ಮಧ್ಯೆ ತನ್ನ ಸೇವೆ ಪ್ರಾರಂಭಿಸಿದೆ. ಬೆಂಗಳೂರಿನಿಂದ 19 ಜನ ಯಾತ್ರಿಕರನ್ನು ಹೊತ್ತುಕೊಂಡು ಹೊರಟ ವಿಮಾನ ಬೆಳಗ್ಗೆ 11-45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದು ತಲುಪಿತು. ಮರಳಿ ಮಧ್ಯಾಹ್ನ 12: 25 ನಿಮಿಷಕ್ಕೆ ಇಲ್ಲಿಂದ 19 ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಿತು.

ಕಳೆದ ಮೇ-25 ರಂದು ಸ್ಟಾರ್ ಏರ್ ಸಂಸ್ಥೆಯು ಸಹ ಬೆಂಗಳೂರು - ಕಲಬುರಗಿ ನಡುವೆ ತನ್ನ ಸೇವೆ ಆರಂಭಿಸಿತ್ತು. ಭಾರತೀಯ ವಿಮಾನಯಾನ ಪ್ರಾಧಿಕಾರದ ಮಾರ್ಗಸೂಚಿಯಂತೆ ಕಲಬುರಗಿ ವಿಮಾನ ನಿಲ್ದಾಣದಿಂದ ಹೋಗುವ ಎಲ್ಲ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕನಿಂದ ಆರೋಗ್ಯದ ಬಗ್ಗೆ ಸ್ವಯಂ ದೃಢೀಕರಣ ಪಡೆದುಕೊಳ್ಳಲಾಗುತ್ತಿದೆ. ಆರೋಗ್ಯ ಸೇತು ಆ್ಯಪ್ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಲಗೇಜ್‍ಗಳನ್ನು ಡಿಸ್​​ಇನ್ಫೆಕ್ಟ್ ಮಾಡಿಯೆ ವಿಮಾನಕ್ಕೆ ಹತ್ತಿಸಲಾಗುತ್ತದೆ. ಇನ್ನು ಬೆಂಗಳೂರಿನಿಂದ ಬರುವ ಪ್ರಯಾಣಿಕರಿಗೂ ಸ್ಕ್ರೀನಿಂಗ್ ಮಾಡಲಾಗುವುದಲ್ಲದೇ ಎಲ್ಲರ ವಿವರವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಮಾಹಿತಿ ಪಡೆಯುತ್ತಿದ್ದಾರೆ.

ವಿಮಾನ ಸಂಚಾರ ಸಮಯದಲ್ಲಿ ಬದಲಾವಣೆ ಅಲಾಯನ್ಸ್ ಏರ್ ಸಂಸ್ಥೆಯ ಸೋಮವಾರ ಮತ್ತು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಗ್ಗೆ 8:45 ನಿಮಿಷಕ್ಕೆ ಆಗಮಿಸಿ 9:25ಕ್ಕೆ ಬೆಂಗಳೂರಿನತ್ತ ಮರು ಪ್ರಯಾಣ ಬೆಳಸಲಿದೆ. ಬುಧವಾರದಿಂದ ಭಾನುವಾರ ವರೆಗೆ ಬೆಳಗ್ಗೆ 11-45 ಗಂಟೆಗೆ ಆಗಮಿಸಿ 12-25ಕ್ಕೆ ಬೆಂಗಳೂರಿಗೆ ಟೇಕ್ ಆಫ್ ಆಗಲಿದೆ ಎಂದು ಜ್ಞಾನೇಶ್ವರರಾವ್ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.