ಕಲಬುರಗಿ: ಬಸ್ ಕಂಡಕ್ಟರ್ನಿಂದ ಲಂಚ ಪಡೆಯುತ್ತಿದ್ದ ಎನ್ಈಕೆಎಸ್ಆರ್‌ಟಿಸಿ ಇಲಾಖೆಯ ಎಫ್‌ಡಿಎ ಅಧಿಕಾರಿ ಮತ್ತು ಅಟೆಂಡರ್ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾರೆ.
ನಗರದ ಎನ್ಈಕೆಎಸ್ಆರ್‌ಟಿಸಿ ಡಿಪೋ ನಂಬರ್ 1ರಲ್ಲಿ ಎಫ್‌ಡಿಎ ಅಧಿಕಾರಿ ಅಖಿಲ್ ಮತ್ತು ಅಟೆಂಡರ್ ಮುನ್ನಾಭಾಯಿ ಎಸಿಬಿ ಬಲೆಗೆ ಬಿದ್ದ ಸಿಬ್ಬಂದಿ. ನಿರ್ವಾಹಕ ವಿದ್ಯಾಧರ ಎನ್ನುವವರಿಂದ 25 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ವಿದ್ಯಾಧರ ಚಿಂಚೋಳಿ ಬಸ್ ಡಿಪೋದ ಕಂಡಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕುಟುಂಬದವರ ಆರೋಗ್ಯ ಸಮಸ್ಯೆ ನಿಮಿತ್ತ 13 ತಿಂಗಳು ರಜೆ ಹಾಕಿದ್ದರು. ಈ ರಜೆಯ ಪ್ರಕರಣ ರದ್ದಿಗೆ ಹಾಗೂ ಸಂಬಳ ಸೆಟ್ಲಮೆಂಟ್ ಮಾಡಿರುವ ಹಿನ್ನೆಲೆಯಲ್ಲಿ ಸುಮಾರು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕಚೇರಿಯಲ್ಲಿ ವಿದ್ಯಾಧರ ಅವರಿಂದ 25 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಡಿವೈಎಸ್ಪಿ ಸುಧಾ ಆದಿ ಅವರ ನೇತೃತ್ವದಲ್ಲಿ ದಾಳಿ ಮಾಡಿ ಲಂಚಕೋರ ಸಿಬ್ಬಂದಿಯನ್ನು ಖೆಡ್ಡಾಗೆ ಕೆಡವಿದ್ದಾರೆ.