ಕಲಬುರಗಿ: ಧರ್ಮರಾಜ್ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ್ ಚಡಚಣ ಕೊಲೆ ಪ್ರಕರಣಗಳಲ್ಲಿ ಅಕ್ರಮ ಪಿಸ್ತೂಲು ಪೂರೈಸಿದ ಆರೋಪಿ ಬಾಷಾಸಾಬ್ ನಧಾಫಗೆ ಕಲಬುರಗಿ ಹೈ ಕೋರ್ಟ್ ಜಾಮೀನು ನೀಡಿದೆ.
ಭೀಮಾ ತೀರದ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹಾಗೂ ಗಂಗಾಧರ್ ಚಡಚಣ ನಿಗೂಢ ಕೊಲೆ ಆರೋಪ ಪ್ರಕರಣದ ಆರೋಪಿಯಾದ ಬಾಷಾಸಾಬ್ ನಧಾಫಗೆ ಎರಡೂ ಪ್ರಕರಣಗಳಲ್ಲಿ ಕೋರ್ಟ್ ಜಾಮೀನು ನೀಡಿದೆ. ಎರಡೂ ಪ್ರಕರಣಗಳಲ್ಲಿ ಇತರೆ ಆರೋಪಿಗಳಿಗೂ ಈಗಾಗಲೇ ಜಾಮೀನು ದೊರೆತಿದೆ.
ನಧಾಫ ಪರವಾಗಿ ಹಿರಿಯ ವಕೀಲ ಸಿ. ವಿ. ನಾಗೇಶ್ ವಾದ ಮಂಡನೆ ಮಾಡಿದ್ದರು. ಹೈಕೋರ್ಟ್ ನ್ಯಾಯಮೂರ್ತಿ ಮಹ್ಮದ್ ನವಾಜ್ ಅವರನ್ನೊಳಗೊಂಡ ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿತ್ತು. ಆರೋಪಿ ಬಾಷಾಸಾಬ್ ನಧಾಫಗೆ ಕಡೆಗೂ ಜಾಮೀನು ಮಂಜೂರಾಗಿದೆ.