ಕಲಬುರಗಿ: ಬ್ರಿಟನ್ನಿಂದ ಜಿಲ್ಲೆಗೆ ವಾಪಸಾದ ಎಲ್ಲರ ಕೊರೊನಾ ವರದಿ ನೆಗೆಟಿವ್ ಎಂದು ಬಂದಿದ್ದು, ಜಿಲ್ಲೆಯ ಜನತೆ ನಿರಾಳರಾಗುವಂತೆ ಮಾಡಿದೆ.
ಬ್ರಿಟನ್ನಿಂದ ಕಲಬುರಗಿಗೆ ಏಳು ಜನ ಬಂದಿದ್ದು, ಇವರ ಪೈಕಿ ಐವರು ಕಲಬುರಗಿಯಲ್ಲಿ, ಇಬ್ಬರು ಬೀದರ್ಗೆ ಹೋಗಿದ್ದಾರೆ. ಆರೋಗ್ಯ ಇಲಾಖೆ ಬ್ರಿಟನ್ನಿಂದ ಬಂದ ಐವರ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಿಕೊಟ್ಟಿದೆ. ಐವರ ಜೊತೆ ಅವರ ಸಂಪರ್ಕಕ್ಕೆ ಬಂದವರೂ ಸೇರಿ ಒಟ್ಟು 16 ಜನರ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಿಸಿದ್ದ ಆರೋಗ್ಯ ಇಲಾಖೆ, ಎಲ್ಲರ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದೆ.
ಓದಿ:ಕಲಬುರಗಿ: ಬ್ರಿಟನ್ನಿಂದ ಬಂದವರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾ
ಹೀಗಾಗಿ ಇಡೀ ಜಿಲ್ಲೆಯಲ್ಲಿ ಉಂಟಾಗಿದ್ದ ಭಯ ದೂರವಾದಂತಾಗಿದೆ. ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿದ್ದು, ಯಾರೂ ಭಯ ಪಡೋ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಶೇಖರ ಮಾಲಿ ಮಾಹಿತಿ ನೀಡಿದ್ದಾರೆ.