ETV Bharat / state

ಕಾರಿನಲ್ಲಿ ಗಾಂಜಾ ಸಾಗಾಟ: ಓರ್ವನ ಬಂಧನ - ಗಾಂಜಾ ಸಾಗಾಟ

ಬೀದರ್ ಜಿಲ್ಲೆಯ ಹುಮನಾಬಾದ್‌ನಿಂದ ಕಲಬುರಗಿ ಕಡೆಗೆ ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಕಲಬುರಗಿ ಕ್ರೈಂ ಬ್ರ್ಯಾಂಚ್ ಠಾಣೆಯ ಸಿಪಿಐ ಸೋಮಲಿಂಗ ಕಿರದಳ್ಳಿ ಬಂಧಿಸಿದ್ದಾರೆ.

A Man arrested for smuggling marijuana
ಕಾರಿನಲ್ಲಿ ಅಕ್ರಮ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿ ಬಂಧನ
author img

By

Published : Mar 29, 2021, 12:17 PM IST

ಕಲಬುರಗಿ: ಕಾರಿನಲ್ಲಿ ಅಕ್ರಮವಾಗಿ ಗಾಂಜಾ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಕಲಬುರಗಿ ಕ್ರೈಂ ಬ್ರ್ಯಾಂಚ್ ಪೊಲೀಸರು ಬಂಧಿಸಿದ್ದಾರೆ.

ಕಾರಿನಲ್ಲಿ ಅಕ್ರಮ ಗಾಂಜಾ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಕಡಗಂಚಿ ಮೂಲದ ಮಲ್ಲಿಕಾರ್ಜುನ (34) ಬಂಧಿತ ಆರೋಪಿ. ಈತ ಬೀದರ್ ಜಿಲ್ಲೆಯ ಹುಮನಾಬಾದ್‌ನಿಂದ ಕಲಬುರಗಿ ಕಡೆಗೆ ಕಾರಿನಲ್ಲಿ ಗಾಂಜಾ ಸಾಗಿಸುತ್ತಿರುವಾಗ ಕಮಲಾಪುರ ಪಟ್ಟಣದ ಬಳಿ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದಾನೆ. ಕಲಬುರಗಿ ಕ್ರೈಂ ಬ್ರ್ಯಾಂಚ್​ ಠಾಣೆ ಸಿಪಿಐ ಸೋಮಲಿಂಗ ಕಿರದಳ್ಳಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಆರೋಪಿಯಿಂದ 1 ಲಕ್ಷ 14 ಸಾವಿರ ರೂಪಾಯಿ ಮೌಲ್ಯದ 38 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದು, ವಿಚಾರಣೆ ಮುಂದುವರೆದಿದೆ.

ಓದಿ: ಸಿಡಿ ಪ್ರಕರಣ:ಮಾಜಿ ಶಾಸಕ ನಾಗರಾಜ್, ವಕೀಲರ ಜೊತೆ ವಿಚಾರಣೆಗೆ ಆಗಮಿಸಿದ ಜಾರಕಿಹೊಳಿ​​

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.