ಸೇಡಂ: ಕೊರೊನಾ ಮಹಾಮಾರಿ ವ್ಯಾಪಿಸುವ ಹಿನ್ನೆಲೆಯಲ್ಲಿ ದೇಶವನ್ನೇ ಲಾಕ್ಡೌನ್ ಮಾಡಲಾಗಿದೆ. ಆದರೆ ಇದಕ್ಕೆ ಸ್ಪಂದಿಸದೆ ಅನವಶ್ಯಕವಾಗಿ ತಿರುಗಾಡುತ್ತಿದ್ದ 50 ಮಂದಿಯ ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ.
ಬೆಳಗ್ಗೆಯಿಂದ ಪಿಎಸ್ಐ ಸುಶೀಲಕುಮಾರ ಕಾರ್ಯಾಚರಣೆ ನಡೆಸಿ ಬೇಕಾಬಿಟ್ಟಿ ಪಟ್ಟಣದಲ್ಲಿ ತಿರುಗಾಡುತ್ತಿದ್ದರ ಬೈಕ್ಗಳನ್ನು ಜಪ್ತಿ ಮಾಡಿದ್ದಾರೆ. ಅನವಶ್ಯಕವಾಗಿ ಪಟ್ಟಣದಲ್ಲಿ ರಸ್ತೆಗಳಲ್ಲಿ ಸುತ್ತಾಡುತ್ತಿದ್ದವರ ಬೈಕ್ಗಳನ್ನು ವಶಕ್ಕೆ ಪಡೆದಿರುದಾಗಿ ತಿಳಿಸಿದ್ದಾರೆ.