ETV Bharat / state

ಶಾಲೆಯಲ್ಲಿ ವ್ಯಾಕ್ಸಿನ್ ಪಡೆದ ನಂತರ ಬಾಲಕ ಸಾವು.. ಕಲಬುರಗಿಯಲ್ಲಿ ಪೋಷಕರ ಆರೋಪ

author img

By

Published : Dec 13, 2022, 6:57 AM IST

ಮೆದುಳು ಜ್ವರ ತಡೆಯಲು ಶಾಲೆಯಲ್ಲಿ ನೀಡಲಾಗುತ್ತಿದ್ದ ವ್ಯಾಕ್ಸಿನ್​ ಪಡೆದಿದ್ದ 9 ವರ್ಷದ ಬಾಲಕ ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದಾನೆ. ಇದಕ್ಕೆ ಬೇಜವಾಬ್ದಾರಿಯೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

Kn_klb
ಮೃತ ಬಾಲಕ

ಕಲಬುರಗಿ: ಮಕ್ಕಳಿಗೆ ಮಾರಕವಾಗಿ ಕಾಡುವ ಮೆದುಳು ಜ್ವರ ತಡೆಗಾಗಿ ರಾಜ್ಯದಲ್ಲಿ ಶಾಲಾ ಮಕ್ಕಳಿಗೆ ಜಪಾನೀಸ್ ಎನ್ಸೆಫಾಲಿಟಿಸ್ (ಜೆಇ) ವ್ಯಾಕ್ಸಿನ್ ಕೊಡಲಾಗುತ್ತಿದೆ. ಅದರಂತೆ ಕಲಬುರಗಿಯಲ್ಲಿಯೂ ವಾಕ್ಸಿನ್ ನೀಡಲಾಗ್ತಿದ್ದು, ಹೀಗೆ ವ್ಯಾಕ್ಸಿನ್ ಪಡೆದ ಬಾಲಕನೋರ್ವ ತೀವ್ರ ಜ್ವರದಿಂದ ಬಳಲಿ ಮೃತಪಟ್ಟಿದ್ದಾನೆಂಬ ಆರೋಪ ಕೇಳಿ ಬಂದಿದೆ.

ಕಲಬುರಗಿಯ ಹೀರಾಪೂರ ಬಡಾವಣೆಯ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದ 9 ವರ್ಷದ ಬಾಲಕ ಆಕಾಶ ಎಂಬಾತ ತೀವ್ರ ಜ್ವರಕ್ಕೆ ಬಲಿಯಾಗಿದ್ದಾನೆ. ಬಾಲಕನ ಸಾವಿಗೆ ಜೆಇ ವಾಕ್ಸಿನ್ ಕಾರಣ ಎಂದು‌ ಪೊಷಕರು ದೂರಿದ್ದಾರೆ. ಆಕಾಶ ಓದುತ್ತಿದ್ದ ಹೀರಾಪುರ ಸರ್ಕಾರಿ ಶಾಲೆಯಲ್ಲಿ ಕಳೆದ ಡಿ.5 ರಂದು ಮಕ್ಕಳಿಗೆ ಜೆಇ ವ್ಯಾಕ್ಸಿನ್ ನೀಡಲಾಗಿತ್ತು.‌ ಅಂದು ಆಕಾಶನಿಗೂ ಕೂಡಾ ವಾಕ್ಸಿನ್ ಹಾಕಲಾಗಿತ್ತು. ಎರಡು ದಿನಗಳ ನಂತರ ಆಕಾಶನಿಗೆ ಜ್ವರ ಕಾಣಿಸಿಕೊಂಡಿತ್ತು.

ಬಳಿಕ ಡಿ.9 ರಂದು ವಿಪರೀತ ಜ್ವರದಿಂದ ಬಳಲಿದ ಆಕಾಶನನ್ನು ನಗರದ ಸಂಗಮೇಶ್ವರ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ.‌ ಮುಂಚೆ ಆರೋಗ್ಯವಾಗಿದ್ದ ಬಾಲಕ ವ್ಯಾಕ್ಸಿನ್ ಕೊಟ್ಟ ಬಳಿಕ ಜ್ವರಕ್ಕೆ ಬಲಿಯಾಗಿದ್ದಾನೆ‌. ಇದಕ್ಕೆ ಜೆಇ ವ್ಯಾಕ್ಸಿನ್ ಕಾರಣ, ಇದರಲ್ಲಿ ಆರೋಗ್ಯ ಅಧಿಕಾರಿ ಸಿಬ್ಬಂದಿ ಬೇಜವಾಬ್ದಾರಿಯೇ ಕಾರಣ ಎಂದು ಪೊಷಕರು ಹಾಗೂ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರೋಪ ತಳ್ಳಿಹಾಕಿದ ಆರೋಗ್ಯಾಧಿಕಾರಿ.. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ರಾಜಶೇಖರ ಮಾಲಿ ಅವರನ್ನು ಕೇಳಿದ್ರೆ.., ಬಾಲಕನ ಸಾವು ಜೆಇ ವ್ಯಾಕ್ಸಿನ್‌ದಿಂದ ಆಗಿದ್ದಲ್ಲ ಎಂದಿದ್ದಾರೆ. ಜಿಲ್ಲೆಯ ಹಲವೆಡೆ ವ್ಯಾಕ್ಸಿನ್ ಕಾರ್ಯ ಸುಗಮವಾಗಿ ಸಾಗಿದೆ. ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ, ಬಾಲಕ ಆಕಾಶ ಕೂಡಾ ವ್ಯಾಕ್ಸಿನ್ ಪಡೆದು ಆರೋಗ್ಯವಾಗಿದ್ದ. ಎರಡು ದಿನಗಳ ನಂತರ ಜ್ವರ ಕಾಣಿಸಿಕೊಂಡಿದೆ. ಬಳಿಕ ಡಿ.9 ರಂದು ತೀವ್ರ ಜ್ವರದಿಂದ ಬಳಲಿದ್ದಾನೆ. ಜ್ವರ ಹೆಚ್ಚಾಗಿ ಆಸ್ಪತ್ರೆಗೆ ಕರೆದೊಯ್ಯವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಬಾಲಕನ ಸಾವಿನ ವಿಷಯ ತಿಳಿದು ಸ್ಥಳಕ್ಕೆ ಎಕ್ಸಪರ್ಟ್ ಟಿಂ ಜೊತೆ ನಾನು ಸಹ ಭೇಟಿ ನೀಡಿ ಕೂಲಂಕಶವಾಗಿ ಪರೀಶಿಲನೆ ಮಾಡಿದ್ದೇನೆ. ಜೆಇ ವ್ಯಾಕ್ಸಿನ್ ನಿಂದ ಬಾಲಕನ ಸಾವು ಸಂಭವಿಸಿಲ್ಲ. ಇದೊಂದು ಮೆದುಳು ರೋಗ ತಡೆಯುವ ವ್ಯಾಕ್ಸಿನ್‌ನಾಗಿದ್ದು, ಮಕ್ಕಳ ಜೀವಕ್ಕೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮೊದಲ ಝಿಕಾ ವೈರಸ್​ ಪ್ರಕರಣ ದೃಢ: ಆತಂಕ ಬೇಡ ಎಂದ ಆರೋಗ್ಯ ಸಚಿವರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.