ETV Bharat / state

ಹಣಕಾಸು ವಿಷಯಕ್ಕೆ ಗಲಾಟೆ: ಸ್ನೇಹಿತನನ್ನೇ ಅಪಹರಿಸಿ ಕೊಲೆ ಮಾಡಿದ ದುಷ್ಕರ್ಮಿಗಳು

ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತರೇ ಅಪಹರಿಸಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆಯ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗೌಸುದ್ದೀನ್​‌ (42) ಕೊಲೆಯಾದ ವ್ಯಕ್ತಿ.

kalburgi
ಗೌಸೋದ್ದಿನ್‌
author img

By

Published : Oct 31, 2020, 3:16 PM IST

Updated : Oct 31, 2020, 3:33 PM IST

ಕಲಬುರಗಿ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಸ್ನೇಹಿತನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ರೋಜಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಡಿಸಿಪಿ ಕಿಶೋರ್ ಬಾಬು ..

ನಗರದ ಯಾದುಲ್ಲಾ ಕಾಲೋನಿ ನಿವಾಸಿ ಗೌಸುದ್ದೀನ್‌ (42) ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತರಾದ ಫಯಾಜ್, ನಿಜಾಮ್ ಮತ್ತು ವಾಜಿದ್ ಎಂಬುವವರನ್ನ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಮೃತ ಗೌಸುದ್ದೀನ್​ ಹಾಗೂ ಈ ಮೂವರು ಆರೋಪಿಗಳು ಸ್ನೇಹಿತರಾಗಿದ್ದು, ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಮಾರಾಟ ಮಾಡುತ್ತಿದ್ದರು. ಈ ನಡುವೆ ಅ. 22 ರಂದು ಗೌಸುದ್ದೀನ್​​​​ ನಾಪತ್ತೆಯಾಗಿದ್ದ. ನಿನ್ನೆ ಬೆಣ್ಣೆತೋರಾ ನದಿಯ ಕುರಿಕೋಟಾ ಬ್ರೀಡ್ಜ್‌ನಲ್ಲಿ ಆತನ ಶವ ಪತ್ತೆಯಾಗಿದೆ.

ಅನುಮಾನದ ಮೇಲೆ ಫಯಾಜ್, ನಿಜಾಮ್ ಮತ್ತು ವಾಜಿದ್ ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ, ಗೌಸುದ್ದೀನ್​ 2 ಲಕ್ಷ ರೂಪಾಯಿ ಆರೋಪಿ ಫಯಾಜ್​ಗೆ ನೀಡಬೇಕಾಗಿತ್ತು. ಇದೇ ವಿಷಯಕ್ಕೆ ಸ್ನೇಹಿತರ ಮಧ್ಯೆ ಗಲಾಟೆಯಾಗಿದ್ದು, ಊಟದ ನೆಪದಲ್ಲಿ ಆತನನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಬಳಿಕ ಕುರಿಕೋಟ ಬ್ರೀಡ್ಜ್‌ನಲ್ಲಿ ಶವ ಬಿಸಾಡಿ ಬಂದಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.

ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಕಿಶೋರ್ ಬಾಬು ತಿಳಿಸಿದ್ದಾರೆ.

Last Updated : Oct 31, 2020, 3:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.