ETV Bharat / state

ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಮನಪರಿವರ್ತನೆಗೆ ಕ್ರಮ: ಕಲಬುರಗಿ ಸರ್ಕಾರಿ ವೀಕ್ಷಣಾಲಯದ ಪಾತ್ರವೇನು? - ಕಲಬುರಗಿ ಲೇಟೆಸ್ಟ್ ನ್ಯೂಸ್

ಬೆಳೆಯುವ ಹಂತದಲ್ಲಿರುವ ಕೆಲ ಮುಗ್ಧ ಮನಸ್ಸಿನ ಮಕ್ಕಳು ಯಾವುದೋ ಪ್ರಭಾವಕ್ಕೊಳಗಾಗಿ ಕೆಲವೊಮ್ಮ ಎಡವುದುಂಟು. ಆದ್ರೆ ಅವರನ್ನು ಕಠಿಣ ಕ್ರಮಗಳ ಮೂಲಕ ಶಿಕ್ಷಿಸಲಾಗುವುದಿಲ್ಲ. ಅವರ ಮನ ಪರಿವರ್ತನೆಗಾಗಿಯೇ ಸರ್ಕಾರಿ ವೀಕ್ಷಣಾಲಯ ಕಾರ್ಯ ನಿರ್ವಹಿಸುತ್ತಿದೆ. ಅದರಂತೆ ಕಲಬುರಗಿ ನಗರದಲ್ಲಿ ಸರ್ಕಾರಿ ವೀಕ್ಷಣಾಲಯವಿದ್ದು, ಅಲ್ಲಿ ಬರುವ ಮಕ್ಕಳ ಮನ ಪರಿವರ್ತನೆಗೆ ಹಲವು ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ.

actions to recover the child who involved in crime cases
ಕಾನೂನು ಸಂಘರ್ಷಕ್ಕೊಳಗಾದ ಮಕ್ಕಳ ಮನಪರಿವರ್ತನೆಗೆ ಕ್ರಮ; ಕಲಬುರಗಿ ಸರ್ಕಾರಿ ವೀಕ್ಷಣಾಲಯದ ಪಾತ್ರವೇನ?
author img

By

Published : Feb 23, 2021, 1:41 PM IST

ಕಲಬುರಗಿ: ಸಮಾಜದಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಜೈಲು ಶಿಕ್ಷೆ ಕಡ್ಡಾಯ. ಆದ್ರೆ ಅಪ್ರಾಪ್ತ ವಯಸ್ಸಿನ ಮಕ್ಕಳು ತಿಳಿದೋ ತಿಳಿಯದೋ ಅಪರಾಧ ಕೃತ್ಯಗಳಲ್ಲಿ ಭಾಗಿಯಾದರೆ ಅಂತಹವರ ಮನ ಪರಿವರ್ತನೆಗಾಗಿ ಇರುವ ಸರ್ಕಾರಿ ವೀಕ್ಷಣಾಲಯದಲ್ಲಿ ಯಾವ ರೀತಿ ಅವರ ಮನ ಪರಿವರ್ತನೆ ಮಾಡಲಾಗುತ್ತದೆ ಗೊತ್ತಾ? ಇಲ್ಲಿದೆ ಸರ್ಕಾರಿ ವೀಕ್ಷಣಾಲಯ ಕ್ರಮಗಳ ಒಂದಿಷ್ಟು ಮಾಹಿತಿ.

ಕಲಬುರಗಿ ಸರ್ಕಾರಿ ವೀಕ್ಷಣಾಲಯ

ತಪ್ಪು ಮಾಡದ ಮನುಷ್ಯನಿಲ್ಲ. ಆದ್ರೆ ಕೆಲ ಮುಗ್ಧ ಮನಸ್ಸಿನ ಮಕ್ಕಳು ಯಾವುದೋ ಪ್ರಭಾವಕ್ಕೊಳಗಾಗಿ ಕೆಲವೊಮ್ಮ ಎಡವುದುಂಟು. ಆದ್ರೆ ಅವರನ್ನು ಕಠಿಣ ಕ್ರಮಗಳ ಮೂಲಕ ಶಿಕ್ಷಿಸಲಾಗುವುದಿಲ್ಲ. ಅವರ ಮನ ಪರಿವರ್ತನೆಗಾಗಿಯೇ ಸರ್ಕಾರಿ ವೀಕ್ಷಣಾಲಯ ಕಾರ್ಯ ನಿರ್ವಹಿಸುತ್ತಿದೆ.

ಕಲಬುರಗಿ ಸರ್ಕಾರಿ ವೀಕ್ಷಣಾಲಯ:

ತಿಳಿದೋ ತಿಳಿಯದೋ ಈ ಮುಗ್ಧ ಜೀವಗಳು ಅಪರಾಧ ಕೃತ್ಯದಲ್ಲಿ ಭಾಗಿಯಾದರೆ ಅವರನ್ನು ಜೈಲು ಶಿಕ್ಷೆಗೆ ಒಳಪಡಿಸುವಂತಿಲ್ಲ. ಜೈಲು ಶಿಕ್ಷೆಗೆ ಒಳಪಡಿಸಿದರೆ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀಳಬಹುದು. ಉತ್ತಮ ಸಮಾಜಕ್ಕೆ ಕೊಡುಗೆಯಾಗಬೇಕಾದವರು ಮುಂದೆ ತಪ್ಪು ಹಾದಿ ಹಿಡಿಯಬಹುದು ಎನ್ನುವ ಕಾರಣಕ್ಕೆ ಸರ್ಕಾರಿ ವೀಕ್ಷಣಾಲಯದಲ್ಲಿ ಇಟ್ಟು ಅವರ ಮನ ಪರಿವರ್ತನೆಗೆ ಪ್ರಯತ್ನ ಮಾಡಬೇಕು ಎಂದು ಮಕ್ಕಳ ಆರೈಕೆ ಮತ್ತು ರಕ್ಷಣಾ ಕಾಯ್ದೆ ಹೇಳುತ್ತದೆ. ಅದರಂತೆ ಕಲಬುರಗಿ ನಗರದಲ್ಲಿ ಸರ್ಕಾರಿ ವೀಕ್ಷಣಾಲಯವಿದ್ದು, ಅಲ್ಲಿ ಬರುವ ಮಕ್ಕಳ ಮನ ಪರಿವರ್ತನೆಗೆ ಹಲವು ರೀತಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ.

6 ಮಂದಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳು:

25 ಮಕ್ಕಳ ರಕ್ಷಣಾ ಸಾಮರ್ಥ್ಯ ಇರುವ ಕಲಬುರಗಿಯ ವೀಕ್ಷಣಾಲಯದಲ್ಲಿ ಸದ್ಯ ಕಲಬುರಗಿ ಜಿಲ್ಲೆಯ ನಾಲ್ಕು ಹಾಗೂ ಯಾದಗಿರಿ ಜಿಲ್ಲೆಯ ಇಬ್ಬರು ಸೇರಿ 6 ಮಂದಿ ಕಾನೂನು ಸಂಘರ್ಷಕ್ಕೆ ಒಳಪಟ್ಟ ಮಕ್ಕಳಿದ್ದಾರೆ‌. ಮಕ್ಕಳ ಕಾನೂನು ಸಂಘರ್ಷಕ್ಕೆ ವಿಶೇಷ ನ್ಯಾಯಾಲಯ ಇರುವ ಕಾರಣ ಬಹುತೇಕ ಮಕ್ಕಳು ಹೆಚ್ಚಿನ ದಿನ ವೀಕ್ಷಣಾಲಯದಲ್ಲಿ ಇರುವುದಿಲ್ಲ. ಅವರು ಇರುವಷ್ಟು ದಿನ ಅವರ ಮನ ಪರಿವರ್ತನೆಗೆ ಪ್ರಯತ್ನಿಸಲಾಗುತ್ತಿದೆ.

ಮಕ್ಕಳಿಗೆ ತರಬೇತಿ:

ಮಕ್ಕಳಲ್ಲಿ ಮನಸ್ಥೈರ್ಯ ತುಂಬಲು ಪ್ರತಿ ಗುರುವಾರದಂದು ಬೆಂಗಳೂರು ಮೂಲದ ಎನ್‌ಜಿಒ ಸಂಸ್ಥೆಯಿಂದ ಆನ್‌ಲೈನ್ ತರಬೇತಿ, ವೈಯಕ್ತಿಕ ವ್ಯಕ್ತಿತ್ವ ಹೆಚ್ಚಿಸುವ ತರಬೇತಿ, ಸ್ಕಿಲ್ ಡೆವಲಪ್​ಮೆಂಟ್ ತರಬೇತಿ, ಕಂಪ್ಯೂಟರ್ ತರಬೇತಿ, ಕಲೆ, ಚಿತ್ರಕಲೆ, ಕೈಗಾರಿಕೆ ಇತ್ಯಾದಿ ತರಬೇತಿಗಳನ್ನು ಮಕ್ಕಳ ಮನಸ್ಥಿತಿ ಮತ್ತು ಅವರ ಆಸೆಯ ಆಧಾರದಲ್ಲಿ ನೀಡಲಾಗುತ್ತಿದೆ‌.

ವೀಕ್ಷಣಾಯಲದಲ್ಲಿರುವ ವ್ಯವಸ್ಥೆ:

ಕೋವಿಡ್ ಸಂದರ್ಭದಲ್ಲಿ ಬಟ್ಟೆಯಿಂದ ಮಾಸ್ಕ್ ತಯಾರಿಸಿ ನೀಡುವ ಮೂಲಕ ಮಾದರಿಯಾಗಿದ್ದಾರೆ. ಓದುವ ಮಕ್ಕಳ ಅನುಕೂಲಕ್ಕಾಗಿ ಓರ್ವ ಶಿಕ್ಷಕಿಯನ್ನು ಕೂಡಾ ನಿಯೋಜನೆ ಮಾಡಲಾಗಿದ್ದು, ನಿತ್ಯ ತರಗತಿ ನಡೆಸುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೂ ಹಿನ್ನೆಡೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. ಜ್ಞಾನಾರ್ಜನೆ ಹೆಚ್ಚಿಸುವುದಲ್ಲದೇ ಮಕ್ಕಳ ದೈಹಿಕ ಆರೋಗ್ಯಕ್ಕಾಗಿ ವೀಕ್ಷಣಾಲಯದಲ್ಲಿ ಆಟವಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ವೀಕ್ಷಣಾಲಯದಲ್ಲಿ ಇರುವ ಮಕ್ಕಳ ನಡುವೆ ಸಂಘರ್ಷವುಂಟಾಗದಂತೆ ಸಿಬ್ಬಂದಿ ಮುತುವರ್ಜಿ ವಹಿಸುತಿದ್ದಾರೆ‌.

ಆಹಾರ ವ್ಯವಸ್ಥೆ:

ಉಪಹಾರ ಸೇರಿ ದಿನಕ್ಕೆ ಮೂರು ಹೊತ್ತು ಗುಣಮಟ್ಟದ ಆಹಾರ, ಪ್ರತಿ ಭಾನುವಾರದಂದು ಮಾಂಸದೂಟ, ಹಬ್ಬ ಹರಿದಿನಗಳಲ್ಲಿ ವಿಶೇಷ ಭೋಜನವನ್ನು ಮಕ್ಕಳಿಗೆ ಒದಗಿಸಲಾಗುತ್ತಿದೆ.

ಮಕ್ಕಳು ಪರಾರಿಯಾದ ಹಲವು ಪ್ರಕರಣಗಳು:

ಇಷ್ಟೆಲ್ಲ ಅನುಕೂಲ ಕಲ್ಪಿಸಿ ಇಲ್ಲಿನ ಮಕ್ಕಳ ಮನಸ್ಥಿತಿ ಸರಿಪಡಿಸಲು ಪ್ರಯತ್ನಿಸಿದರೂ ಕೂಡ ಸಿಬ್ಬಂದಿಗೆ ಚಳ್ಳೇ ಹಣ್ಣು ತಿನ್ನಿಸಿ ಮಕ್ಕಳು ವೀಕ್ಷಣಾಲಯದಿಂದ ಪರಾರಿಯಾದ ಹಲವು ಪ್ರಕರಣಗಳು ನಡೆದಿವೆ‌. ತೀರಾ ಇತ್ತೀಚೆಗೆ ಬಾಲಕರಿಬ್ಬರು ತಪ್ಪಿಸಿಕೊಂಡು ಹೋಗಿದ್ದ ಘಟನೆ ನಡೆದಿದ್ದು, ಬಳಿಕ ಪೊಲೀಸರ ಸಹಾಯದಿಂದ ಮರಳಿ ಕರೆ ತರಲಾಗಿದೆ.

ವೀಕ್ಷಣಾಲಯದ ಸಿಬ್ಬಂದಿ:

ವೀಕ್ಷಣಾಲಯದಲ್ಲಿ ಕಾವಲುಗಾರರು, ಅಡುಗೆ ಮಾಡುವವರು, ಕೌನ್ಸಿಲರ್ ಸೇರಿ 11 ಸಿಬ್ಬಂದಿಯಿದ್ದು, ಇವರಲ್ಲಿ ನಾಲ್ವರು ಮಾತ್ರ ಸರ್ಕಾರಿ ನೌಕರರಾಗಿದ್ದಾರೆ. ಇನ್ನುಳಿದವರು ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ಹೊರ ಗುತ್ತಿಗೆಗೆ ಬದಲಾಗಿ ಗುತ್ತಿಗೆ ಅಥವಾ ಖಾಯಂ ನೌಕರದಾರನ್ನು ನೇಮಕ ಮಾಡಿದರೆ ವೀಕ್ಷಣಾಲಯ ಮತ್ತಷ್ಟು ಪರಿಣಾಮಕಾರಿಯಾಗಲಿದೆ.

ಜೊತೆಗೆ ಮಕ್ಕಳು ತಾವು ಮಾಡಿದ ತಪ್ಪು ತಿದ್ದಿಕೊಂಡು ಪುನರ್ವಸತಿಗೆ ಅನಕೂಲವಾಗುವಂತೆ ಮತ್ತು ಅವರು ಸ್ವಾವಲಂಬಿ ಬದುಕು ನಡೆಸಲು ಅನುಕೂಲವಾಗುವಂತೆ ಹೆಚ್ಚೆಚ್ಚು ತರಬೇತಿ ನಡೆಸುವ ಅಗತ್ಯವಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.